ಟಿ20 ವಿಶ್ವಕಪ್ ಹಿನ್ನಲೆ ಐಪಿಎಲ್‌ನಿಂದ ಹಿಂದೆ ಸರಿದ ಗೇಲ್

ದುಬೈ ಅ 2 : ಮುಂಬರುವ ಐಸಿಸಿ ಟಿ-20 ವಿಶ್ವಕಪ್‌ ಸಿದ್ಧ ತೆಗಾಗಿ ವೆಸ್ಟ್‌ಇಂಡೀಸ್‌ ಅರಂಭಿಕ ಆಟಗಾರ ಕ್ರಿಸ್ ಗೇಲ್ ಐಪಿಎಲ್ ತೊರೆಯುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಪಂಜಾಬ್‌ ಕಿಂಗ್ಸ್‌ ಸ್ಪಷ್ಟಪಡಿಸಿದೆ.

ಪ್ರಸ್ತುತ  ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ ಪರ ಆಡುತ್ತಿರುವ ಗೇಲ್ ಇದಕ್ಕೂ ಮುನ್ನ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬಯೋಬಬಲ್‌ ಮಾದರಿಯಲ್ಲೇ ಅರ್ಧದಲ್ಲೇ ಪಂದ್ಯವನ್ನು ತ್ಯೆಜಿಸಿದ್ದರು ಈ ಬಾರಿಯ ಐಪಿಎಲ್‌ನಲ್ಲೂ ಕೂಡ ಅವರು ಈ ನಿರ್ಧಾರವನ್ನು ಕೈಗೊಂಡಿದ್ದಾರೆ.

ನಾನು ಟಿ-20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್‌ಗೆ ಸಹಾಯ ಮಾಡುವತ್ತ ಗಮನ ಹರಿಸಲು ಬಯಸುತ್ತೇನೆ ಮತ್ತು ದುಬೈನಲ್ಲಿ ವಿರಾಮ ತೆಗೆದುಕೊಳ್ಳಲು ಬಯಸುತ್ತೇನೆ. ನನಗೆ ಸಮಯ ನೀಡಿದ ಪಂಜಾಬ್ ಕಿಂಗ್ಸ್‌ಗೆ ನನ್ನ ಧನ್ಯವಾದಗಳು, ಹಾಗೂ ನನ್ನ ಶುಭಾಶಯಗಳು ಮತ್ತು ನಾನು ಯಾವಾಗಲೂ ತಂಡದೊಂದಿಗೆ ಇರುತ್ತೇನೆ ಎಂದು ಗೇಲ್ ಹೇಳಿದ್ದಾರೆ.

ನಾನು ಕ್ರಿಸ್ ವಿರುದ್ಧ ಆಡಿದ್ದೇನೆ ಹಾಗೂ ಪಂಜಾಬ್ ಕಿಂಗ್ಸ್‌ನಲ್ಲಿ ಅವರಿಗೆ ತರಬೇತಿ ನೀಡಿದ್ದೇನೆ ಮತ್ತು ನಾನು ತಿಳಿದಿರುವಂತೆ ಅವರು ಯಾವಾಗಲೂ ಸಂಪೂರ್ಣ ವೃತ್ತಿಪರರಾಗಿದ್ದಾರೆ. ಒಂದು ತಂಡವಾಗಿ ನಾವು ಅವರ ನಿರ್ಧಾರವನ್ನು ಹಾಗೂ ಟಿ 20 ವಿಶ್ವಕಪ್‌ ತನ್ನನ್ನು ಸಿದ್ಧಪಡಿಸುವ ಆಸೆಯನ್ನು ಗೌರವಿಸುತ್ತೇವೆ ಎಂದು ಕೋಚ್ ಅನಿಲ್ ಕುಂಬ್ಳೆ ತಿಳಿಸಿದರು.

Exit mobile version