ಕೊರೊನಾ ಹಿನ್ನೆಲೆ : ಮೇ 15ರವರೆಗೆ ಮೈಸೂರು ವಿವಿ ಅಧ್ಯಯನ ಚಟುವಟಿಕೆ ಸ್ಥಗಿತ

ಮೈಸೂರು, ಏ. 23: ರಾಜ್ಯದಲ್ಲಿ ಕೋವಿಡ್ ಹೆಚ್ಚಳ ಹಿನ್ನೆಲೆ ಮೇ.15ರವರೆಗೆ ಮೈಸೂರು ವಿಶ್ವ ವಿದ್ಯಾನಿಲಯದ ಎಲ್ಲಾ ಅಧ್ಯಯನ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ.

ಮೇ 3ರ ನಂತರ ಆನ್ ಲೈನ್ ತರಗತಿಗೆ ಅವಕಾಶ ನೀಡಲಾಗಿದ್ದು,  ವಿದ್ಯಾರ್ಥಿನಿಲಯಗಳನ್ನು ಖಾಲಿ ಮಾಡುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದೆ. ರಜಾ ಅವಧಿ ಬಳಿಕ ವಿದ್ಯಾರ್ಥಿ ನಿಲಯಕ್ಕೆ ಬರುವ ವಿದ್ಯಾರ್ಥಿಗಳಿಗೆ ಆರ್ ಟಿಪಿಸಿಆರ್ ರಿಪೋರ್ಟ್‌ ಕಡ್ಡಾಯ ಮಾಡಿ ಮೈಸೂರು ವಿಶ್ವ ವಿದ್ಯಾನಿಲಯ ಸುತ್ತೋಲೆ ಹೊರಡಿಸಿದೆ.

ಘಟಿಕೋತ್ಸವ ದಿನಾಂಕ ವಿಸ್ತರಣೆ
101ನೇ ವಾರ್ಷಿಕ ಘಟಿಕೋತ್ಸವ ಸಂಬಂಧ ಪದವಿ ಪ್ರಮಾಣ ಪತ್ರಗಳಿಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಮೈಸೂರು ವಿಶ್ವ ವಿದ್ಯಾನಿಲಯ ವಿಸ್ತರಣೆ ಮಾಡಿದೆ. ಈ ಕುರಿತು ಆದೇಶ ಹೊರಡಿಸಿರುವ ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಪಿ ಜ್ಞಾನ ಪ್ರಕಾಶ್, ಕೋವಿಡ್-19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ 101ನೇ ವಾರ್ಷಿಕ ಘಟಿಕೋತ್ಸವವನ್ನು ಮುಂದೂಡಲಾಗಿದೆ.

ಮುಂದೆ ನಡೆಯುವ ಘಟಿಕೋತ್ಸವದಲ್ಲಿ ಪದವಿ ಪತ್ರಗಳನ್ನ ಪಡೆಯುವ ಸೆಪ್ಟಂಬರ್/ಅಕ್ಟೋಬರ್ 2021ರ ಮಾಹೆಯಲ್ಲಿ ತೇರ್ಗಡೆಯಾದ ಸ್ನಾತಕ ಮತ್ತು ಸ್ನಾತಕೋತ್ತರ ಹಾಗೂ ಪಿಹೆಚ್.ಡಿ ಪದವಿ ಪಡೆದ ಅರ್ಹ ಅಭ್ಯರ್ಥಿಗಳು ಪದವಿ ಪ್ರಮಾಣ ಪತ್ರಗಳಿಗಾಗಿ ನಿಗದಿತ ಶುಲ್ಕದೊಂದಿಗೆ 2 ಭಾವಚಿತ್ರ ಒಳಗೊಂಡಂತೆ ಅರ್ಜಿ ಸಲ್ಲಿಸಲು ಮುಂದಿನ ದಿನಾಂಕ ಸೂಚಿಸುವವವರೆಗೂ ಅವಧಿಯನ್ನ ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ.

Exit mobile version