ಮುದುಡಿ ಹೋಯ್ತು ಬದುಕು !

flower

ಕೋರೋನಾ ಹೊಡೆತಕ್ಕೆ ಹೂವಿನ ವ್ಯಾಪಾರಿಗಳ ಬದುಕೇ ಮುದುಡಿ ಹೋಗುತ್ತಿದೆ. ಅನೇಕರು ಈ ವ್ಯಾಪಾರವೇ ಬೇಡ ಅಂತ ಬೇರೆ ಉದ್ಯೋಗ ಅರಸಿ ಹೋಗುತ್ತಿದ್ದಾರೆ.

Corona spoiled the life of flower vendor. No future in this field curfew, lockdown spoiled our life.

ಮುದುಡಿ ಹೋಯ್ತು ಹೂವಿನ ವ್ಯಾಪಾರಿಗಳ ಬದುಕು, ಹೂವಿದ್ರೆ ವ್ಯಾಪಾರ ಇಲ್ಲ, ವ್ಯಾಪಾರ ಇದ್ರೆ ಹೂವಿಲ್ಲ, ಕರ್ಫ್ಯೂ, ಲಾಕ್ಡೌನ್‌ನಿಂದ ಹಾಳಾಯ್ತು ಎಲ್ಲಾ ವ್ಯಾಪಾರ, ಸರ್ಕಾರದ ನಿರ್ಧಾರಗಳಿಂದ ಬಡ ವ್ಯಾಪಾರಿ ಬರ್ಬಾದಾಗಿದ್ದಾರೆ.

ಇದು ಹೂವಿನ ವ್ಯಾಪಾರಿಗಳ ನೋವಿನ ಮಾತುಗಳು. ಕೊರೋನಾ ಕಾಟದಿಂದ ಹೂವಿನ ವ್ಯಾಪಾರಿಗಳ ಬದುಕೇ ಬರ್ಬಾದಾಗಿ ಹೋಗಿದೆ. ಕಳೆದ ಎರಡು ಅಲೆಗಳು ಹೂವಿನ ವ್ಯಾಪಾರಿಗಳನ್ನು ನೆಲಕಚ್ಚಿಸಿ ಬಿಟ್ಟಿದೆ. ಹಬ್ಬ ಇಲ್ಲ ಹರಿದಿನ ಇಲ್ಲ. ಮದುವೆ, ಮುಂಜಿ, ಜಾತ್ರೆ ಇಲ್ಲದೆ ಹೂವಿನ ವ್ಯಾಪಾರಿಗಳನ್ನು ಕೇಳುವವರೇ ಇರಲಿಲ್ಲ. ಈಗ ಮತ್ತೆ ಬದುಕು ಕಟ್ಟಿಕೊಳ್ಳೋಣ ಅಂತ ಆಸೆಪಟ್ಟು ಮತ್ತೆ ವ್ಯಾಪಾರಕ್ಕಿಳಿದ್ರೆ ಮತ್ತೆ ಕರ್ಫ್ಯೂ, ಲಾಕ್ಡೌನ್ ಶಾಕ್‌ ಕೊಟ್ಟಿದೆ. ದುರಂತ ಅಂದ್ರೆ ಹೂವಿನ ವ್ಯಾಪಾರಿಗಳ ಬದುಕು ಯಾರಿಗೂ ಬೇಡವಾಗಿದೆ. ಈ ವ್ಯಾಪಾರವೇ ಬಿಟ್ಟು ಬೇರೆ ವ್ಯಾಪಾರ ಮಾಡಬೇಕು ಅಂತ ಅನ್ನಿಸುತ್ತಿದೆ ಅಂತಾರೆ ಇವರು.

ಹೂವಿದ್ರೆ ವ್ಯಾಪಾರ ಇಲ್ಲ, ವ್ಯಾಪಾರ ಇದ್ದಾಗ ಹೂವಿಲ್ಲ. ಇದರಿಂದಾಗಿ ಹೂವಿನ ವ್ಯಾಪಾರಿಗಳ ಬದುಕು ಅತಂತ್ರವಾಗಿದೆ. ಸಾಲ ಸೋಲ ಮಾಡಿ ಎಲ್ಲವನ್ನ ಕಳೆದುಕೊಂಡಾಯ್ತು ಅನ್ನೋದು ಹೂವಿನ ವ್ಯಾಪಾರಿಗಳ ನೋವು. ಒಟ್ಟಾರೆ ಮತ್ತೆ ಕೊರೋನಾ ಭೀತಿ ಈ ಹೂವಿನ ವ್ಯಾಪಾರಿಗಳನ್ನು ಕಂಗಾಲಾಗಿಸಿದೆ. ಒಂದು ಮತ್ತೆ ಕರ್ಫ್ಯೂ, ಲಾಕ್ಡೌನ್ ಹೇರಿದ್ರೆ ಸಾಯೋದೊಂದೇ ದಾರಿ ಅಂತ ನೋವಿನಿಂದ ನುಡಿಯುತ್ತಿದ್ದಾರೆ ಹೂವನ್ನೇ ನಂಬಿದವರು.

ಪ್ರಭು, ಸಿಟಿಜನ್ ಜರ್ನಲಿಸ್ಟ್‌, ವಿಜಯಟೈಮ್ಸ್

Exit mobile version