ಕೊರೊನಾ ಸ್ಯಾಂಡಲ್ವುಡ್ ಹಿರಿಯ ನಟನ ಬಲಿ: ಶಂಖನಾದ ಅರವಿಂದ್ ಸಾವು

ಬೆಂಗಳೂರು, ಮೇ. 07: ಸ್ಯಾಂಡಲ್ ವುಡ್ ನ ಮತ್ತೊಬ್ಬ ಹಿರಿಯ ನಟ ಶಂಖನಾದ ಅರವಿಂದ್ ಕೊರೊನಾಗೆ ಬಲಿಯಾಗಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರ ಬಾಲ್ಯದ ಚಿತ್ರ ಬೆಟ್ಟದ ಹೂವು ಸಿನಿಮಾದಲ್ಲಿ ಉತ್ತಮ ನಟನೆಯಿಂದ ಅರವಿಂದ್ ಹೆಸರುವಾಸಿಯಾಗಿದ್ದರು. ಅಷ್ಟೆ ಅಲ್ಲದೆ ಶಂಕನಾದ ಸಿನಿಮಾ ಕೂಡ ಅರವಿಂದ್ ಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಈ ತನಕ ಅರವಿಂದ್ 250 ಸಿನಿಮಾಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ್ದರು.

ಶಂಕನಾದ ಅರವಿಂದ್ ಗೆ 70 ವರ್ಷ ವಯಸ್ಸಾಗಿತ್ತು. ಕೊರೊನಾ ಪಾಸಿಟಿವ್ ಬಂದ ಕಾರಣ ಶಂಕನಾದ ಅರವಿಂದ್ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಜನವರಿ 23ರಂದು ಶಂಕನಾದ ಅರವಿಂದ್ ಅವರ ಪತ್ನಿ ಮೃತಪಟ್ಟಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಉಸಿರಾಟದ ತೊಂದರೆಯಿಂದ ಶಂಕನಾದ ಅರವಿಂದ್ ಇಂದು ಮೃತಪಟ್ಟಿದ್ದಾರೆ.

Exit mobile version