ಸುಳ್ಳು ಮತ್ತು ಸಿದ್ದರಾಮಯ್ಯ ಒಂದೇ ನಾಣ್ಯದ ಎರಡು ಮುಖಗಳು : ಸಿ.ಟಿ.ರವಿ!

CT Ravi

ಸತ್ಯ ಮತ್ತು ಸಿದ್ದರಾಮಯ್ಯ(Siddaramaiah) ಎಣ್ಣೆ ಸಿಗೇಕಾಯಿ ಇದ್ದಂತೆ. ಆದರೆ ಸುಳ್ಳು ಮತ್ತು ಸಿದ್ದರಾಮಯ್ಯ ಒಂದೇ ನಾಣ್ಯದ ಎರಡು ಮುಖಗಳು ಎಂದು ಬಿಜೆಪಿ(BJP)ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ(CT Ravi) ವ್ಯಂಗ್ಯವಾಡಿದ್ದಾರೆ.

ಚಿಕ್ಕಮಗಳೂರಿನಲ್ಲಿ(Chikkamaglur) ಮಾತನಾಡಿದ ಅವರು, ಪ್ರವಾಹ(Flood) ಬಂದಾಗ ರಾಜ್ಯಕ್ಕೆ ಮೋದಿ ಬರಲಿಲ್ಲ, ಆಕ್ಸಿಜನ್ ಸಿಗದಿದ್ದಾಗ ಮೋದಿ ಬರಲಿಲ್ಲ. ಈಗ ಯೋಗ ಮಾಡಲು ಬಂದಿದ್ದಾರೆ ಎಂದಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಅತ್ಯುತ್ತಮ ಸುಳ್ಳು ಹೇಳುವ ಪ್ರಶಸ್ತಿ ನೀಡುವುದಾದರೆ ಅದನ್ನು ಸಿದ್ದರಾಮಯ್ಯನವರಿಗೆ ನೀಡಬೇಕು. ಅದನ್ನು ಪಡೆಯಲು ಅವರು ಅರ್ಹರು. ಅವರಿಗೆ ಬಿಟ್ಟರೆ ಸುಳ್ಳು ಹೇಳುವ ಪ್ರಶಸ್ತಿ ಯಾರಿಗೂ ಸಿಗುವುದಿಲ್ಲ ಎಂದು ವ್ಯಂಗ್ಯವಾಡಿದರು.

ಇನ್ನು ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದರು. ಆಗ ಎಷ್ಟು ಆಕ್ಸಿಜನ್ ಪ್ಲಾಂಟ್ ಹಾಕಿದ್ದರು..? ಎಂದು ಪ್ರಶ್ನಿಸಿದ ಅವರು, ತುರ್ತು ಪರಿಸ್ಥಿತಿಯಲ್ಲಿಯೂ ಮೋದಿ ಸರ್ಕಾರ ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದೆ. ಜಗತ್ತಿನ ಅನೇಕ ದೇಶಗಳು ಕೋವಿಡ್(Covid 19) ನಿರ್ವಹಣೆಯನ್ನು ಭಾರತದಿಂದ ಕಲಿತಿವೆ. ವಿಶ್ವಸಂಸ್ಥೆಯೂ ಕೂಡಾ ಭಾರತದ ಕಾರ್ಯನಿರ್ವಹಣೆಗೆ ಮೆಚ್ಚುಗೆ ವ್ಯಕ್ತಪಡಿಸಿತ್ತು. ಪ್ರಧಾನಿ ಮೋದಿ(Narendra Modi) ಅವರು ಪಿಎಂ ಕೇರ್(PM Care) ಮೂಲಕ ದೇಶದ ಪ್ರತಿ ಆಸ್ಪತ್ರೆಗೆ ಆಕ್ಸಿಜನ್ ಪ್ಲಾಂಟ್ ಹಾಕಿದ್ದಾರೆ.

ಈ ಕಾರ್ಯವನ್ನು ಅತ್ಯಂತ ತುರ್ತಾಗಿ ಮಾಡಿದರು. ಇಲ್ಲವಾದರೆ ಸಾವಿನ ಪ್ರಮಾಣ ಇನ್ನು 10 ಪಟ್ಟು ಹೆಚ್ಚಾಗುತ್ತಿತ್ತು ಎಂದು ವಿವರಿಸಿದರು. ಇನ್ನು ಪ್ರಧಾನಿ ಮೋದಿ ಅವರು ಚುನಾವಣೆ ಉದ್ದೇಶದಿಂದ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ. ಆದರೆ ದೇಶದ ಅನೇಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಹೀಗಾಗಿ ಒಂದಲ್ಲ ಒಂದು ರಾಜ್ಯದಲ್ಲಿ ಚುನಾವಣೆ ಇರುತ್ತದೆ. ಆದರೆ ಚುನಾವಣೆಗಾಗಿ ಕೆಲಸ ಮಾಡುವ ಪಕ್ಷ ನಮ್ಮದಲ್ಲ. ಭಾರತ ವಿಶ್ವಗುರುವಾಗಬೇಕು, ಸ್ವಾವಲಂಬಿಯಾಗಬೇಕು,

ಸದೃಡ ಭಾರತೀಯ ಸಮಾಜವನ್ನು ನಿರ್ಮಾಣ ಮಾಡಬೇಕು ಎಂಬ ಏಕೈಕ ಕಾರಣದಿಂದ ನಮ್ಮ ಪಕ್ಷ ಶ್ರಮಿಸುತ್ತದೆ. ನಮ್ಮ ಪ್ರಧಾನಿ ಮೋದಿಯವರು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.

Exit mobile version