`ಮಾನ್ಸೂನ್’ನಲ್ಲಿ ಅರಳಿದ ಸಂಬಂಧಗಳ `ರಾಗ’ ; ಅಂತ್ಯದಲ್ಲಿ ಪ್ರೇಕ್ಷಕರಿಗೆ ಕಾದಿದೆ ಟ್ವಿಸ್ಟ್, ಇಲ್ಲಿದೆ ಓದಿ ಸಂಪೂರ್ಣ ವಿಮರ್ಶೆ

Kannada Cinema - Monsoon raaga

Cinema Critic : ಇಂದು ನಮ್ಮ ಇಂದಿನ ಯುವಪೀಳಿಗೆ ವೀಕ್ಷಿಸಲು ಅರಸಿ, ಬಯಸುವ ಚಲನಚಿತ್ರಗಳು (Movies) ಸಾಲು ಸಾಲಾಗಿ ಹೊರಹೊಮ್ಮುತ್ತಿರುವುದು ನಿಜಕ್ಕೂ ಸಂತಸದ (Happy) ಸಂಗತಿ.

ಅದರಲ್ಲೂ ವಿಶೇಷವಾಗಿ ನಮ್ಮ ಕನ್ನಡ ಚಿತ್ರರಂಗದಿಂದ (Kannada Film Industry) ಮೂಡಿಬರುತ್ತಿರುವುದು ಮತ್ತಷ್ಟು ಖುಷಿ ಹಾಗೂ ಹೆಮ್ಮೆಯ ಸಂಗತಿ.

ಸಮಾಜದ ನೈಜ್ಯ (Real) ಘಟನೆಗಳು, ಸಂದರ್ಭಗಳು ಸಿನಿಮಾ ಮೂಲಕ ಚಿತ್ರಣ ಮೂಡಿಸುವ ಕೆಲಸ ಗಮನಾರ್ಹ. ಹಲವು ಸನ್ನಿವೇಶ,

ಘಟನೆಗಳನ್ನು (Incident) ಚಿತ್ರಿಸಿ ಪರದೆಯ ಮುಖೇನ ಕನ್ನಡಿಯಂತೆ ತೋರಿಸುವುದು ಒಬ್ಬ ಮನುಷ್ಯನಿಗೆ ತಿಳಿಯಾಗಿ ಅರ್ಥೈಸುವ ಒಂದು ಸುಲಭ ಮಾರ್ಗ.

ಕೆಲ ಸನ್ನಿವೇಶ, ಘಟನೆಗಳು ಮಾತ್ರ ಕಪಲೋ ಕಲ್ಪಿತವಾಗುವುದು ಕೊಂಚ ಬೇಸರವಾದರೂ, ಸಿನಿಮಾ ಪೂರ ಮನರಂಜನೆ ಅಂಶವನ್ನು ಗಮನಹರಿಸುವ ನಿಟ್ಟಿನಲ್ಲಿ ಅದು ಅನಿವಾರ್ಯ! ಇದನ್ನು ಸಿನಿಪ್ರೇಕ್ಷಕರು ಕೂಡ ಒಪ್ಪಿಕೊಳ್ಳುತ್ತಾರೆ.

ಈ ಹಿಂದೆ ಕನ್ನಡ ಚಿತ್ರರಂಗವನ್ನು ಅನ್ಯ (Other) ಚಿತ್ರರಂಗದವರು ವೀಕ್ಷಿಸುವುದು, ಗಮನಹರಿಸುವುದು, ಪ್ರೋತ್ಸಾಹಿಸಿ, ಬೆಂಬಲಿಸಿ ಮಾತನಾಡುವುದು ಬಹಳ ಕಡಿಮೆ ಪ್ರಮಾಣವಾಗಿತ್ತು.

ಆದ್ರೆ, ಇಂದು ನಮ್ಮ ಕನ್ನಡ (Kannada) ಚಿತ್ರರಂಗವನ್ನು ಕೇವಲ ವೀಕ್ಷಿಸಿ, ಹೊಗಳುವುದಲ್ಲ! ನಮ್ಮ ಕನ್ನಡ ಸಿನಿಮಾಗಳನ್ನು ಅನುಸರಿಸಿ, ಕನ್ನಡ ಚಿತ್ರರಂಗದವರಂತೆ ನಾವು ಚಿತ್ರಿಸಬೇಕು,

ಶ್ಲಾಘನೆ, ಮೆಚ್ಚುಗೆ ಪಡೆಯಬೇಕು ಎಂಬ ಹಠಕ್ಕೆ ನಿಂತಿದ್ದಾರೆ ಎಂದರೆ ಆ ಪೈಪೋಟಿಗೆ ನಮ್ಮ ಕನ್ನಡ ಚಿತ್ರರಂಗ ಹಾಗೂ ಕನ್ನಡಿಗರೇ ಕಾರಣ.

ಸದ್ಯ ಇದೇ ಸಾಲಿಗೆ ಸೇರಲು ನಟರಾಕ್ಷಸ ಡಾಲಿ ಧನಂಜಯ (Dolly Dhananjaya) ಅಭಿನಯದ ಮಾನ್ಸೂನ್ ರಾಗ (Monsoon Raga) ಸಿನಿಮಾ ಸೆ.16 ಶುಕ್ರವಾರ ರಾಜ್ಯಾದ್ಯಂತ ಯಶಸ್ವಿಯಾಗಿ ಬಿಡುಗಡೆಯಾಗಿದೆ.

ಬಿಡುಗಡೆಯಾದ ಸಿನಿಮಾ ಹೇಗಿದೆ? ಯಾವ ಅಂಶ ಸಿನಿರಸಿಕರಿಗೆ ಇಷ್ಟವಾಯಿತು? ಇಷ್ಟವಾಗಲಿಲ್ಲ? ಎಂಬುದನ್ನು ಇಂದಿನ ನನ್ನ ವಿಮರ್ಶೆಯಲ್ಲಿ ತಿಳಿಸುವ ಪ್ರಯತ್ನ, ಹಾಗೆ ತಿರುಗಿಸಿ ನಿಮ್ಮ ಓದುವ `ರಾಗ’ವನ್ನು ಮಾನ್ಸೂನ್ `ರಾಗ’ದತ್ತ.

ಪ್ರತಿ ಚಿತ್ರದ ಪ್ರಾರಂಭದಲ್ಲೂ ನಟನ ಎಂಟ್ರಿ (Entry) ವಿಶೇಷವಾಗಿ ಪರಿಚಯಿಸುವುದು ಸರ್ವೆ ಸಮಾನ್ಯ. ಆದ್ರೆ, ಮಾನ್ಸೂನ್ ರಾಗದ ಪ್ರಾರಂಭದಲ್ಲಿ ನಟನ ಎಂಟ್ರಿ ಇಲ್ಲ, ಬದಲು ಪ್ರಮುಖ ಪಾತ್ರದ ಎಂಟ್ರಿಯೇ ಪ್ರೇಕ್ಷಕರಿಗೆ ಕೊಂಚ ಗೊಂದಲ ಹುಟ್ಟಿಸಿತು.

ನಾವು ಬದುಕುವ ಬದುಕಿನಲ್ಲಿ ಎದುರಿಸುವ ಕೆಲ ಸನ್ನಿವೇಶಗಳು, ಸಂದರ್ಭಗಳು, ಕಾಣುವ ಭಾವನೆಗಳು ಈ ಚಿತ್ರದ ಪ್ರಮುಖ ಅಂಶ.

ಇದನ್ನೂ ಓದಿ : https://vijayatimes.com/lucky-heroine-sangeetha-sringeri/

ಸಿನಿಮಾ ಪೂರ ಸುಂದರವಾದ ಸಂಬಂಧಗಳನ್ನು ಹಲವು ದೃಷ್ಟಿಕೋನಗಳಲ್ಲಿ (Perspective) ಸಿನಿಪ್ರೇಕ್ಷಕರಿಗೆ ಪರಿಚಯಿಸಿರುವ ಪರಿ ನಿಜಕ್ಕೂ ಗಮನಾರ್ಹ.

ನಾಲ್ಕು ದಿಕ್ಕಿನಲ್ಲಿ ಸಾಗುವ ನಾಲ್ಕು ಸಂಬಂಧಗಳ ಮಧುರ ಭಾವನೆಗಳು ಪ್ರೇಕ್ಷಕರಿಗೆ ಏನು ತಿಳಿಸಲು ಹೊರಟಿದೆ ಎಂಬುದು ಪ್ರಾರಂಭದಲ್ಲಿ ಪ್ರಶ್ನಾವಳಿಯಂತೆ ಕಾಡಿದರೂ, ಅಂತ್ಯದಲ್ಲಿ ಸೂಕ್ತ ಉತ್ತರವನ್ನು ವಿಮರ್ಶಾತ್ಮಕವಾಗಿ ನೀಡುತ್ತದೆ.

ವಯಸ್ಸಿನ ಅಂತರದ ಮುಖೇನ ಎಳೆ ಎಳೆಯಾಗಿ ಕಥೆಯನ್ನು ಸಿನಿಪ್ರೇಕ್ಷಕರಿಗೆ ಅರ್ಥೈಸುವ ಪ್ರಯತ್ನವನ್ನು ಚಿತ್ರತಂಡ ಅಚ್ಚುಕಟ್ಟಾಗಿ ನಿರ್ವಹಿಸಿದೆ.

ಚಿತ್ರದಲ್ಲಿ ಕೇವಲ ನಟ ಡಾಲಿ ಧನಂಜಯ ಹಾಗೂ ನಟಿ (Actress) ರಚಿತಾ ರಾಮ್ (Rachitha Ram) ಪಾತ್ರ ಮಾತ್ರವಲ್ಲ ಪ್ರತಿಯೊಂದು ಪಾತ್ರವೂ ಕೂಡ ಪ್ರಮುಖವಾಗಿದೆ ಮತ್ತು ತನ್ನದೇ ಕಥೆಯನ್ನು ವಿವರಿಸುತ್ತದೆ ಎಂಬುದು ವಿಶೇಷ.

ಇದನ್ನೂ ಓದಿ : https://vijayatimes.com/unknown-facts-about-bloodwood-tree/

ಚಿತ್ರದ ಮೊದಲ ಹಾಡಿನ ಚಿತ್ರಣ, ದೃಶ್ಯ ಪ್ರೇಕ್ಷಕನ ಕಣ್ಣಿನಲ್ಲಿ ಅರಳಿದೆ. ಚಿತ್ರದ ಶೀರ್ಷಿಕೆಯಂತೆ ಮಾನ್ಸೂನ್ ಸಮಯದಲ್ಲೇ ಹೆಚ್ಚು ಚಿತ್ರೀಕರಿಸಿ, ಮಾನ್ಸೂನ್ ಸಮಯವನ್ನು ತೋರಿಸಿರುವುದು ಕಣ್ಣಿಗೆ ತಂಪಾದರೆ,

ಚಿತ್ರದ ಅಂತ್ಯದವರೆಗೂ ಕಥೆಯನ್ನು ನಮಗೆ ತಲುಪಿಸುವಲ್ಲಿ ಶ್ರಮಿಸುವ ಹಿನ್ನೆಲೆ ಸಂಗೀತವೂ ಕಿವಿಗೆ ಇಂಪಾಗಿದೆ.

ನಟ ಅಚ್ಯುತ್ ಕುಮಾರ್(Achyuth Kumar) ಪಾತ್ರವೂ ಸಾಕಷ್ಟು ವಿಶೇಷವನ್ನು ಹೊತ್ತು ತೂಗಿದ್ದು, ಹಿರಿಯ ನಟಿ ಸುಹಾಸಿನಿ, ಶೋಭರಾಜ್, ನಟಿ ಯಶಾ ಶಿವಕುಮಾರ್ (ರಾಗ ಸುಧಾ) ಸೇರಿದಂತೆ ಪ್ರತಿಯೊಬ್ಬರ ಪಾತ್ರವೂ ಅದ್ಭುತವಾಗಿ ಮೂಡಿಬಂದಿದೆ.

ಮೊದಲ ಹಂತದಲ್ಲಿ ಪ್ರೇಕ್ಷಕನಿಗೆ ಕಥೆಯನ್ನು ತಲುಪಿಸುವಲ್ಲಿ ಕೊಂಚ ವಿಫಲವಾದರೂ, ಎರಡನೇ ಹಂತದಲ್ಲಿ ಚಿತ್ರತಂಡ ಸಫಲವಾಗಿದೆ.

ಚಿತ್ರಕ್ಕೆ ಕಲಾವಿದರ ಶ್ರಮ ಎಷ್ಟಿದೆಯೋ ಅದರ ದುಪ್ಪಟ್ಟು ಶ್ರಮ ಚಿತ್ರದ ಸಿನಿಮಾಟೋಗ್ರಾಫರ್(Cinematographer) ಹಾಗೂ ಸಂಕಲನಕಾರರದ್ದು (Editor) ಎಂಬುದು ಇಲ್ಲಿ ಗಮನಾರ್ಹ ಅಂಶ.

ಚಿತ್ರದ ಪ್ರತಿಯೊಂದು ದೃಶ್ಯವನ್ನು ಅಮೋಘವಾಗಿ ತೋರಿಸಿರುವ ಸಿನಿಮಾಟೋಗ್ರಾಫರ್ ಎಸ್.ಕೆ ರಾಂ(SK Rao) ಮತ್ತು ಸಂಕಲನಕಾರ ಹರೀಶ್ ಕೊಮ್ಮೆ(Harish Komme) ಅವರ ಕೈಚಳಕ ಅದ್ಭುತವಾಗಿ ಮೂಡಿಬಂದಿದೆ.

ಈ ಇಬ್ಬರ ಕೆಲಸ ಸಿನಿಮಾಗೆ ಸಾಕಷ್ಟು ಮೆರುಗನ್ನು ತಂದುಕೊಟ್ಟಿದೆ ಎಂಬುದರಲ್ಲಿ ಅನುಮಾನವೇ ಇಲ್ಲ! ಇವರಿಬ್ಬರ ಕೆಲಸಕ್ಕೆ ಈಗಾಗಲೇ ಸಿನಿಪ್ರೇಕ್ಷಕರಿಂದ ಮೆಚ್ಚುಗೆ ಹಾಗೂ ಶ್ಲಾಘನೆಗಳ ಮಹಾಪೂರವೇ ಹರಿದುಬರುತ್ತಿದೆ.

https://youtu.be/Gd_hNZ3VFB8

ಕನ್ನಡಿಗರಲ್ಲಿ ಮನವಿ : “ಕನ್ನಡ ಸಿನಿಮಾಗಳನ್ನು ಚಿತ್ರಮಂದಿರಗಳಿಗೆ ಹೋಗಿ ವೀಕ್ಷಿಸಿ ವಿನಃ ಪೈರಸಿಯಲ್ಲಿ ಬಂದ ಲಿಂಕ್ ಅಥವಾ ಓಟಿಟಿ ರಿಲೀಸ್ಗೆ ಕಾಯಬೇಡಿ.

ಕನ್ನಡ ಚಿತ್ರಗಳನ್ನು ಚಿತ್ರಮಂದಿರಕ್ಕೆ ಹೋಗಿ ವೀಕ್ಷಿಸುವ ಮೂಲಕ ಆಯಾ ಸಿನಿಮಾದ ನಟ, ನಟಿ, ತಂತ್ರಜ್ಞರು ಸೇರಿದಂತೆ ತೆರೆ ಹಿಂದಿನ ತಂತ್ರಜ್ಞರು, ಲೈಟ್ ಬಾಯ್ಸ್ ಎಲ್ಲರ ಶ್ರಮಕ್ಕೆ ಪ್ರೋತ್ಸಾಹ ನೀಡಿದಂತೆಯೇ ಸರಿ”.

ಒಟ್ಟಾರೆ `ಮಾನ್ಸೂನ್ ರಾಗ’ ಸಿನಿಮಾವೂ ಅದ್ಬುತವಾಗಿ ಮೂಡಿಬಂದಿದ್ದು, ದೃಶ್ಯದ ಮೂಲಕ ಕಣ್ಣಿಗೆ ತಂಪನ್ನು ನೀಡಿದರೆ, ಹಿನ್ನೆಲೆ ಸಂಗೀತ ಕಿವಿಗೆ ಇಂಪನ್ನು ನೀಡಿದೆ. ಸಂಬಂಧಗಳ ಭಾವನೆಗಳು ಮನವನ್ನು ಬೆಸೆದು ಅಂತಿಮವಾಗಿ ಸಂದೇಶವನ್ನು ಕೊಟ್ಟಿದ್ದು, ಪ್ರೇಕ್ಷಕರಿಗೆ ಹಿತವೆನಿಸಿದೆ.
Exit mobile version