ಪಠ್ಯಪುಸ್ತಕ ವಿವಾದ ; 70 ಜನ ಕೂಗಿದರೆ ಅದು ಜನಾಕ್ರೋಶವಲ್ಲ : ಸಿ.ಟಿ ರವಿ!

CT Ravi

ಪೂರ್ವಾಗ್ರಹಪೀಡಿತ ಜನರನ್ನು ನಾವು ಎದುರಿಸುತ್ತೇವೆ. ರಾಜ್ಯದಲ್ಲಿ 7 ಕೋಟಿ ಜನಸಂಖ್ಯೆ ಇದೆ. ಆದರೆ ಪಠ್ಯಪರಿಷ್ಕರಣೆ ವಿರುದ್ದ 70 ಜನ ಘೋಷಣೆ ಕೂಗಿದರೆ ಅದು ಜನಾಕ್ರೋಶವಲ್ಲ.

ಬಿಜೆಪಿ(BJP) ಅಧಿಕಾರಕ್ಕೆ ಬಂದ ದಿನದಿಂದಲೂ ಅವರು ಆರೋಪ ಮಾಡುತ್ತಲೇ ಬಂದಿದ್ದಾರೆ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ(CT Ravi) ಹೇಳಿದರು. ಟೂಲ್‍ಕಿಟ್ ರಾಜಕೀಯಕ್ಕೆ ಔಷಧಿಯಿಲ್ಲ. ನರೇಂದ್ರ ಮೋದಿ(Narendra Modi) ಪ್ರಧಾನಿ ಆದ ನಂತರ ‘ದೇಶದಲ್ಲಿ ಅಸಹಿಷ್ಣುತೆ’ ವಾತಾವರಣೆವಿದೆ ಎಂದು ಕೆಲವರು ಪ್ರಶಸ್ತಿ ವಾಪಸ್ ನೀಡಿದರು. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ.

ಇನ್ನು ಪಠ್ಯಪುಸ್ತಕ ಕುರಿತು ಅರಿವು ಇಲ್ಲದವರಿಗೆ ಮನವರಿಕೆ ಮಾಡಿಕೊಡುತ್ತೇವೆ. ಕುವೆಂಪು(Kuvempu) ಅವರಿಗೆ ಅವಮಾನ ಮಾಡಲಾಗಿದೆ ಎಂಬ ವಿಚಾರದ ಕುರಿತು ನಿರ್ಮಲಾನಂದ ಶ್ರೀಗಳು ಹೇಳಿಕೆ ನೀಡಿದ್ದರು. ನಂತರ ಅವರಿಗೆ ನೈಜ ಸಂಗತಿಯ ಕುರಿತು ಮನವರಿಕೆ ಮಾಡಿಕೊಟ್ಟಿದ್ದೇವೆ. ಮೊದಲು ಕುವೆಂಪು ಅವರು 7 ಪಠ್ಯಗಳಿದ್ದವು. ಈಗ 10 ಪಠ್ಯಗಳನ್ನು ಸೇರ್ಪಡೆ ಮಾಡಲಾಗಿದೆ ಎಂದು ತಿಳಿಸಿದ್ದೇವೆ. ‘ತಮಗೆ ಗೊತ್ತಿರಲಿಲ್ಲ’ ಎಂದು ಶ್ರೀಗಳು ತಿಳಿಸಿದ್ದಾರೆ ಎಂದರು.

ನಾವು ಅಪಪ್ರಚಾರವನ್ನು ಒಪ್ಪುವುದಿಲ್ಲ. ನಮ್ಮ ಕಡೆಯಿಂದ ತಪ್ಪುಗಳಾಗಿದ್ದಲ್ಲಿ ಅದನ್ನು ಸರಿಪಡಿಸಿಕೊಳ್ಳುತ್ತೇವೆ. ನಮಗೆ ಅಹಂಭಾವ ಇಲ್ಲ. ವಾಸ್ತವ ಸಂಗತಿಗಳನ್ನು ಜನರ ಮುಂದಿಡುತ್ತೇವೆ. ಆದರೆ ಕೆಲವರು ಅಪಪ್ರಚಾರಗಳನ್ನು ಮಾಡುವ ಮೂಲಕ ತಾವು ಇನ್ನೂ ಬದುಕಿದ್ದೇವೆ ಎಂದು ತೋರಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

Exit mobile version