ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ರೋಗನಿರೋಧಕ ಶಕ್ತಿಗೆ ಪೂರಕ

ನವದೆಹಲಿ, ಆ. 09: ಒಂದು ಡೋಸ್ ಕೋವ್ಯಾಕ್ಸಿನ್ ಮತ್ತು ಒಂದು ಡೋಸ್ ಕೋವಿಶಿಲ್ಡ್ ಪಡೆಯುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಎರಡು ಬೇರೆ ಬೇರೆ ಲಸಿಕೆ ತೆಗೆದುಕೊಳ್ಳುವುದರಿಂದ ದೇಹದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀಳುವುದಿಲ್ಲ ಎಂದು ಕೇಂದ್ರ ಸರ್ಕಾರದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸ್ಪಷ್ಟಪಡಿಸಿದೆ.

ಐಸಿಎಂಆರ್ ತಂಡ ಈ ಬಗ್ಗೆ ಉತ್ತರಪ್ರದೇಶದಲ್ಲಿ ಸುಮಾರು 80 ಜನರನ್ನು ಆಯ್ಕೆಮಾಡಿ ಅದರಲ್ಲಿ 40 ಜನರಿಗೆ ಒಂದೇ ಲಸಿಕೆಯನ್ನು 2 ಡೋಸ್ ನೀಡಲಾಗಿತ್ತು. ಇನ್ನುಳಿದ 40 ಜನರಿಗೆ 1ಡೋಸ್ ಕೋವ್ಯಾಕ್ಸಿನ್ ಮತ್ತು 1 ಡೋಸ್ ಕೋವಿಶೀಲ್ಡ್ ನೀಡಲಾಗಿತ್ತು. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ವರದಿ ಪ್ರಕಾರ ಒಂದೇ ಲಸಿಕೆಯನ್ನು 2 ಬಾರಿ ಪಡೆದವರಿಗಿಂತ 1ಡೋಸ್ ಕೋವ್ಯಾಕ್ಸಿನ್ ಮತ್ತು 1ಡೋಸ್ ಕೋವೀಶಿಲ್ಡ್ ಪಡೆದವರರಿಗೆ ಹೆಚ್ಚು ರೋಗನಿರೋಧಕ ಶಕ್ತಿ ಉತ್ಪತ್ತಿಯಾಗಿರುವುದಾಗಿ ಐಸಿಎಂಆರ್ ತನ್ನ ಸಂಶೋಧನೆಯಲ್ಲಿ ತಿಳಿಸಿದೆ.

ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ 2 ಕೂಡ ಬೇರೆ ಬೇರೆ ರೀತಿಯ ಲಸಿಕೆಗಳಾಗಿದ್ದು, ಕೋವಿಶೀಲ್ಡ್ ಅಡೋನವೈರಡಸ್ ಲಸಿಕೆಯಾಗಿದ್ದರೆ ಕೋವ್ಯಾಕ್ಸಿನ್ ಮೃತ ವೈರೆಸ್ ಗಳನ್ನು ಬಳಸಿ ತಯಾರಿಸಿದ ಲಸಿಕೆಯಾಗಿದೆ. 2 ಲಸಿಕೆಗಳು ಬೇರೆ ಬೇರೆಯಾಗಿದ್ದರೂ ಕೂಡ ಹೆಚ್ಚಿನ ಅಡ್ದ ಪರಿಣಾಮಗಳು ಇಲ್ಲ ಎಂದು ಐಸಿಎಂಆರ್ ಸ್ಪಷ್ಟಪಡಿಸಿದೆ.

Exit mobile version