ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ: ಇಂದಿನಿಂದ ನೋಂದಣಿ ಶುರು: ನೋಂದಣಿ ಮಾಡುವುದು ಹೇಗೆ?

ಬೆಂಗಳೂರು. ಏ. 29: ಕೇಂದ್ರ ಸರ್ಕಾರ 18 ವರ್ಷ ಮೇಲ್ಪಟ್ಟವರಿಗೂ ಮೇ 1 ರಿಂದ ಕೋವಿಡ್ ಲಸಿಕೆ ನೀಡುವುದಾಗಿ ಘೋಷಿಸಿದೆ. ಕೋವಿಡ್ ಲಸಿಕೆ ಪಡೆಯಲು ಇಂದಿನಿಂದ (ಏಪ್ರಿಲ್ 28) ಕೋವಿನ್ ಪ್ಲಾಟ್‌’ಫಾರ್ಮ್ ಮತ್ತು ಆರೋಗ್ಯ ಸೇತಯು ಆ್ಯಪ್‌’ನಲ್ಲಿ ನೋಂದಣಿ ಪ್ರಾರಂಭವಾಗಲಿದೆ ಎಂದು MyGovIndia ಟ್ವೀಟ್ ಮಾಡಿದೆ.

ಲಸಿಕೆ ಪಡೆಯಲು ಇಚ್ಛಿಸುವವರು ಮೊದಲು cowin.gov.in ನಲ್ಲಿ ಲಾಗ್’ಇನ್ ಮಾಡಿ ಮತ್ತು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ ಎಸ್‌’ಎಂಎಸ್ ಮೂಲಕ ಒಟಿಪಿ ಕಳುಹಿಸಲಾಗುತ್ತದೆ
ಒಟಿಪಿ ಬಂದ ನಂತರ ಒಟಿಪಿ ನಮೂದಿಸಿ ಮತ್ತು ‘verify’ ಬಟನ್ ಒತ್ತಬೇಕು.  

ಒಟಿಪಿ ಮೌಲ್ಯೀಕರಿಸಿದ ನಂತರ, ‘ವ್ಯಾಕ್ಸಿನೇಷನ್ ನೋಂದಣಿ’ ಪುಟ ತೆರೆದುಕೊಳ್ಳುತ್ತದೆ. ನಿಮ್ಮ ಫೋಟೋ ಐಡಿ ಪ್ರೂಫ್‌’ ನಂತಹ ‘ವ್ಯಾಕ್ಸಿನೇಷನ್ ನೋಂದಣಿ’ ಪುಟದಲ್ಲಿ ಅಗತ್ಯವಿರುವ ವಿವರಗಳನ್ನು ನಮೂದಿಸಿದ ನಂತರ ನಿಮಗೆ ಕೋವಿಡ್’ನ ಯಾವುದಾರು ಲಕ್ಷಣಗಳು ಇವೆಯೇ ಎಂದು ಕೇಳಲಾಗುತ್ತದೆ. ‘ಹೌದು’ ಅಥವಾ ‘ಇಲ್ಲ’ ಕ್ಲಿಕ್ ಮಾಡುವ ಮೂಲಕ ಇದಕ್ಕೆ ಉತ್ತರಿಸಬಹುದು.

ನೋಂದಣಿಗಾಗಿ ವಿವರಗಳನ್ನು ನಮೂದಿಸಿದ ನಂತರ, ಕೆಳಗಿನ ಬಲಭಾಗದಲ್ಲಿರುವ ‘ರಿಜಿಸ್ಟರ್’ ಬಟನ್ ಒತ್ತಬೇಕು. ನಂತರ  ಯಶಸ್ವಿ ನೋಂದಣಿಯ ಕುರಿತು ನೀವು confirmation message ಸ್ವೀಕರಿಸುತ್ತೀರಿ. ನೋಂದಣಿ ಮುಗಿದ ನಂತರ, ನಿಮಗೆ ‘ಖಾತೆ ವಿವರಗಳು’ ತೋರಿಸುತ್ತದೆ. ಅಲ್ಲಿಗೆ ನೋಂದಣಿ ಪ್ರಕ್ರಿಯೆ ಮುಕ್ತಾಯಗೊಳ್ಳುತ್ತದೆ.

Exit mobile version