ನವದೆಹಲಿ: 2 ರಿಂದ 18 ವರ್ಷದೊಳಗಿನವರಿಗೆ ಲಸಿಕೆ ಹಾಕುವ ಪ್ರಯೋಗಗಳು ನಡೆಯುತ್ತಿವೆ, ಸೆಪ್ಟೆಂಬರ್ ವೇಳೆಗೆ ಮಕ್ಕಳಿಗೆ ಕೋವಿಡ್ ಲಸಿಕೆಗಳು ಲಭ್ಯವಾಗಬಹುದು ಎಂದು ರಾಷ್ಟ್ರೀಯ ವೈರಾಲಜಿ ಸಂಸ್ಥೆಯ ನಿರ್ದೇಶಕಿ ಪ್ರಿಯಾ ಅಬ್ರಹಾಂ ಹೇಳಿದ್ದಾರೆ.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಒಟಿಟಿ ವೇದಿಕೆಯಾದ ಭಾರತ ವಿಜ್ಞಾನಕ್ಕೆ ನೀಡಿದ ಸಂದರ್ಶನದಲ್ಲಿ, ಅಬ್ರಹಾಂ ಅವರು 2 ರಿಂದ 18 ವರ್ಷ ವಯಸ್ಸಿನವರಿಗೆ 2/3 ಹಂತದ ಕ್ಲಿನಿಕಲ್ ಪ್ರಯೋಗಗಳು ನಡೆಯುತ್ತಿವೆ. ಫಲಿತಾಂಶಗಳು ಶೀಘ್ರದಲ್ಲೇ ಲಭ್ಯವಾಗುತ್ತವೆ. ಅವುಗಳನ್ನು ನಿಯಂತ್ರಕರಿಗೆ ನೀಡಲಾಗುವುದು. ಬಹುಶಃ ಸೆಪ್ಟೆಂಬರ್ ಅಥವಾ ಸೆಪ್ಟೆಂಬರ್ ನಂತರ, ನಾವು ಮಕ್ಕಳಿಗೆ ಲಸಿಕೆ ನೀಡಬಹುದು. ಅದು ಕೊವಾಕ್ಸಿನ್ ಆಗಿರಬಹುದು. ಜೊತೆಗೆ ಝೈಡಸ್ ಕ್ಯಾಡಿಲಾ ಪ್ರಯೋಗಗಳು ನಡೆಯುತ್ತಿವೆ. ಆ ಲಸಿಕೆಗಳು ಸಹ ಲಭ್ಯವಾಗಬಹುದು ಎಂದು ಹೇಳಿದರು.
ಎನ್ಐವಿ, ಆರೋಗ್ಯ ಸಚಿವಾಲಯದ ಅಡಿಯಲ್ಲಿ ಬರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಅಡಿಯಲ್ಲಿರುವ ಒಂದು ಸಂಸ್ಥೆಯಾಗಿದೆ.