Visit Channel

2 ವಾರಗಳ ಕಾಲ ಟಫ್ ರೂಲ್ಸ್‌ ಜಾರಿ

ಬೆಂಗಳೂರು ಜ 4 : ರಾಜ್ಯಾದ್ಯಂತ ಒಮಿಕ್ರಾನ್‌ ಮತ್ತು ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ 2 ವಾರಗಳ ಕಾಲ ಟಫ್ ರೂಲ್ಸ್‌ ಜಾರಿಗೊಳಿಸಲಾಗಿದೆ. ತಜ್ಞರ ಜೊತೆ ಚರ್ಚಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಕಟ್ಟು ನಿಟ್ಟಿನ ಆದೇಶದ ಬಗ್ಗೆ ಮಾಹಿತಿ ನೀಡಿದರು

ಟಫ್ ರೂಲ್ಸ್‌ನಲ್ಲೇನಿದೆ

  • ರಾಜ್ಯದಲ್ಲಿ ನೈಟ್‌ಕರ್ಫ್ಯೂ ಮುಂದುವರಿಕೆ
  • ಬುಧವಾರ ರಾತ್ರಿ 10 ಗಂಟೆಯಿಂದ ಹೊಸ ಕರೋನಾ ರೂಲ್ಸ್ ಜಾರಿ
  • 10 ಮತ್ತು 12ನೇ ತರಗತಿ ಹೊರತುಪಡಿಸಿ ಉಳಿದೆಲ್ಲಾ ತರಗತಿಗಳು ಬಂದ್. ಆನ್‌ಲೈನ್ ತರಗತಿ ನಡೆಸಲು ಸೂಚನೆ.
  • ಮುಂದಿನ ಎರಡು ವಾರಗಳ ಕಾಲ ಶುಕ್ರವಾರ ರಾತ್ರಿ 10 ರಿಂದ ಸೋಮವಾರ ಬೆಳಗ್ಗೆ 5 ರವರಗೆ ವೀಕೆಂಡ್ ಕರ್ಪ್ಯೂ ಜಾರಿ. ಆಹಾರ, ಹಾಲು, ಔಷಧಿ, ತರಕಾರಿ ಅಗತ್ಯ ವಸ್ತುಗಳಿಗೆ ಮತ್ತು ಹೋಟೆಲ್ ಪಾರ್ಸೆಲ್ ವ್ಯವಸ್ಥೆಗೆ ಅವಕಾಶ.
  • ಸದ್ಯದಲ್ಲೆ ಮೆಟ್ರೋ, ಬಿಎಂಟಿಸಿ ಬಸ್‌ಗಳ ಪ್ರಯಾಣಕ್ಕೆ ಪ್ರತ್ಯೇಕ ಮಾರ್ಗಸೂಚಿ ಪ್ರಕಟ.
  • ಚಿತ್ರ ಮಂದಿರ ಪಬ್, ಮಾಲ್, ಬಾರ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಶೇ. 50 ರಷ್ಟು ಅನುಮತಿ. ಎರಡು ಡೋಸ್ ಪಡೆದಿರುವವರಿಗೆ ಮಾತ್ರ ಅವಕಾಶ.
  • ರ್ಯಾಲಿ ಪ್ರತಿಭಟನೆಗೆ ಅವಕಾಶವಿಲ್ಲ
  • ಮದುವೆ ಹೊರಾಂಗಣದಲ್ಲಿ ನಡೆ ದರೆ 200 ಮಂದಿಗೆ, ಒಳಾಂಗಣ ಮದುವೆಗೆ 100 ಜನಕ್ಕೆ ಮಾತ್ರ ಅವಕಾಶ. ಎರಡು ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಅವಕಾಶ.
  • ಮಹಾರಾಷ್ಟ್ರ, ಕೇರಳ, ಗೋವಾ, ದೆಹಲಿ ಮುಂತಾದ ರಾಜ್ಯಗಳಿಂದ ಬರುವ ಪ್ರಯಾಣಿಕರಿಗೆ ನೆಗಟಿವ್ ವರದಿ ಕಡ್ಡಾಯ.
  • ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ. ಪರೀಕ್ಷೆ ವರದಿ ಬರುವವರೆಗೆ ಹೋಟೆಲ್‌ಗಳಲ್ಲಿ ಕ್ಯಾರಂಟೈನ್

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.