ಸಿಹಿತಿಂಡಿಯ ವಿಷ ರಹಸ್ಯ ! ಸಿಹಿತಿಂಡಿಗೆ ಬಳಸೋ ತುಪ್ಪ, ಖೋವಾನೂ ನಕಲಿ, ಕಿಲ್ಲರ್ ಕಲರ್ ಬಳಸ್ತಾರೆ ಜೋಕೆ. ವಿಜಯಟೈಮ್ಸ್ನಿಂದ ಸಿಹಿ ತಿಂಡಿಯೊಳಗಿನ ಕೊಳಕು ಸೀಕ್ರೆಟ್ ಬಯಲು.

Sweet lovers please watch this episode and know the dirty secrets of sweets. Fake milk, fake khova

ಕವರ್ ಸ್ಟೋರಿ : ಸಿಹಿ ತಿಂಡಿ ಪ್ರಿಯರೇ ನಿಮಗಿದೆ ಶಾಕಿಂಗ್ ನ್ಯೂಸ್ ! ನಕಲಿ ಸಿಹಿತಿಂಡಿ ತಯಾರು ಮಾಡೋ ಫ್ಯಾಕ್ಟರಿಗಳಿವೆ. ಕಡಿಮೆ ಬೆಲೆಯ ಸಿಹಿತಿಂಡಿಯೊಳಗಿದೆ ವಿಷ ರಾಸಾಯನಿಕ !. ನಕಲಿ ಹಾಲು, ಗೋಡೆಗೆ ಬಳಿಯೋ ವಾಲ್ಪುಟ್ಟಿ ಹಾಕ್ತಾರೆ. ತುಪ್ಪ, ಖೋವಾನೂ ನಕಲಿ, ಕಿಲ್ಲರ್ ಕಲರ್ ಬಳಸ್ತಾರೆ ಜೋಕೆ. ವಿಷಯುಕ್ತ ನಕಲಿ ಸಿಹಿ ತಿಂದ್ರೆ ನಿಮ್ಮ ಆರೋಗ್ಯ ಢಮಾರ್. ಕಿಡ್ನಿ, ಲಿವರ್, ಎಲುಬಿನ ಜೊತೆ ಚರ್ಮ, ಕರುಳೂ ಹಾಳಾಗುತ್ತೆ

ಸಿಹಿ ತಿಂಡಿ ಅಂದ್ರೆ ಪಂಚಪ್ರಾಣನ. ಸಿಹಿ ತಿಂಡಿ ತಿನ್ನದೆ ನಿಮ್ಮ ದಿನ ಕಳೆಯೋದಿಲ್ವಾ? ಹಾಗಾದ್ರೆ ನೀವು ಅಂಗಡಿಯಲ್ಲಿ ಖರೀದಿಸೋ ಸಿಹಿತಿಂಡಿಯ ಕಹಿಸತ್ಯ ತಿಳಿಯಲೇ ಬೇಕು. ಯಾಕಂದ್ರೆ ಕಲರ್ ಕಲರ್ ಸಿಹಿ ತಿಂಡಿಯೊಳಗಿದೆ ವಿಷ ರಹಸ್ಯ. ಕೊಳಕು ಕತೆ.
ನೀವು ದಸರಾ ದೀಪಾವಳಿಗೆ ಖರೀದಿಸೋ ಸಿಹಿ ತಿಂಡಿಗಳ ಕತೆ ಕೇಳಿದ್ರೆ ಬೆಚ್ಚಿ ಬೀಳ್ತೀರ. ಸಿಹಿ ತಿಂಡಿ ಮಾಡ್ಬೇಕಾದ್ರೆ ಅದಕ್ಕೆ ಪ್ಯೂರ್ ಖೋವಾ , ಪ್ರೂರ್ ತುಪ್ಪ, ಫುಡ್ ಗ್ರೇಡ್ ಬಣ್ಣ, ಒಣ ಹಣ್ಣುಗಳು ಹೀಗೆ ಸಾಕಷ್ಟು ಬಗೆಯ ವಸ್ತು ಹಾಕ್ಬೇಕು. ಎಲ್ಲವೂ ಪ್ಯೂರ್ ಆದ್ರೆ ಒಂದು ಕೆ.ಜಿ ಸಿಹಿತಿಂಡಿ ಬೆಲೆ ಸಾವಿರ ರೂಪಾಯಿ ದಾಟುತ್ತೆ. ಮೊದಲೇ ಕೊರೋನಾ ಕಾಟದಿಂದ ಹೆಚ್ಚಿನವರ ಕೈಯಲ್ಲಿ ಕಾಸಿಲ್ಲ. ಹಾಗಾಗಿ ಕಾಸ್ಟ್ಲಿ ಸ್ವೀಟ್ ಖರೀದಿಸೋಕೆ ಹಿಂದೇಟು ಹಾಕ್ತಾರೆ. ಇನ್ನು ಫ್ಯಾ ಕ್ಟರಿಗಳಲ್ಲಿ ಕಚೇರಿಗಳಲ್ಲಿ ಸಾವಿರಾರು ಬಾಕ್ಸ್ಗಟ್ಟಲೆ ಸಿಹಿ ಕೊಡುವಾಗ ಸಾಮಾನ್ಯವಾಗಿ ಕಡಿಮೆ ಬೆಲೆಯ ತಿಂಡಿಗೇ ಮೊರೆ ಹೋಗ್ತಾರೆ. ಹಾಗಾದ್ರೆ ಕಡಿಮೆ ಬೆಲೆಗೆ ಸಿಹಿತಿಂಡಿ ಸಿಗ್ಬೇಕಾದ್ರೆ ಏನ್ ಮ್ಯಾಜಿಕ್ ಮಾಡ್ತಾರೆ. ಅದರೊಳಗೆ ಏನೆಲ್ಲಾ ಸೇರಿಸ್ತಾರೆ. ನಕಲಿ ಸ್ವೀಟ್ ತಯಾರಿಸುವವರ ಅಸಲಿ ಸೀಕ್ರೆಟ್ಸ್ ನಾನು ನಿಮಗೆ ವಿವರಿಸ್ತೀನಿ.
ಕಿಲ್ಲರ್ ಖೋವಾದೊಳಗಿದೆ ಭಯಾನಕ ರಹಸ್ಯ: ನಮ್ಮ ದೇಶದಲ್ಲಿ ಹೆಚ್ಚಿನ ತಿಂಡಿಗಳನ್ನು ತಯಾರಿಸೋದೇ ಹಾಲ್ ಖೋವಾ ಅಥವಾ ಮಾವಾದಿಂದ. ಪ್ಯೂರ್ ಹಾಲಿನಿಂದ ತಯಾರಿಸೋ ಖೋವಾದ ಬೆಲೆ 280 ರೂಪಾಯಿಂದ 380 ರೂಪಾಯಿವರೆಗೆ ಆಗುತ್ತೆ. ಅಂದ್ರೆ ಸಾಮಾನ್ಯ ಹಾಲಿನಿಂದ ಒಂದು ಕೆ.ಜಿ ಖೋವಾ ತಯಾರಿಸಬೇಕಾದ್ರೆ 10ರಿಂದ 11 ಲೀಟರ್ ಹಾಲು ಬೇಕು. ಇನ್ನು ಗಟ್ಟಿ ಹಾಲಿನಿಂದ ಖೋವಾ ತಯಾರಿಸ್ತೀರಿ ಅಂದ್ರೆ 5 ರಿಂದ 6 ಲೀಟರ್ ಬೇಕಾಗುತ್ತೆ. ಅಂದ್ರೆ ಸಾಮಾನ್ಯ ಹಾಲಿನ ಬೆಲೆ ಸರಾಸರಿ ಲೀಟರ್ 30 ಹಾಗೂ ಗಟ್ಟಿ ಹಾಲಿನ ಬೆಲೆ 50 ರೂಪಾಯಿ ಅಂತ ಹಿಡಿದ್ರೂ ಮುನ್ನೂರು ರೂಪಾಯಿ ಹಾಲಿಗೇ ಬೇಕು, ಇನ್ನು ಅದನ್ನು ನಾಲ್ಕು ಗಂಟೆಗಳ ಕಾಲ ಕುದಿಸಿ, ಪ್ಯಾಕ್ ಮಾಡಿ ರವಾನಿಸಲು ಜೊತೆಗೆ ಕಾರ್ಮಿಕರ ಸಂಬಳ ಎಲ್ಲಾ ಸೇರಿಸಿ 320 ರಿಂದ 380 ರೂಪಾಯಿ ಬೇಕು. ಇಲ್ಲಾ ಹಾಲು ಇನ್ನೂ ಕಡಿಮೆ ಬೆಲೆಗೆ ಸಿಕ್ಕಿದ್ರೆ 280 ರೂಪಾಯಿಯಿಂದ ಖೋವಾ ಬೆಲೆ ಪ್ರಾರಂಭ ಆಗುತ್ತೆ. ಆದ್ರೆ ಖೋವಾ ಮಾರುಕಟ್ಟೆಯಲ್ಲಿ ಬರೀ 180 ರಿಂದ 200 ರೂಪಾಯಿಗೆ ಹೇಗೆ ಸಿಗುತ್ತೆ. ಅವರು ಯಾವ ಹಾಲಿನಿಂದ ಖೋವಾ ತಯಾರಿಸುತ್ತಾರೆ. ಈ ಪ್ರಶ್ನೆ ನಮ್ಮನ್ನು ಕಾಡೋದು ಸಹಜ ಅಲ್ವೇ?
ನಕಲಿ ಹಾಲಿನಿಂದ ಖೋವಾ ತಯಾರಿಕೆ !: ಅತ್ಯಂತ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಖೋವಾ ಸಿಗ್ತಿದೆ ಅಂದ್ರೆ ಅದು ಅಸಲಿ ಖೋವಾ ಅಲ್ಲ, ಅದು ನಕಲಿ ಖೋವಾ. ನಕಲಿ, ಸಿಂಥೆಟಿಕ್ ಹಾಲಿನಿಂದ ತಯಾರಿಸಿದ ಖೋವಾ ಆಗಿರುತ್ತೆ. ಸಾಬೂನಿನ ಪುಡಿ, ಶ್ಯಾಂಪು, ಗೋಡೆಗೆ ಬಳಿಗೆ ವಾಲ್ ಪುಟ್ಟಿ, ರಿಫೈನ್ಡ್ ಎಣ್ಣೆ, ಪರಿಮಳಕ್ಕೆ ಎಸೆನ್ಸ್, ಬಣ್ಣ, ಹಾಳಾಗದಂತೆ ರಾಸಾಯನಿಕ ಬಳಸಿ ನಕಲಿ ಹಾಲು ತಯಾರಿಸುತ್ತಾರೆ. ಇನ್ನು ಕೆಲವರು ಕಳಪೆ ಅಥವಾ ಅವಧಿ ಮೀರಿರುವ ಹಾಲಿನ ಪುಡಿಯನ್ನೂ ಕೂಡ ಬಳಸ್ತಾರೆ. ಇಂಥಾ ಹಾಲು 400 ರೂಪಾಯಿಗೆ 200 ಲೀಟರ್ಗೂ ಹೆಚ್ಚು ಹಾಲು ತಯಾರಿಸಬಹುದು.

ಗ್ರಾ.ಇನ್
ಖೋವಾ ತಯಾರಿಕೆ ಲೆಕ್ಕಾಚಾರ
1ಕೆ.ಜಿ ಖೋವಾಗೆ ಸಾಮಾನ್ಯ ಹಾಲು 10 ಲೀ.
ಗಟ್ಟಿ ಹಾಲಾದ್ರೆ 5-6 ಲೀಟರ್ ಬೇಕಾಗುತ್ತೆ
1ಲೀ. ಸಾಮಾನ್ಯ ಹಾಲಿನ ಬೆಲೆ 30 ರೂ.
1 ಲೀ ಗಟ್ಟಿ ಹಾಲಿನ ಬೆಲೆ 50 ರೂಪಾಯಿ
1ಕೆ.ಜಿ ಖೋವಾಗೆ 320 – 380 ರೂಪಾಯಿ
ಅತೀ ಕಡಿಮೆ ಬೆಲೆ ಅಂದ್ರೆ 300 ರೂ.
ಗ್ರಾ.ಔಟ್

ಕೊಳಕಾಗಿ ಸಂಗ್ರಹಿಸ್ತಾರೆ ಖೋವಾ: ಮೊದಲೇ ಅತ್ಯಂತ ಅಪಾಯಕಾರಿ ರಾಸಾಯನಿಕ ಹಾಕಿ ಈ ನಕಲಿ ಖೋವಾ ತಯಾರಿಸ್ತಾರೆ. ಇದನ್ನು ಸಂಗ್ರಹಿಸುವಾಗ್ಲೂ ಯಾವುದೇ ಶುಚಿತ್ವ ಪಾಲಿಸಲ್ಲ. ಕೊಳಕು ಗೋಡೌನ್ಗಳಲ್ಲಿ ಗಾಳಿ ಬೆಳಕು ಇಲ್ಲದ ಜಾಗದಲ್ಲಿ ತಿಂಗಳಾನುಗಟ್ಟಲೆ ಕಾಲ ಖೋವಾ ಸಂಗ್ರಹಿಸಿಡ್ತಾರೆ. ಇದಕ್ಕೆ ಫಂಗಸ್ ಬರುತ್ತೆ. ಕೋಲಿ ಬ್ಯಾಕ್ಟೀರಿಯಾ ಮನೆ ಮಾಡಿರುತ್ತೆ. ಇದ್ಯಾವುದು ಕಾಣಬಾರದು ಅಂತ ಕಲರ್, ರಾಶಿ ರಾಶಿ ಸಕ್ಕರೆ ಸುರೀತಾರೆ. 
ಇಷ್ಟೊಂದು ಕೊಳಕಾಗಿ ತಯಾರಿಸಿರುವ ಖೋವಾದ ಸ್ವೀಟ್ ತಿಂದ್ರೆ ನಮ್ಮ ಕಿಡ್ನಿ, ಲಿವರ್ ಢಮಾರ್ ಆಗುತ್ತೆ. ಅಲ್ಲದೆ ಚರ್ಮರೋಗ, ಕರುಳು ಬೇನೆ, ವಾಂತಿ, ಭೇಧಿ ಬರುತ್ತೆ. ಈ ವಿಷಯುಕ್ತ ಖೋವಾದಿಂದ ಸ್ವೀಟ್ ತಿಂದ್ರೆ ಮಕ್ಕಳಿಗೆ ಸಾವೂ ಬರಬಹುದು.

ನಕಲಿ ತುಪ್ಪಾನೇ ಬಳಸೋದು ಗೊತ್ತಾ?: ಸಿಹಿತಿಂಡಿ ಮುಖ್ಯವಾಗಿ ಬಳಸೋ ಇನ್ನೊಂದು ವಸ್ತು ಅಂದ್ರೆ ತುಪ್ಪ. ತುಪ್ಪ ಅಂದ್ರೆ ಅದು ಅಸಲಿ ಅಥವಾ ಪ್ಯೂರ್ ಅಂತಾನೇ ನಾವು ಭಾವಿಸ್ತೀವಿ. ಆದ್ರೆ ಈ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಅಸಲಿ ತುಪ್ಪ ಅಪರೂಪವಾಗಿದೆ. ಬರೀ ನಕಲಿ ತುಪ್ಪದ್ದೇ ದರ್ಬಾರ್. ಈ ನಕಲಿ ತುಪ್ಪವನ್ನು ಕೂಡ ಅಪಾಯಕಾರಿ ರಾಸಾಯನಿಕ ಬಳಸಿ ತಯಾರಿಸಿದ ಬೆಣ್ಣೆಯಿಂದಲೇ ತಯಾರಿಸ್ತಾರೆ. ಇದು ದೇಹಕ್ಕೆ ಭಾರೀ ಡೇಂಜರ್. ಈ ತುಪ್ಪ ತಿಂದ್ರೆ ಹೃದ್ರೋಗ ಸುಲಭವಾಗಿ ಬರುತ್ತೆ. ರಕ್ತನಾಳದೊಳಗೆ ಜಿಡ್ಡಿನಂಶ ಶೇಖರಣೆಯಾಗಿ ಹೃದಯಾಘಾತಕ್ಕೂ ಕಾರಣ ಆಗುತ್ತೆ.
ಕಿಲ್ಲರ್ ಕಲರ್ ಕತೆ ಕೇಳಲೇ ಬೇಡಿ: ಇನ್ನು ನಾವು ಇಷ್ಟಪಟ್ಟು ತಿನ್ನೋ ಸಿಹಿತಿಂಡಿಯೊಳಗಿರುವ ಇನ್ನೊಂದು ಡೆಡ್ಲಿ ವಸ್ತು ಅಂದ್ರೆ ಕಿಲ್ಲರ್ ಕಲರ್. ಕಲರ್ ಯಾವತ್ತಿದ್ರೂ ಕಿಲ್ಲರೇ. ಅದು ಪೆಟ್ರೋಲಿಯಂ ಪ್ರಾಡಕ್ಟ್. ಆಹಾರಕ್ಕೆ ಬಳಸಲು ಯೋಗ್ಯ ಬಣ್ಣ ಅಂತ ಕಾಯಿದೆಯಲ್ಲಿ ಹೇಳಿದ್ರೂ ಕಲರ್ ಕ್ಯಾನ್ಸರ್ ಕಾರಕ. ಬಣ್ಣವನ್ನು ಮಿತಿ ಪರಿಮಿತಿಯಲ್ಲಿ ಬಳಸಬೇಕು ಅಂತ ಆಹಾರ ಗುಣಮಟ್ಟ ಮತ್ತು ಸುರಕ್ಷತಾ ಕಾಯ್ದೆ ಹೇಳುತ್ತೆ. ಆದ್ರೆ ಅದನ್ನು ಯಾರೂ ಪಾಲಿಸದ ಕಾರಣ, ಇವತ್ತು ಕ್ಯಾನ್ಸರ್ ಅನ್ನೋ ಕಾಯಿಲೆ ಸಾಮಾನ್ಯ ಅನ್ನಿಸಿದೆ.
ಅಪಾಯಕಾರಿ ನಕಲಿ ವರ್ಕ್ ಬಳಸ್ತಾರೆ !: ಸ್ವೀಟ್ನಲ್ಲಿ ಬಳಸೋ ಇನ್ನೊಂದು ಅಪಾಯಕಾರಿ ವಸ್ತು ಅಂದ್ರೆ ಅದು ವರ್ಕ್. ವರ್ಕ್ ಅಂದ್ರೆ ಪದರ, ಲೇಯರ್ ಅಂತ ಅರ್ಥ. ಸಿಹಿತಿಂಡಿ ಮೇಲೆ ಹಾಕೋ ಶೈನಿಂಗ್ ಪದರವನ್ನು ವರ್ಕ್ ಅಂತಾರೆ. ವರ್ಕ್ ಅನ್ನು ಪ್ಯೂರ್ ಬೆಳ್ಳಿಯಿಂದ ಮಾಡಲಾಗುತ್ತೆ. ದನದ ಹೊಟ್ಟೆ ಅಥವಾ ಕರಳನ್ನು ಸಂಸ್ಕರಿಸಿ, ಒಣಗಿಸಿ ಅದನ್ನು ಚೌಕಾಕಾರದ ತುಂಡಾಗಿ ಮಾರ್ಪಾಡು ಮಾಡಲಾಗುತ್ತೆ. ಆ ತುಂಡಿನ ಮಧ್ಯೆ ಬೆಳ್ಳಿಯ ಚಿಕ್ಕ ತುಂಡನ್ನು ಇಟ್ಟು ನಿಯಮಿತವಾಗಿ ಹೊಡೆದಾದ ಈ ವರ್ಕ್ ಅಥವಾ ಬೆಳ್ಳಿ ಪದರ ರೆಡಿಯಾಗುತ್ತೆ. ಇದನ್ನೇ ಸ್ವೀಟ್ ಮೇಲೆ ಹಾಕಲು ಆಹಾರ ಸುರಕ್ಷತಾ ಕಾಯ್ದೆ ಅವಕಾಶ ಮಾಡಿ ಕೊಟ್ಟಿದೆ. ಯಾಕಂದ್ರೆ ಬೆಳ್ಳಿ ಪಚನ ಕ್ರಿಯೆಯ ಸಂದರ್ಭದಲ್ಲಿ ಕರಗುತ್ತೆ. ಆದ್ರೆ ಬೆಳ್ಳಿ ವರ್ಕ್ ದುಬಾರಿ. ಇದನ್ನು ಬಳಸಿ ಸಿಹಿ ತಿಂಡಿ ತಯಾರಿಸಿದ್ರೆ ಕಡಿಮೆ ಬೆಲೆಗೆ ತಿಂಡಿ ಮಾರಿ ಲಾಭ ಗಳಿಸಲು ಸಾಧ್ಯವಿಲ್ಲ ಅನ್ನೋ ಕಾರಣಕ್ಕೆ ಹೆಚ್ಚಿನ ಸಿಹಿ ತಿಂಡಿ ತಯಾರಕರು ಬೆಳ್ಳಿ ಬದಲು ಅಲ್ಯುಮೀನಿಯಂ ಅಥವಾ ಸೀಸದ ಪದರನ್ನು ಬಳಸಿ ನಮ್ಮ ಆರೋಗ್ಯ ಜೊತೆ ಚಲ್ಲಾಟ ಆಡ್ತಿದ್ದಾರೆ.


ಅಲ್ಯುಮೀನಿಯಂ, ಅಥವಾ ಸೀಸದ ವರ್ಕ್ ಆರೋಗ್ಯದ ಮೇಲೆ ಭಾರೀ ದುಷ್ಪರಿಣಾಮ ಬೀರುತ್ತೆ. ಸೀಸ ಅಂತು ಕ್ಯಾನ್ಸರ್ಕಾರಕ. ಅಲ್ಲದೆ ಮಕ್ಕಳ ಮಿದುಳಿಗೂ ಕಂಟಕ ತರುತ್ತೆ.
ಶುಚಿತ್ವಕ್ಕೆ ಮಾರೋ ಗೋಲಿ: ಎಲ್ಲಾ ಅಲ್ಲ ಹೆಚ್ಚಿನ ಸಿಹಿ ತಿಂಡಿ ತಯಾರಕರು ಶುಚಿತ್ವವನ್ನು ನಿರ್ಲಕ್ಷಿಸ್ತಾರೆ. ಹಬ್ಬ, ಹರಿದಿನಗಳಲ್ಲಿ ಮದುವೆ ಹಾಲ್ ಮುಂತಾದವುಗಳನ್ನು ಬುಕ್ ಮಾಡಿ ಆಹಾರ ತಯಾರಿಸ್ತಾರೆ. ಅಲ್ಲಿ ಕಾರ್ಮಿಕರಿಗೆ ಶುಚಿಯಾಗಿರಲು ವ್ಯವಸ್ಥೆಗಳೇ ಇರಲ್ಲ. ಆಹಾರ ತಯಾರಿಸೋ ವಾತಾವರಣವೂ ತುಂಬಾ ಕೊಳಕಾಗಿ ಇರುತ್ತೆ. ಕೊರೋನಾ ನಿಯಮಗಳನ್ನು ಗಾಳಿಗೆ ತೂರಿ ಸಿಹಿ ತಿಂಡಿ ತಯಾರಿಸ್ತಿರೋದು ಕಾಮನ್ ಆಗಿದೆ.
ಆಹಾರ ಸುರಕ್ಷತಾ ಅಧಿಕಾರಿಗಳು ಮಲಗಿದ್ದಾರಾ? : ನಕಲಿ ಸಿಹಿತಿಂಡಿ ಮಾಫಿಯಾ ಇಷ್ಟೊಂದು ಬಿಂದಾಸಾಗಿ ದರ್ಬಾರ್ ಮಾಡುತ್ತಿದ್ರೂ ನಮ್ಮ ರಾಜ್ಯದ ಆಹಾರ ಗುಣಮಟ್ಟ ಮತ್ತು ಸುರಕ್ಷತಾ ಅಧಿಕಾರಿಗಳು ಗಡ್ಡದ್ದಾಗಿ ನಿದ್ದೆ ಮಾಡುತ್ತಿದ್ದಾರೆ. ಒಂದೇ ಒಂದು ಕಡೆ ರೈಡ್ ಮಾಡಿಲ್ಲ. ಇಂಥಾ ಒಂದು ಗಂಭೀರ ಬೆಳವಣಿಗೆಯ ಬಗ್ಗೆ ತಲೆಯೇ ಕೆಡಿಸಿಕೊಳ್ಳದೆ ಜನರ ಆರೋಗ್ಯವನ್ನು ಕಲಬೆರಕೆ ಮಾಫಿಯಾದ ಕಟುಕರ ಕೈಗೆ ಕೊಟ್ಟಿದ್ದಾರೆ. ತಾವು ಲಂಚ ತಿಂದು ಇತರರಿಗೆ ವಿಷ ತಿನ್ನಿಸೋ ಈ ಅಧಿಕಾರಿಗಳಿಗೆ ಧಿಕ್ಕಾರ ಅನ್ನಲೇ ಬೇಕಾಗುತ್ತೆ. ಆರೋಗ್ಯ ಸಚಿವ ಡಾ.ಸುಧಾಕರ್ ಅವರಿಗೆ ಕೊರೋನಾ ಮೇಲೆ ಭರ್ಜರಿ ಪ್ರೀತಿ, ಆದ್ರೆ ಇಂಥಾ ಕಣ್ಣಿಗೆ ಕಾಣುವ ಮಾಫಿಯಾಗಳ ಬಗ್ಗೆ ಚಿಂತೆಯೇ ಮಾಡದಿರುವುದು ಈ ನಾಡಿನ ದುರಂತ.
ಅಸಲಿ-ನಕಲಿ ಸಿಹಿತಿಂಡಿ ಪತ್ತೆ ಹಚ್ಚೋದು ಹೇಗೆ?:
ಸಿಹಿತಿಂಡಿ ಅಸಲಿಯೋ ನಕಲಿಯೋ ಅನ್ನೋದನ್ನು ಪತ್ತೆ ಹಚ್ಚೋದು ಹೇಗೆ ಅನ್ನೋ ಪ್ರಶ್ನೆ ನಿಮ್ಮನ್ನು ಕಾಡಬಹುದು. ಅದಕ್ಕೊಂದು ಸುಲಭ ಉಪಾಯ ಇದೆ. ಅದೇನಂದ್ರೆ ಖೋವಾದಿಂದ ತಯಾರಿಸಿದ ತಿಂಡಿಯನ್ನು ಒಂದು ಗ್ಲಾಸೊಳಗೆ ಹಾಕಿ ಚೆನ್ನಾಗಿ ಕರಗಿಸಿ. ಆ ದ್ರಾವಣಕ್ಕೆ ಸ್ವಲ್ಪ ಅಯೋಡಿನ್ ಸೊಲ್ಯೂಷನ್ ಮಿಕ್ಸ್ ಮಾಡಿ. ಮತ್ತೆ ಚೆನ್ನಾಗಿ ಕಲಸಿ, ಆಗ ಸಿಹಿತಿಂಡಿಯ ದ್ರಾವಣ ಹಸಿರು ಅಥವಾ ಕಪ್ಪು ಬಣ್ಣಕ್ಕೆ ತಿರುಗಿದ್ರೆ ಆ ಸಿಹಿತಿಂಡಿ ನಕಲಿ ಅಥವಾ ಕಲಬೆರಕೆಯಿಂದ ಕೂಡಿದೆ ಅನ್ನೋದು ಪಕ್ಕಾ.
ಹಾಗಾಗಿ ನೀವು ಕಡಿಮೆ ಬೆಲೆಯ ಸ್ವೀಟ್ ಖರೀದಿಸುವಾಗ ಎಚ್ಚರ ! ಅಂಥಾ ಸ್ವೀಟ್ ಖರೀದಿಸದಿರೋದೇ ಒಳ್ಳೆಯದು. ಮುಖ್ಯವಾಗಿ ಮಕ್ಕಳ ಆರೋಗ್ಯ ಕಾಪಾಡಬೇಕಾದ್ರೆ ಇಂಥಾ ನಕಲಿ ತಿಂಡಿ ಬಗ್ಗೆ ಎಚ್ಚರ ವಹಿಸಲಿ. ಇನ್ನು ಆಹಾರ ಗುಣಮಟ್ಟ ಮತ್ತು ಸುರಕ್ಷತಾ ಅಧಿಕಾರಿಗಳು ದಯವಿಟ್ಟು ಎಚ್ಚೆತ್ತುಕೊಳ್ಳಿ, ಬೆಂಗಳೂರಿಗೆ ತಮಿಳುನಾಡಿನಿಂದ ಅಕ್ರಮವಾಗಿ ನಕಲಿ ಖೋವಾ ನಿರಂತರವಾಗಿ ಸರಬರಾಜಾಗುತ್ತಿದೆ. ಬೆಂಗಳೂರಿನ ಜಯನಗರ, ಶಿವಾಜಿನಗರ, ಕಲಾಸಿಪಾಳ್ಯ, ಕೋರಮಂಗಲ ಮುಂತಾದ ಭಾಗಗಳಲ್ಲಿ ಕೊಳಕು ಗೋಡೌನ್ಗಳಲ್ಲಿ ಖೋವಾ ಸಂಗ್ರಹವಾಗುತ್ತಿದೆ. ಈ ಗೋಡೌನ್ಗಳ ಮೇಲೆ ದಾಳಿ ಮಾಡಿ. ಅಷ್ಟೇ ಸಿಹಿ ಅಂಗಡಿಗಳ ಮೇಲೆಯೂ ದಾಳಿ ಮಾಡಿದ್ರೆ ಕಲಬೆರಕೆ ಮಾಫಿಯಾಕ್ಕೆ ಬ್ರೇಕ್ ಬೀಳುತ್ತೆ, ಜನರ ಆರೋಗ್ಯ ಉಳಿಯುತ್ತೆ.

Exit mobile version