ಮತ್ತೆ ಏರಿಕೆಯತ್ತ ಕೊರೊನಾ ಪ್ರಕರಣ: 41,195 ಜನರಲ್ಲಿ ಪತ್ತೆ

ನವದೆಹಲಿ, ಆ. 12: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 41,195 ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆಯು 3,20,77,706ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಇದೇ ಅವಧಿಯಲ್ಲಿ 490 ಮಂದಿ ಮೃತಪಟ್ಟಿದ್ದು, ಈವರೆಗೆ ದೇಶದಲ್ಲಿ ಸೋಂಕಿನಿಂದ 4,29,669 ಮಂದಿ ಸಾವಿಗೀಡಾಗಿದ್ದಾರೆ. ಇದರ ಜತೆ, ಸಕ್ರಿಯ ಪ್ರಕರಣಗಳ ಸಂಖ್ಯೆಯೂ 3,87,987ಕ್ಕೆ ಏರಿದ್ದು, ಇದು ಒಟ್ಟು ಪ್ರಕರಣಗಳ ಪೈಕಿ ಶೇಕಡ 1.21 ಪಾಲನ್ನು ಹೊಂದಿದೆ.

ದೇಶದ ಚೇತರಿಕೆ ಪ್ರಮಾಣವು ಶೇಕಡ 97.45 ರಷ್ಟಿದೆ. ಬುಧವಾರ 21,24,953 ಜನರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈವರೆಗೆ ದೇಶದಲ್ಲಿ 48,73,70,196 ಪರೀಕ್ಷೆಗಳನ್ನು ನಡೆಸಲಾಗಿದೆ’ ಎಂದು ಸಚಿವಾಲಯವು ತಿಳಿಸಿದೆ.

Exit mobile version