ಕೋವಿಡ್ – 19 ತ್ರಾಸವಿಲ್ಲದ ಮತ್ತು ನೋವುರಹಿತವಾದ ಲಸಿಕೆ: ರತನ್‌ ಟಾಟಾ

ನವದೆಹಲಿ, ಮಾ. 13: ಉದ್ಯಮಿ, ಟಾಟಾ ಸಮೂಹ ಅಧ್ಯಕ್ಷ ರತನ್ ಟಾಟಾ ಕೋವಿಡ್-19 ಲಸಿಕೆಯ ಮೊದಲ ಡೋಸ್ ಹಾಕಿಸಿಕೊಂಡರು.

ಈ ಸಂದರ್ಭದಲ್ಲಿ ಆದಷ್ಟು ಬೇಗನೇ ಎಲ್ಲರೂ ಲಸಿಕೆ ಪಡೆದು ಸಾಂಕ್ರಾಮಿಕ ರೋಗದಿಂದ ರಕ್ಷಣೆ ಪಡೆಯಬೇಕೆಂದು ಮನವಿ ಮಾಡಿದರು. ಕೋವಿಡ್ ಲಸಿಕೆ ಪ್ರಕ್ರಿಯೆಯನ್ನು ಶ್ಲಾಘಿಸಿರುವ ರತನ್ ಟಾಟಾ, ‘ತ್ರಾಸವಿಲ್ಲದ ಮತ್ತು ನೋವುರಹಿತ’ ಎಂದು ಬಣ್ಣಿಸಿದ್ದಾರೆ.

‘ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದಿದ್ದಕ್ಕಾಗಿ ಕೃತಜ್ಞನಾಗಿದ್ದೇನೆ. ಇದು ತ್ರಾಸವಿಲ್ಲದ ಮತ್ತು ನೋವುರಹಿತವಾಗಿದೆ. ಆದಷ್ಟು ಬೇಗನೇ ಎಲ್ಲರೂ ಲಸಿಕೆ ಪಡೆದು ರಕ್ಷಣೆ ಪಡೆಯಲಿದ್ದಾರೆ ಎಂದು ಭಾವಿಸುತ್ತೇನೆ’ ಎಂದಿದ್ದಾರೆ.

ಈ ನಡುವೆ ಭಾರತದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದ 78 ದಿನಗಳಲ್ಲಿ ದಿನವೊಂದರಲ್ಲೇ ಅತಿ ಹೆಚ್ಚು 23,285 ಪ್ರಕರಣಗಳು ದಾಖಲಾಗಿದ್ದವು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಕೋವಿಡ್ ಲಸಿಕೆ ವಿತರಣೆಯು 2.8 ಕೋಟಿ ದಾಟಿದ್ದು, ಶುಕ್ರವಾರದಂದು 18.40 ಲಕ್ಷ ವಿತರಿಸಲಾಗಿದೆ. ದೇಶಿಯವಾಗಿ ತಯಾರಿಸಿದ ಕೋವಿಡ್ ಲಸಿಕೆ ವಿತರಣೆ ಅಭಿಯಾನವನ್ನು ಜನವರಿ 16ರಂದು ಪ್ರಾರಂಭಿಸಲಾಗಿತ್ತು.

Exit mobile version