ರಾಜ್ಯದಲ್ಲಿ ಕೊರೊನಾ ಕಂಟಕ: ಟಫ್ ರೂಲ್ಸ್ ಜಾರಿ ಅವಶ್ಯಕ: ಸಚಿವ ಸುಧಾಕರ್

ಬೆಂಗಳೂರು, ಏ. 20: ರಾಜ್ಯದಲ್ಲಿ ಮಹಾಮಾರಿ ಕೊರೊನಾ ಹರಡುವಿಕೆ ಉಲ್ಬಣಗೊಂಡಿದ್ದು, ಡ್ರಾಪ್ಲೆಟ್​ಗಳ‌ ಮೂಲಕವೂ ಸೋಂಕು ಹರಡುತ್ತೆ, ಇದಕ್ಕೆ ಕಡಿವಾಣ ಹಾಕಬೇಕಿದೆ. ಈ ನಿಟ್ಟಿನಲ್ಲಿ ಟಫ್ ರೂಲ್ಸ್ ಜಾರಿ ಮಾಡುವ ಅವಶ್ಯಕತೆ ಇದೆ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಹೇಳಿದರು.

ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಅವರು, ಇವತ್ತು ಸೋಂಕಿತರ ಪ್ರಮಾಣ ಹೆಚ್ಚಿದೆ. ಐಸಿಯು ಬೆಡ್ ಒದಗಿಸಲು ಆಗ್ತಿಲ್ಲ. ಹೀಗಾಗಿ ಪ್ರತಿಪಕ್ಷಗಳು ಹೇಳಿದ್ದನ್ನು ಅಲ್ಲಗಳೆಯಲ್ಲ. ಅದರೆ ಮುಂದುವರಿದ ದೇಶಗಳಲ್ಲೂ ಹೆಚ್ಚು ಸಾವುಗಳಾಗಿವೆ. ಅಲ್ಲಿನ ಸರ್ಕಾರಗಳು ವಿಫಲ ಅಂತ ಹೇಳಬಹುದಾ? ಇದು ಸಾಂಕ್ರಾಮಿಕ ರೋಗ, ಪರಿಶ್ರಮ ಹಾಕಿ ತಡೆಯಬೇಕು. ಸದ್ಯದ ಕ್ರಮಗಳು ಸಾಲೋದಿಲ್ಲ ಅಂತ ಒಪ್ತೇನೆ ಎಂದರು.

ಈ ಎಲ್ಲಾ ಕಾರಣಗಳಿಂದಾಗಿ ಬೆಂಗಳೂರಿಗೆ ಪ್ರತ್ಯೇಕ ನಿಯಮ ತರ್ತೇವೆ. ಅಲ್ಲದೇ ಕೋವಿಡ್ ಹೆಚ್ಚಿರುವ ಉಳಿದ ಜಿಲ್ಲೆಗಳಿಗೆ ಪ್ರತ್ಯೇಕ ನಿಯಮ ತರುತ್ತೇವೆ. ಇಂದು ರಾಜ್ಯಪಾಲರ ನೇತೃತ್ವದಲ್ಲಿ ಸಭೆ ನಡೆಯಲಿದ್ದು,
ಸಭೆಯಲ್ಲಿ ಕಠಿಣ ನಿಯಮಗಳ ಜಾರಿ ಬಗ್ಗೆ ನಿರ್ಧಾರಿಸುತ್ತೇವೆ. ಆದರೆ ವಿರೋಧ ಪಕ್ಷಗಳು ಸರ್ಕಾರದ ಬೆಂಬಲಕ್ಕೆ ನಿಲ್ಲಬೇಕಿದ್ದು, ಆರೋಪ ಪ್ರತ್ಯಾರೋಪ ಮಾಡೋದು ಸರಿಯಲ್ಲ ಎಂದು ತಿಳಿಸಿದರು.

ರಾತ್ರೋರಾತ್ರಿ ವೈದ್ಯರನ್ನು, ಆರೋಗ್ಯ ಕಾರ್ಯಕರ್ತರನ್ನು ಸೃಷ್ಟಿಸಲು ಆಗ. ಜನ ಗುಂಪು ಸೇರಬಾರದು, ಗುಂಪು ಸೇರೋದ್ರಿಂದಲೇ ಕೋವಿಡ್ ಬರ್ತಿರೋದು. ಕ್ಲೋಸ್ಡ್ ಸರ್ಕ್ಯೂಟ್​ನಲ್ಲಿ ಗುಂಪಿದ್ರೆ ಗಾಳಿ ಮೂಲಕವೂ ವೈರಸ್ ಹರಡುತ್ತೆ ಎಂದು ಸಚಿವ ಡಾ. ಸುಧಾಕರ್ ಸ್ಫೋಟಕ ಹೇಳಿಕೆ ನೀಡಿದರು.

Exit mobile version