ಕೊರೋನಾ 3ನೇ ಅಲೆ ಬೀತಿ; ಹಿಂದಿನ ಎರಡು ಅಲೆಗಳಿಗಿಂತ ಸಣ್ಣದಾಗಿರಲಿದೆ ಎಂದ ಸಂಶೋಧನೆ

ನವದೆಹಲಿ, ಅ. 02: ಭಾರತದಲ್ಲಿ ಕೋವಿಡ್ ೧೯ ಸೊಂಕಿತರ ಸಂಖ್ಯೆಯು ಬರುವ ಅಕ್ಟೋಬರ್ ನಲ್ಲಿ ಪೀಕ್ ಗೆ ತಲುಪುವ ಸಾಧ್ಯತೆಯಿದೆ ಎಂದು ಗಣಿತ ಸಂಶೋಧಕರ ಮಾಡೆಲ್ ಒಂದರ ಮುಖಾಂತರ ತಿಳಿದು ಬಂದಿದೆ. ಇದೇ ಮಾಡೆಲ್ ಕಳೆದ ಬಾರಿ 2ನೇ ಅಲೆಯ ಭೀಕರತೆಯನ್ನು ಅಂದಾಜಿಸಿತ್ತು, ಅದು ನಿಜವೂ ಆಗಿತ್ತು.

ದೇಶದಲ್ಲಿ ಸೋಂಕಿನ ಪ್ರಮಾಣ ಈ ತಿಂಗಳಿನಿಂದಲೇ ಹೆಚ್ಚಾಗಲಿದ್ದು, ಮುಂದಿನ ಅಲೆಯ ಪೀಕ್‌ನಲ್ಲಿ ದೇಶಾದ್ಯಂತ ಕನಿಷ್ಟ 1 ಲಕ್ಷ ಕೇಸ್ ಗಳು, ಹಾಗು ಗರಿಷ್ಟ 1.5 ಲಕ್ಷದಷ್ಟು ಪ್ರಕರಣಗಳು ಪತ್ತೆಯಾಗಲಿವೆ ಎಂದು ಊಹಿಸಲಾಗಿದೆ. ಈ ವರದಿಯನ್ನು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹೈದರಾಬಾದ್ ಮತ್ತು ಕಾನ್ಪುರ್‌ನ ಮಾಥುಕುಮಲ್ಲಿ ವಿದ್ಯಾಸಾಗರ್ ಮತ್ತು ಮಹಿಂದ್ರಾ ಅಗರ್ವಾಲ್ ನೇತ್ರತ್ವದ ತಂಡ ತಯಾರಿಸಿದೆ.

ಕೇರಳ ಮತ್ತು ಮಹಾರಾಷ್ಟ್ರದಂತಹ ಸೋಂಕು ಪ್ರಮಾಣ ಹೆಚ್ಚಿರುವ ರಾಜ್ಯಗಳಿಂದಾಗಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ ಎಂದು ವಿದ್ಯಾಸಾಗರ್ ರವರು ಬ್ಲೂಂಬರ್ಗ್ ತಿಳಿಸಿದ್ದಾರೆ. 2ನೇ ಅಲೆಯಲ್ಲಿ ದಿನಕ್ಕೆ ಗರಿಷ್ಟ 4 ಲಕ್ಷದಷ್ಟು ಪ್ರಕರಣಗಳು ಪತ್ತೆಯಾಗುತ್ತಿದ್ದವು, ಇದು ಮೇ 7ರ ನಂತರ ಗಣನೀಯವಾಗಿ ಇಳಿಕೆಯಾಗಿತ್ತು. ಆದರೆ ಮುಂಬರುವ ಅಲೆ ಕಳೆದ 2ನೇ ಅಲೆಗಿಂತ ಬಹಳಷ್ಟು ಸಣ್ಣದಾಗಿರಲಿದ್ದರೂ ಕೂಡ ಭಾರತದಲ್ಲಿ ತಯಾರಿಗಳನ್ನು ಇನ್ನಷ್ಟು ಬಲಪಡಿಸಬೇಕಿದೆ. ಇದರಲ್ಲಿ ವ್ಯಾಕ್ಸಿನ್ ಆಂದೋಲನದ ವೇಗ ಹೆಚ್ಚಿಸುವುದು, ಹೊಸದಾಗಿ ಹಾಟ್ ಸ್ಪಾಟ್ ಗಳು ಹೊರಹೊಮ್ಮದಂತೆ ಎಚ್ಚರ ವಹಿಸುವುದು, ಹಾಗೂ ಹೊಸ ವೈರಸ್ ತಳಿಗಳು ಹುಟ್ಟಿಕೊಳ್ಳದಂತೆ ನೋಡಿಕೊಳ್ಳುವುದೂ ಶಾಮೀಲಾಗಿದೆ ಎಂದು ತಿಳಿಸಿದರು.

ಸದ್ಯಕ್ಕೆ ಡೆಲ್ಟಾ ವೈರಸ್ ತಳಿ ಜಗತ್ತಿನಾದ್ಯಂತ 2ನೇ ಅಲೆಗೆ ಕಾರಣವಾಗಿದ್ದು, ಅದು ಭಾರತದಲ್ಲಿ  ಮೊಟ್ಟಮೊದಲಿಗೆ ಕಳೆದ ಅಕ್ಟೋಬರ್ ನಲ್ಲಿ, ಪತ್ತೆಯಾಗಿತ್ತು ಎಂದು ಉಲ್ಲೇಖಿಸಿದ್ದಾರೆ.

Exit mobile version