ಕೋವಿಡ್-19: ಮಕ್ಕಳ ಮೇಲೆ ಲಸಿಕೆ ಪ್ರಯೋಗಕ್ಕೆ ಮೈಸೂರಿನ ಚೆಲುವಾಂಬ ಆಸ್ಪತ್ರೆ ಆಯ್ಕೆ

ಮೈಸೂರು, ಮೇ. 31: ಭಾರತ್‌ ಬಯೋಟೆಕ್‌ ಸಂಸ್ಥೆಯು ಮಕ್ಕಳ ಮೇಲೆ ನಡೆಸಲು ಉದ್ದೇಶಿಸಿರುವ ಕೋವಿಡ್‌ ಲಸಿಕೆ ಪ್ರಯೋಗಕ್ಕೆ ದೇಶದ ಹತ್ತು ಆಸ್ಪತ್ರೆಗಳು ಆಯ್ಕೆಯಾಗಿದ್ದು ಈ ಪೈಕಿ ಮೈಸೂರಿನ ಚೆಲುವಾಂಬ ಆಸ್ಪತ್ರೆ ಆಯ್ಕೆಯಾಗಿದೆ.

ಕೋವಿಡ್‌ ಸೊಂಕಿನ ಮುಂದಿನ ಅಲೆಯ ದುಷ್ಪರಿಣಾಮವು ಮಕ್ಕಳ ಮೇಲೆ ಬೀರಲಿದೆ ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಮಕ್ಕಳಲ್ಲಿ‌ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ಲಸಿಕೆ ಪರಿಣಾಮ ಬೀರಲಿದೆಯೇ ಎಂಬುದನ್ನು ತಿಳಿಯಲು ಭಾರತ್ ಬಯೋಟೆಕ್ ಕೋವ್ಯಾಕ್ಸಿನ್ ಲಸಿಕೆಯನ್ನು ಉತ್ಪಾದಿಸುತ್ತಿದೆ.

ಇದನ್ನು ಮಕ್ಕಳ ಮೇಲೆ ಪ್ರಯೋಗ ಮಾಡಲು ದೇಶದ 10 ಆಸ್ಪತ್ರೆಗಳು ಆಯ್ಕೆಯಾಗಿದ್ದು, ಇದರಲ್ಲಿ ಮೈಸೂರಿನ ಸರ್ಕಾರಿ ಚೆಲುವಾಂಬ ಆಸ್ಪತ್ರೆ ಒಂದಾಗಿದೆ. ಈ ಪ್ರಾಯೋಗಿಕ ಕ್ಲಿನಿಕಲ್ ಟೆಸ್ಟ್​​ಗಾಗಿ ಆಸ್ಪತ್ರೆಯಲ್ಲಿನ ಸಿದ್ಧತೆ ಬಗ್ಗೆ ಮೈಸೂರು ಮೆಡಿಕಲ್ ಕಾಲೇಜು ಮೂಲಗಳು ತಿಳಿಸಿವೆ.

Exit mobile version