ಸಾವಿನಲ್ಲಿಯೂ ದಾಖಲೆ ಬರೆದ ಕೊರೋನಾ: ಒಂದೇ ದಿನ 4187 ಮಂದಿ ಸಾವು

ದೆಹಲಿ, ಮೇ. 08: ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರುತ್ತಿದ್ದು, ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಇದೀಗ ಕಳೆದ 24ಗಂಟೆಯಲ್ಲಿ 4187 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, ಒಂದು ಹೊಸ ದಾಖಲೆ ಬರೆದಿದೆ. ಈ ಮೂಲಕ ದೇಶದಲ್ಲಿ ಕೊರೋನಾದಿಂದ ಪ್ರಾಣ ಕಳೆದುಕೊಂಡವರ ಸಂಖ್ಯೆ 2,38,270ಕ್ಕೆ ತಲುಪಿದೆ.

ಕಳೆದ 24 ಗಂಟೆಯಲ್ಲಿ ದೇಶದಲ್ಲಿ 4,01,078 ಪ್ರಕರಣ ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 2,18,92,676 ಆಗಿದೆ. ಇನ್ನು ಒಂದೇ ದಿನದಲ್ಲಿ 3,18,609 ಮಂದಿ ಆಸ್ಪತ್ರೆಯಿಂದ ಡಿಸ್​​ಚಾರ್ಜ್ ಆಗಿದ್ದು, ಈ ಮೂಲಕ ಕೊರೊನಾದಿಂದ ಚೇತರಿಸಿಕೊಂಡವರು ಸಂಖ್ಯೆ 1,79,30,960 ಆಗಿದೆ.

ಸದ್ಯ ಭಾರತದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳು 37,23,446 ಇದ್ದು, ಸೋಂಕಿನ ವಿರುದ್ಧ ಹೋರಾಟ ದಿನೇದಿನೇ ಕಷ್ಟವೇ ಆಗುತ್ತಿದೆ. ಒಂದೊಂದೇ ರಾಜ್ಯಗಳು ಲಾಕ್​ಡೌನ್ ಮೊರೆ ಹೋಗುತ್ತಿವೆ. ದೇಶಾದ್ಯಂತ ಆಕ್ಸಿಜನ್​, ಬೆಡ್​, ವೆಂಟಿಲೇಟರ್​, ಲಸಿಕೆ ಅಭಾವ ಬಹುದೊಡ್ಡ ಸವಾಲಾಗಿ ಕಾಡುತ್ತಿದೆ.

Exit mobile version