ಫ್ರಾನ್ಸ್‌ನಲ್ಲಿ ಕಾಣಿಸಿಕೊಂಡ ಹೊಸ ಕೊರೊನಾ ತಳಿ

ಪ್ಯಾರಿಸ್ ಜ 4 :  ದೇಶಾದ್ಯಂತ ಒಮಿಕ್ರಾನ್‌ ಮತ್ತು ಕೊರೊನಾಗೆ ಜನರು ಜನರು ತತ್ತರಿಸಿಕೊಂಡು ಹೋಗುತ್ತಿರುವ ಹಿನ್ನಲೆಯಲ್ಲಿ ಫ್ರಾನ್ಸ್‌ನಲ್ಲಿ ಹೊಸ ರೂಪಾಂತರಿ ಕಾಣಿಸಿಕೊಂಡಿದ್ದು B16402 ತಳಿ ಸೋಂಕಿಗೆ IHU ಎಂದು ಹೆಸರು ನೀಡಲಾಗಿದೆ. ಈ ವೈರಸ್ ಅನ್ನು ಐಎಚ್‌ಯು ಮೆಡಿಟರೇನಿ ಇನ್‌ಫೆಕ್ಷನ್ ಸಂಸ್ಥೆಯ ತಜ್ಞರು ಕಂಡುಹಿಡಿದಿದ್ದಾರೆ. ಇದು ಒಮಿಕ್ರಾನ್‌ಗಿಂತಲೂ ಅಧಿಕ, ಅಂದರೆ 46 ರೂಪಾಂತರಗಳನ್ನು ಹೊಂದಿದೆ. ಅಲ್ಲದೆ, ಲಸಿಕೆಯ ವಿರುದ್ಧ ಮತ್ತಷ್ಟು ಪ್ರಭಾವಶಾಲಿಯಾಗಿದೆ. ಜತೆಗೆ ಹೆಚ್ಚು ಪ್ರಸರಣ ಶಕ್ತಿ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.

ಮರ್ಸೀಲ್ಲೆಸ್ ಸಮೀಪ ಹೊಸ ತಳಿ ವೈರಸ್‌ನ ಕನಿಷ್ಠ 12 ಪ್ರಕರಣಗಳು ಪತ್ತೆಯಾಗಿವೆ. ಈ ಎಲ್ಲ ಸೋಂಕಿತರು ಆಫ್ರಿಕಾದ ಕ್ಯಾಮರೂನ್ ದೇಶದಿಂದ ಪ್ರಯಾಣ ಮಾಡಿದ್ದವರಾಗಿದ್ದಾರೆ ಎಂದು ಹೇಳಿದ್ದಾರೆ. ಓಮಿಕ್ರಾನ್ ಜಗತ್ತಿನ ಬಹುತೇಕ ದೇಶಗಳಲ್ಲಿ ಹೆಚ್ಚು ಪ್ರಭಾವಶಾಲಿಯಾಗಿ ಹರಡುತ್ತಿದೆ. ಅದರ ಮಧ್ಯೆ ಐಎಚ್‌ಯು ತಳಿಯ ಭೀತಿ ಕೂಡ ಹೆಚ್ಚುತ್ತಿದೆ.B.1.640.2 ತಳಿ ಸೋಂಕು ಬೇರೆ ದೇಶಗಳಲ್ಲಿ ಕಂಡುಬಂದಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಇದರ ಬಗ್ಗೆ ತನಿಖೆಗೆ ಒಳಪಡಿಸುವಷ್ಟು ಗಂಭೀರವಾಗಿ ಇನ್ನೂ ಪರಿಗಣಿಸಿಲ್ಲ. ಮೆಡ್‌ರಿಕ್ಸಿವ್ ಪತ್ರಿಕೆಯಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದೆ.

‘N501Y ಮತ್ತು E484K ಸೇರಿದಂತೆ 14 ಅಮಿನೋ ಆಸಿಡ್ ಪರ್ಯಾಯಗಳು ಹಾಗೂ 9 ರೂಪಾಂತರಗಳು ಸ್ಪೈಕ್ ಪ್ರೋಟೀನ್‌ನಲ್ಲಿ ಪತ್ತೆಯಾಗಿವೆ. ಈ ವಂಶವಾಹಿ ಮಾದರಿಯು B.1.640.2 ಎಂಬ ಹೊಸ ಸಂತತಿಯನ್ನು ಸೃಷ್ಟಿಸಲು ಕಾರಣವಾಗಿದೆ. ಇದು ಹಳೆಯ B.1.640 ಸಂತತಿಯ ಸೋದರ ಸಮೂಹವಾಗಿದೆ’ ಎಂದು ಸಂಶೋಧನಾ ಪತ್ರಿಕೆ ತಿಳಿಸಿದೆ ಎಂದು ವರದಿಯಾಗಿದೆ.

Exit mobile version