ಪಾಟ್ನಾದ ಏಮ್ಸ್ ನಲ್ಲಿ ಮಕ್ಕಳ ಮೇಲೆ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗ

ಬಿಹಾರ, ಜೂ. 03: ಭಾರತ್ ಬಯೋಟೆಕ್ ಸಿದ್ಧಪಡಿಸಿರುವ ಕೋವ್ಯಾಕ್ಸಿನ್ ಲಸಿಕೆಯನ್ನು ಮಕ್ಕಳಿಗೂ ನೀಡಲು ಉದ್ದೇಶಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಥಮ ಬಾರಿಗೆ ಪಾಟ್ನಾದ ಆಲ್ ಇಂಡಿಯಾ ಇನ್’ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್)ನಲ್ಲಿ ಮಕ್ಕಳ ಮೇಲೆ ಲಸಿಕೆ ಪ್ರಯೋಗ ಪ್ರಾರಂಭಿಸಲಾಗಿದೆ.

ಮೈಸೂರು ವೈದ್ಯಕೀಯ ಕಾಲೇಜಿನ ಅಧೀನದಲ್ಲಿರುವ ಚೆಲುವಾಂಬ ಮಕ್ಕಳ ಆಸ್ಪತ್ರೆ ಕೂಡ ಮಕ್ಕಳಿಗೆ ಲಸಿಕಾ ಪ್ರಯೋಗಕ್ಕೆ ಆಯ್ಕೆಗೊಂಡಿದೆ. ರಾಜ್ಯದಲ್ಲಿ ಮಕ್ಕಳ ಮೇಲೆ ಲಸಿಕಾ ಪ್ರಯೋಗಕ್ಕೆ ಆಯ್ಕೆಗೊಂಡ ಏಕೈಕ ಆಸ್ಪತ್ರೆ ಇದಾಗಿದೆ. ಸದ್ಯದಲ್ಲಿಯೇ ಮೈಸೂರಿನಲ್ಲೂ ಲಸಿಕೆ ನೀಡುವ ಕಾರ್ಯ ಪ್ರಾರಂಭಗೊಳ‍್ಳಲಿದೆ.

ಭಾರತೀಯ ಪ್ರಧಾನ ಔಷಧ ನಿಯಂತ್ರಕರು (ಡಿಸಿಜಿಐ) ಮೇ.11 ರಂದು 2 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗಕ್ಕೆ ನೀಡಿದ್ದರು. ಲಸಿಕೆ ಪಡೆದ ಮಕ್ಕಳ ಮೇಲೆ ಒಟ್ಟು ಆರು ತಿಂಗಳು ನಿಗಾ ವಹಿಸಿ ಯಾವುದೇ ಸಮಸ್ಯೆ ಇಲ್ಲದೆ ಇರುವುದು ಕಂಡು ಬಂದರೆ ಎಲ್ಲ ಮಕ್ಕಳಿಗೂ ನೀಡಲು ತೀರ್ಮಾನಿಸಲಾಗಿದೆ.

Exit mobile version