ಕ್ರಿಪ್ಟೋ ಹೂಡಿಕೆ ವಂಚನೆ : ಬರೋಬ್ಬರಿ 5.85 ಲಕ್ಷ ರೂ. ಕಳೆದುಕೊಂಡ ಅಧಿಕಾರಿ!

Mumbai : ವಿಮಾನ ನಿಲ್ದಾಣದಲ್ಲಿ ನೇಮಕಗೊಂಡ ಕಾನೂನು ಜಾರಿ ಸಂಸ್ಥೆಯ ಸಹಾಯಕ ಕಮಾಂಡೆಂಟ್ ಕ್ರಿಪ್ಟೋ ಕರೆನ್ಸಿ(Crypto Investment Fraud) ಸೈಬರ್ ವಂಚನೆಗೆ ಸಿಲುಕಿ ಬರೋಬ್ಬರಿ 5.85 ಲಕ್ಷ ರೂ. ಕಳೆದುಕೊಂಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಡಿಸೆಂಬರ್ 11 ರಂದು, ವಂಚನೆಗೊಂಡ 33 ವರ್ಷದ ವ್ಯಕ್ತಿ ನೀಡಿರುವ ದೂರಿನಲ್ಲಿ ಈ ರೀತಿ ಉಲ್ಲೇಖವಾಗಿದೆ. ಬ್ರಿಶಾ ಎಂಬ ಮಹಿಳೆಯಿಂದ ನಾನು ವಾಟ್ಸಾಪ್ (Whatsapp) ಸಂದೇಶವನ್ನು ಸ್ವೀಕರಿಸಿದೆ.

ಅವರು ನೇಮಕಾತಿ ಏಜೆನ್ಸಿ, ಗ್ಲೋಬಲ್ ಚಾಟ್ ಪ್ಲಾಟ್‌ಫಾರ್ಮ್‌ನ ಕಾರ್ಯನಿರ್ವಾಹಕರು (Crypto Investment Fraud) ಎಂದು ಹೇಳಿದರು.

ತಾತ್ಕಾಲಿಕ ಕೆಲಸವನ್ನು ನೀಡುತ್ತೇವೆ ಎಂದು ಹೇಳಿ, ಕೆಲವು ಯೂಟ್ಯೂಬ್ ವೀಡಿಯೋಗಳನ್ನು ಲೈಕ್ ಮಾಡಬೇಕು ಎಂದು ಹೇಳಿದರು. ನಾನು ಅದಕ್ಕೆ ಒಪ್ಪಿಕೊಂಡ ಬಳಿಕ,

ಮಹಿಳೆ ನನಗೆ ಕೆಲವು ಯೂಟ್ಯೂಬ್ (YouTube) ವೀಡಿಯೊ ಲಿಂಕ್‌ಗಳನ್ನು ಕಳುಹಿಸಿದರು. ಅವರು ಕಳಿಸಿದ ವೀಡಿಯೊಗಳನ್ನು ಹೇಳಿಕೊಟ್ಟಂತೆ ಅದನ್ನು ಲೈಕ್‌ ಮಾಡಿದೆ.

ಇದನ್ನೂ ಓದಿ : https://vijayatimes.com/rakhi-sawant-statement/

ಅವರ ಅನ್ವಯದಂತೆ ಅವುಗಳ ಸ್ಕ್ರೀನ್‌ಶಾಟ್‌ಗಳನ್ನು ಟೆಲಿಗ್ರಾಮ್ (Telegram) ಚಾಟಿಂಗ್ ಗ್ರೂಪ್‌ಗಳಾದ ರಿಸೆಪ್ಷನಿಸ್ಟ್ ರಿಯಾ ಮತ್ತು ವರ್ಕಿಂಗ್ ಟಾಸ್ಕ್ ಗ್ರೂಪ್ಗೆ ಕಳುಹಿಸಿದೆ. ಆಕೆ ತಿಳಿಸಿದಂತೆ,

ನೀಡಿದ ಭರವಸೆ ಪ್ರಕಾರ ತಿಳಿಸಿದ ಮೊತ್ತ ಖಾತೆಗೆ ಬಂದು ತಲುಪಿತು! ಇದೇ ರೀತಿಯ ಸೂಚನೆಗಳನ್ನು ಅನುಸರಿಸಿ ನಾನು ಉತ್ತಮ ಮೊತ್ತವನ್ನು ಗಳಿಸಿದೆ.

ತದನಂತರ, ಟೆಲಿಗ್ರಾಮ್ ಗ್ರೂಪಿನ ವರ್ಕಿಂಗ್ ಟಾಸ್ಕ್ ಗ್ರೂಪ್ ನಲ್ಲಿ ಸಂದೇಶವನ್ನು ಹಂಚಿಕೊಳ್ಳಲಾಯಿತು. ದೊಡ್ಡ ಮೊತ್ತವನ್ನು ಗಳಿಸಲು ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡಲು ನನ್ನನ್ನು ಕೇಳಿದರು.

ನಾನು ಕ್ರಿಪ್ಟೋ-ಕರೆನ್ಸಿಯಲ್ಲಿ ಹೂಡಿಕೆ ಮಾಡಲು ಒಪ್ಪಿಕೊಂಡೆ ಮತ್ತು ಸಂಬಂಧಪಟ್ಟ ವೆಬ್‌ಸೈಟ್‌ನಲ್ಲಿ (Website) ಸ್ವತಃ ನೋಂದಾಯಿಸಿಕೊಂಡೆ.

ತದನಂತರ ಆಕೆ ನೀಡಿದ ಖಾತೆಗೆ ಯುಪಿಐ (UPI) ಮೂಲಕ ನಾನು ಹಣವನ್ನು ಜಮಾ ಮಾಡಲು ಪ್ರಾರಂಭಿಸಿದೆ! ಈ ಬಾರಿ ಲಾಭ ನೇರವಾಗಿ ನನ್ನ ಬ್ಯಾಂಕ್ ಖಾತೆಗೆ ಜಮಾ ಆಗದೆ, ವೆಬ್ ಸೈಟ್ ನಲ್ಲಿ ಅವರ ಹೆಸರಿನಲ್ಲಿ ಸೃಷ್ಟಿಸಿರುವ ವರ್ಚುವಲ್ ವ್ಯಾಲೆಟ್ ನಲ್ಲಿ ಠೇವಣಿಯಾಗಿದೆ.

ಅವರ ವರ್ಚುವಲ್ ಖಾತೆಯಲ್ಲಿ ತೋರಿಸಿರುವ ಅಂಕಿಅಂಶಗಳು, ಕ್ರಿಪ್ಟೋಕರೆನ್ಸಿಯಲ್ಲಿ ಹೆಚ್ಚಿನ ಹಣವನ್ನು ಹೂಡಿಕೆ ಮಾಡಲು ನನ್ನನ್ನು ಪ್ರೇರೇಪಿಸಿತು ಎಂದು ವಂಚಿತಗೊಂಡ ವ್ಯಕ್ತಿ ಹೇಳಿರುವುದನ್ನು ಪೊಲೀಸ್ ಅಧಿಕಾರಿಯೊಬ್ಬರು (Police officer) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆರೋಪಿಯು ಕ್ರಿಪ್ಟೋಕರೆನ್ಸಿ ಸಂಸ್ಥೆಯಲ್ಲಿ ತನ್ನ ನೋಂದಣಿಯ ಪ್ರಮಾಣಪತ್ರವನ್ನು ಕಳುಹಿಸಿದ್ದಾರೆ.

ಇದನ್ನೂ ಓದಿ : https://vijayatimes.com/high-court-stayed-reservation/

ಆದರೆ ವಂಚಿತಗೊಂಡ ವ್ಯಕ್ತಿ ತಡವಾಗಿ ಆಕೆಯ ಪ್ರಮಾಣಪತ್ರ ನಕಲಿ ಎಂಬುದನ್ನು ಕಂಡುಹಿಡಿದಿದ್ದಾರೆ ಮತ್ತು ಅಕ್ರಮದ ಬಗ್ಗೆ ಶಂಕಿಸಿದ್ದಾರೆ. ತನ್ನೆಲ್ಲಾ ಸಂಪಾದನೆಯ ಹಣವನ್ನು ಹಿಂಪಡೆಯಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಆದ್ರೆ ಇದನ್ನು ಪ್ರಶ್ನಿಸುವ ಮುನ್ನವೇ ಅವರು 5.85 ಲಕ್ಷ ರೂ. ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Exit mobile version