ಧ್ವನಿವರ್ಧಕ ವಿವಾದ ; ನಾವು ನ್ಯಾಯಾಲಯದ ಪರ, ಪರಿಸರ ಪರ : ಸಿ.ಟಿ ರವಿ!

Political

ರಾಜ್ಯದಲ್ಲಿ ಒಂದಲ್ಲ ಒಂದು ವಿವಾದಗಳು ಚುನಾವಣೆ ಸಮೀಪಿಸುತ್ತಿದ್ದಂತೆ ಬುಗಿಲೇಳುತ್ತಿವೆ! ಹೌದು, ರಾಜ್ಯ ಚುನಾವಣೆ(State Election) ದಿನಕ್ಕೆ ಕ್ಷಣಗಣನೆ ಆರಂಭಗೊಳ್ಳುತ್ತಿದ್ದಂತೆ ರಾಜಕೀಯ(Political) ಹುನ್ನಾರಗಳು ಬಾಣದಂತೆ ಒಂದರ ಹಿಂದೆ ಒಂದು ಜನಸಾಮಾನ್ಯರ ಮೇಲೆ ದಾಳಿ ಮಾಡುತ್ತಿವೆ.

ಹಿಜಾಬ್(Hijab) ವಿವಾದ ಕೇಳಿಬಂದ ಬೆನ್ನಲ್ಲೇ ಹಲಾಲ್ ಕಟ್(Halal Cut) ಮಾಂಸ ನಿಷೇಧವಾಗಬೇಕು ಎಂಬ ರಾಜಕೀಯ ಪ್ರಹಾರದ ನಡುವೆ, ಸದ್ಯ ಉರಿಯೋ ಬೆಂಕಿಗೆ ತುಪ್ಪ ಸುರಿದಂತೆ ಮಸೀದಿಗಳಲ್ಲಿ ಬಳಸುವ ಧ್ವನಿವರ್ಧಕಗಳು ಶಬ್ದ ಮಾಲಿನ್ಯ ಮಾಡುತ್ತದೆ. ಧ್ವನಿವರ್ಧಕಗಳ ಅಳವಡಿಕೆಗೆ ಅನುಮತಿ ನೀಡಬಾರದು ಅದಕ್ಕೆ ಸೂಕ್ತ ನಿಷೇಧವನ್ನು ಹೇರಬೇಕು ಎಂಬ ರಾಜಕೀಯ ಹೇಳಿಕೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಅಸ್ತ್ರಗಳು ಯಾವ ಕಾರ್ಯ ಸಾಧನೆಗೆ ಎಂಬುದು ಮಾತ್ರ ಸ್ಪಷ್ಟವಾಗುತ್ತಿಲ್ಲ ಎಂಬುದು ಖಚಿತ!

ಸದ್ಯ ಪ್ರಚೋದನಕಾರಿ ಹೇಳಿಕೆಗಳ ನಡುವೆ ಇಂದು ಬಿಜೆಪಿ ಕಾರ್ಯದರ್ಶಿ ಸಿ.ಟಿ ರವಿ ಸುದ್ದಿಗಾರರೊಂದಿಗೆ ಮಾತನಾಡಿದ್ದು, ಧ್ವನಿವರ್ಧಕಗಳು ಸುತ್ತಮುತ್ತಲಿನ ಜನರಿಗೆ ಹಿಂಸೆ ನೀಡುತ್ತದೆ. ಮಸೀದಿಗಳಲ್ಲಿ ಬಳಸುವ ಧ್ವನಿವರ್ಧಕಗಳು ಶಬ್ದ ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದೆ ಜೊತೆಗೆ ಪರಿಸರಕ್ಕೆ ತೊಂದರೆಯಾಗಿದೆ ಎಂದು ಹೇಳಿದ್ದಾರೆ. ಧ್ವನಿವರ್ಧಕಗಳ ಬಳಕೆ ಕುರಿತು ನ್ಯಾಯಾಲಯ ಕೂಡ ಸ್ಪಷ್ಟವಾಗಿ ತಿಳಿಸಿದೆ.

ನ್ಯಾಯಾಲಯ ಕೊಟ್ಟಿರುವ ನಿಯಮವನ್ನು ಪಾಲಿಸುವುದು ನಮ್ಮ ಕರ್ತವ್ಯ, ಅದಕ್ಕೆ ನಾವು ಬದ್ಧರಾಗಿರಬೇಕು. ನಾನು ಪರಿಸರ ಪರ, ನ್ಯಾಯಾಲಯ ನಿಯಮ ಪರ ಎಂದು ಹೇಳುವ ಮೂಲಕ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

Exit mobile version