ಕೊರೊನಾ ವ್ಯಾಕ್ಸಿನ್ ಪಡೆಯೋದು ಹೇಗೆ.?

ಬೆಂಗಳೂರು, . 2:  ಕೊರೋನಾ ವ್ಯಾಕ್ಸಿನ್ ಏನೋ ಬಂದಿದೆ. ವ್ಯಾಕ್ಸಿನ್ ಬಂದ ನಂತರ ಲಸಿಕೆ ಪಡೆಯುವವರಿಗಾಗಿ ಮೊದಲನೆಯದಾಗಿ ರಿಜಿಸ್ಟ್ರೇಷನ್, ಎರಡನೆಯದು ವೈಟಿಂಗ್ ರೂಮು, ಮೂರನೇಯದು ವ್ಯಾಕ್ಸಿನ್ ರೂಂ ಹಾಗೂ ನಾಲ್ಕನೆಯದು ಅಬ್ಸರ್ವೇಶನ್ ವಿಭಾಗಗಳಿರುತ್ತವೆ.

ವ್ಯಾಕ್ಸಿನ್ ಪಡೆಯಲು ನಾವು  ಕಡ್ಡಾಯವಾಗಿ ನಮ್ಮ ಹೆಸರುಗಳನ್ನು ರಿಜಿಸ್ಟ್ರೇಷನ್ ರೂಮಿನಲ್ಲಿ ನೋಂದಾಯಿಸಿಕೊಳ್ಳಬೇಕು. ಹೆಸರುಗಳನ್ನು ನೋಂದಾಯಿಸಿಕೊಳ್ಳಲು ವಿಳಾಸ ದಾಖಲೆ ನೀಡಬೇಕು. ಪಾನ್ ಕಾರ್ಡ್, ವೋಟರ್ ಐಡಿ, ಡಿಎಲ್ ಇಲ್ಲವೇ ಸರ್ಕಾರಿ ಸೇವೆಯಲ್ಲಿದ್ದರೆ ಅದರ ಗುರುತಿನ ಚೀಟಿ ನೀಡಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು.

ಹೆಸರು ನೋಂದಾಯಿಸಿಕೊಂಡ ನಂತರ ಅವರಿಗೆ ನಂಬರ್ ನೀಡಲಾಗುವುದು. ನಂಬರ್ ಪ್ರಕಾರ ವೈಟಿಂಗ್ ರೂಮಿನಲ್ಲಿ. ತಮ್ಮ ಸರದಿ ಬಂದಾಗ ವ್ಯಾಕ್ಸಿನ್ ರೂಮಿಗೆ ಹೋಗಬೇಕಾಗುತ್ತದೆ. ವ್ಯಾಕ್ಸಿನ್ ರೂಮಿನಲ್ಲಿ ವೈದ್ಯರು ರೋಗಿಯನ್ನು ಕೂರಿಸಿಕೊಂಡು ವಿಚಾರಣೆ ನಡೆಸಿ ನಂತರ ವ್ಯಾಕ್ಸಿನ್ ನೀಡುತ್ತಾರೆ.ನಂತರ ರೋಗಿಯನ್ನು ಅಬ್ಸರ್ವೇಷನ್ ರೂಮಿಗೆ ಕಳುಹಿಸುತ್ತಾರೆ.

ಅಬ್ಸರ್ವೇಷನ್ ರೂಮಿನಲ್ಲಿ ರೋಗಿಯನ್ನು 30 ನಿಮಿಷಗಳ ಕಾಲ ನಿಗಾದಲ್ಲಿ ಇಡಲಾಗುವುದು. ಆ ವೇಳೆಯಲ್ಲಿ ರೋಗಿ ಆರೋಗ್ಯದಲ್ಲಿ ಏರುಪೇರು ಕಂಡುಬಂದರೆ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಲಾಗುವುದು. ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗುವುದು.

30 ನಿಮಿಷದೊಳಗೆ ರೋಗಿಗೆ ಯಾವುದೇ ವ್ಯತಿರಿಕ್ತ ಪರಿಣಾಮ ಕಂಡ ಬರದಿದ್ದರೆ ಅವರನ್ನು ಮನೆಗೆ ಕಳುಹಿಸಿಕೊಡಲಾಗುವುದು. ಲಸಿಕೆ ಬಂದ ನಂತರ ಹೆಸರು ನೋಂದಾಯಿಸಿಕೊಂಡಿರುವ ಕೊರೋನಾ ವಾರಿಯರ್ಸ್‍ಗಳಿಗೆ ವ್ಯಾಕ್ಸಿನ್ ನೀಡಲು ಈಗಾಗಲೇ ಬೆಂಗಳೂರಿನ ಕಾಮಾಕ್ಷಿಪಾಳ್ಯ ಮತ್ತು ವಿದ್ಯಾಪೀಠ ವೃತ್ತದಲ್ಲಿ ಲಸಿಕೆ ನೀಡುವ ಪ್ರಕ್ರಿಯೆ ನಡೆಸಲಾಗುತ್ತಿದೆ. ಒಂದು ವೇಳೆ ರೋಗಿಗೆ ವ್ಯತಿರಿಕ್ತ ಪರಿಣಾಮ ಎದುರಾದರೆ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಡ್ರೈ ರನ್ ನಡೆಸಲಾಯಿತು.

Exit mobile version