ನದಿಯಲ್ಲಿ ಸ್ನಾನ ಮಾಡುತ್ತಿದ್ದ 10 ವರ್ಷದ ಬಾಲಕನನ್ನು ನುಂಗಿದ ಮೊಸಳೆ ; ವೀಡಿಯೋ ವೈರಲ್

MP

ಮಧ್ಯಪ್ರದೇಶದ(MadhyaPradesh) ಶಿಯೋಪುರದಲ್ಲಿ ನದಿಯಲ್ಲಿ ಸ್ನಾನ ಮಾಡುತ್ತಿದ್ದ 10 ವರ್ಷದ ಬಾಲಕನನ್ನು ಮೊಸಳೆ ನುಂಗಿದೆ.

ಸೋಮವಾರ ಬೆಳಗ್ಗೆ ಚಂಬಲ್ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಮೊಸಳೆ ಬಾಲಕನ ಮೇಲೆ ಏಕಾಏಕಿ ದಾಳಿ ಮಾಡಿದೆ ಎನ್ನಲಾಗಿದೆ.

ಸ್ಥಳದಲ್ಲಿದ್ದ ಸ್ಥಳೀಯರು ಕೂಡಲೇ ಬಾಲಕನ ಕುಟುಂಬ ಹಾಗೂ ಸಂಬಂಧಿಕರಿಗೆ ಕರೆ ಮಾಡಿ, ದೊಣ್ಣೆ, ಹಗ್ಗ ಹಾಗೂ ಬಲೆಯಿಂದ ಮೊಸಳೆಯನ್ನು ಹಿಡಿದಿದ್ದಾರೆ. ಹಗ್ಗ, ಬಲೆ ಬಳಸಿ ಮೊಸಳೆಯನ್ನು ನದಿಯಿಂದ ಹೊರಗೆ ಎಳೆತಂದಿದ್ದಾರೆ.

ಅಷ್ಟರಲ್ಲಿ ಘಟನೆಯ ಬಗ್ಗೆ ಮಾಹಿತಿ ಪಡೆದ ಅಲಿಗೇಟರ್ ವಿಭಾಗದ ತಂಡ ಹಾಗೂ ಪೊಲೀಸ್ ತಂಡ ಸ್ಥಳಕ್ಕೆ ಕೂಡಲೇ ಆಗಮಿಸಿದೆ. ಎರಡೂ ತಂಡಗಳು ಮೊಸಳೆಯನ್ನು ಗ್ರಾಮಸ್ಥರ ಹಿಡಿತದಿಂದ ರಕ್ಷಿಸಲು ಯತ್ನಿಸಿದೆ. ಆದ್ರೆ, ಸಂಜೆಯವರೆಗೂ ಬಾಲಕನ ಕುಟುಂಬಸ್ಥರು ಇದಕ್ಕೆ ಒಪ್ಪಿರಲಿಲ್ಲ.

10 ವರ್ಷದ ಬಾಲಕನ ಕುಟುಂಬಸ್ಥರು ಮೊಸಳೆಯ ಹೊಟ್ಟೆಯಲ್ಲಿ ಮಗು ಇನ್ನೂ ಜೀವಂತವಾಗಿರಬಹುದೆಂಬ ನಿರೀಕ್ಷೆಯಲ್ಲಿದ್ದರು. ಮಗುವನ್ನು ಹೊರನೂಕಿದರೆ ಮಾತ್ರ ಮೊಸಳೆಯನ್ನು ಬಿಡುತ್ತೇವೆ ಎಂದು ಒತ್ತಾಯಿಸಿದ್ದಾರೆ.

ರಘುನಾಥಪುರ ಪೊಲೀಸ್ ಠಾಣೆಯ ಉಸ್ತುವಾರಿ ಶ್ಯಾಮ್ ವೀರ್ ಸಿಂಗ್ ತೋಮರ್ ಪ್ರಕಾರ, “ಬಾಲಕ ಸ್ನಾನ ಮಾಡುವಾಗ ನದಿಯ ಆಳದ ಸಮೀಪ ಹೋಗಿದ್ದಾನೆ. ಈ ಸಮಯದಲ್ಲಿ ಮಗುವನ್ನು ಮೊಸಳೆ ನುಂಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ನಂತರ ಬಲೆ ಮತ್ತು ಕೋಲುಗಳನ್ನು ಬಳಸಿ ಮೊಸಳೆಯನ್ನು ಹಿಡಿದಿದ್ದಾರೆ. https://vijayatimes.com/siddaramaiah-slams-state-bjp-through-tweet/

ಅಲಿಗೇಟರ್ ಇಲಾಖೆ ಈ ವಿಷಯದಲ್ಲಿ ಕ್ರಮವನ್ನು ಪ್ರಾರಂಭಿಸಿದ್ದು, ಬಳಿಕ ಪೊಲೀಸ್ ಅಧಿಕಾರಿಗಳು ಹಾಗೂ ಅಲಿಗೇಟರ್ ಇಲಾಖೆ ಕುಟುಂಬಸ್ಥರನ್ನು ಮನವೊಲಿಸಿ ಗ್ರಾಮಸ್ಥರಿಂದ ಮೊಸಳೆಯನ್ನು ಬಿಡಿಸಿದ್ದಾರೆ ಎಂದು ವರದಿ ತಿಳಿಸಿದೆ. ಈ ಘಟನೆಗೆ ಸಂಬಂಧಪಟ್ಟ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್(Viral) ಆಗಿದೆ.
Exit mobile version