ಚುನಾವಣೆ ಗದ್ದಲ: ಸದಸ್ಯೆಗೆ ಗರ್ಭಪಾತ

ಬಾಗಲಕೋಟೆ,ನ.30: ಚುನಾವಣೇ ಎಂದರೆ ಕೆಲವು ಶಾಸಕರಿಗೆ ಇನ್ನೊಬ್ಬರ ಜೀವ ಹೋದರೂ ಚಿಂತೆಯಿಲ್ಲ ಎಂಬಂತೆ ವರ್ತಿಸುತ್ತಾರೆ. ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪುರಸಭೆ ಸದಸ್ಯೆಯರ ನೂಕಾಟದಲ್ಲಿ ಕೆಳಗೆ ಬಿದ್ದಿದ್ದ ಗರ್ಭಿಣಿ ಸದಸ್ಯೆ ಚಾಂದಿನಿ ನಾಯಕ್ ಅವರಿಗೆ ಮಹಲಿಂಗಪುರ ಸರಕಾರಿ ಆಸ್ಪತ್ರೆಯಲ್ಲಿ ಗರ್ಭಪಾತವಾಗಿದೆ ಎಂದು ತಿಳಿದು ಬಂದಿದೆ.

ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆಗೆ ನ.9ರಂದು ಚುನಾವಣೆ ನಡೆದಿತ್ತು. ಈ ವೇಳೆ ತೇರದಾಳ ಬಿಜೆಪಿ ಶಾಸಕ ಸಿದ್ದು ಸವದಿ ಕಾರ್ಯಕರ್ತರು ಮತ್ತು ಕಾಂಗ್ರೆಸ್​ ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಕಾರ್ಯಕರ್ತರ ತಳ್ಳಾಟದಿಂದ ಸದಸ್ಯೆ ಚಾಂದಿನಿ ನಾಯಕ್ ಕೆಳಕ್ಕೆ ಬಿದ್ದಿದ್ದರು. ಇದರಿಂದ  ಚಾಂದಿನಯವರ ಹೊಟ್ಟೆಗೆ ಏಟು ಬಲವಾದ ಏಟು ಬಿದ್ದು, ಮಗುವಿನ ಬೆಳವಣಿಗೆಗೆ ಹೊಡೆತ‌ ಬಿದ್ದಿತ್ತು. ಇದೀಗ ಸರಕಾರಿ ಆಸ್ಪತ್ರೆಯಲ್ಲಿ ಗರ್ಭಪಾತವಾಗಿದೆ.

ಚಾಂದಿನಿ ನಾಯಕ್ ಅವರು  ಬಿಜೆಪಿ ಸದಸ್ಯೆ‌ಯಾಗಿದ್ದು, ಕಾಂಗ್ರೆಸ್​ಗೆ ಬೆಂಬಲ ನೀಡೋಕೆ ಮುಂದಾಗಿದ್ದರು. ಈ ವೇಳೆ ಅವರನ್ನು ಗೈರಾಗಿಸಲು ಸಿದ್ದು ಸವದಿ ಪುರಸಭೆಯಿಂದ ಹೊರ ಕಳುಹಿಸಲು ಯತ್ನಿಸಿದ್ದರು. ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾಪಟಿ ಏರ್ಪಟ್ಟು ಸದಸ್ಯೆಯರಾದ ಚಾಂದಿನಿ ನಾಯಕ್, ಸವಿತಾ ಹುರಕಡ್ಲಿ, ಗೋದಾವರಿ ಬಾಟ್​ರನ್ನು ಎಳೆದಾಡಿದ್ದರು. ಆ ವೇಳೆ ಚಾಂದಿನಿ ಅವರು ಮೂರು ತಿಂಗಳ ಗರ್ಭಿಣಿಯಾಗಿದ್ದರು.

Exit mobile version