ಕೊರೋನಾ: 1.52 ಲಕ್ಷ ಹೊಸ ಪ್ರಕರಣ, 3,128 ಮಂದಿ ಸಾವು

ನವದೆಹಲಿ, ಮೇ. 31: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1.52 ಲಕ್ಷ ಹೊಸ ಕೊವಿಡ್ ಪ್ರಕರಣ ದಾಖಲಾಗಿದ್ದು, ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 28,047,534 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಇನ್ನು ಇದೇ ಅವಧಿಯಲ್ಲಿ 3,128 ಮಂದಿ ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 329,100 ಕ್ಕೆ ಏರಿದೆ.

ಸಕ್ರಿಯ ಪ್ರಕರಣಗಳು 88,416 ರಷ್ಟು ಇಳಿದು 20,260,92 ಕ್ಕೆ ತಲುಪಿದೆ. ಇದು ಈಗ ಒಟ್ಟು ಸೋಂಕುಗಳ ಶೇಕಡಾ 7.58 ರಷ್ಟಿದೆ. ಕಳೆದ 24 ಗಂಟೆಗಳಲ್ಲಿ 2,38,022 ಜನರು ಚೇತರಿಸಿಕೊಂಡಿದ್ದು, ಈ ಮೂಲಕ ಒಟ್ಟು ಚೇತರಿಕೆಯಾದವರ ಸಂಖ್ಯೆ 25,692,342 ಆಗಿದೆ.

ಕಳೆದ ೨೪ ಗಂಟೆಯಲ್ಲಿ 16,831,35 ಪರೀಕ್ಷೆಗಳನ್ನು ನಡೆಸಲಾಗಿದ್ದು, ಇಲ್ಲಿಯವರೆಗೆ ನೀಡಲಾಗುವ ಕೊವಿಡ್ -19 ಲಸಿಕೆ ಪ್ರಮಾಣಗಳ ಒಟ್ಟು ಸಂಖ್ಯೆ 21,31,54,129 ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

Exit mobile version