ಕೋವಿಡ್‌ ನಿರ್ಬಂಧ ತೆರವು: ಲಸಿಕೆ ಪಡೆಯದವರಿಗೆ ಹಾನಿಕಾರಕ: ಡಬ್ಲ್ಯೂಎಚ್‌ಒ ಮಹಾನಿರ್ದೇಶಕ

ಹೊಸದಿಲ್ಲಿ,ಜೂ. 08: ಕೋವಿಡ್‌ ನಿರ್ಬಂಧಗಳನ್ನು ಬೇಗನೆ ತೆಗೆಯುವುದರಿಂದ ಲಸಿಕೆ ಹಾಕಿಸಿಕೊಳ್ಳದವರು ಸಮಸ್ಯೆಗಳನ್ನು ಎದುರಿಸಬೇಕಾಗಿದ್ದು, ಅವರಿಗೆ ಇದು ಹಾನಿಕಾರಕವಾಗಿ ಪರಿಣಮಿಸಲಿದೆ ಎಂದು ಎಂದು ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಟೆಡ್ರೊಸ್‌ ಅಧಾನೊಮ್‌ ಘೆಬ್ರೆಯೆಸಸ್‌ ಆತಂಕ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಆಫ್ರಿಕಾ, ಅಮೆರಿಕಾ, ಪಾಶ್ಚಾತ್ಯ ಫೆಸಿಪಿಕ್‌ನಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಕೋವಿಡ್‌ ಎರಡನೇ ಅಲೆಯ ಗಂಭೀರ ಸ್ವರೂಪದ ಪರಿಣಾಮವನ್ನು ಹಲವು ದೇಶಗಳು ಎದುರಿಸುತ್ತಿವೆ. ಇದರ ಮಧ್ಯೆಯೇ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ನೀಡಿರುವ ದೇಶಗಳು ನಿರ್ಬಂಧಗಳನ್ನು ತೆಗೆಯುವ ಪ್ರಯತ್ನದಲ್ಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿಶ್ವದ ಎಲ್ಲ ದೇಶಗಳು ಸೆಪ್ಟೆಂಬರ್‌ ಒಳಗೆ ಕನಿಷ್ಠ ಪಕ್ಷ ಶೇ. 10 ಜನರಿಗೆ ಲಸಿಕೆ ನೀಡಬೇಕು. ವರ್ಷದ ಅಂತ್ಯದ ವೇಳೆ ಶೇ. 30ರಷ್ಟು ಜನರಿಗೆ ಲಸಿಕೆ ನೀಡುವ ಗುರಿ ಹೊಂದಬೇಕು ಎಂದು ಟೆಡ್ರೊಸ್‌ ಕರೆ ನೀಡಿದ್ದಾರೆ.

Exit mobile version