ಗ್ಯಾಸ್ಟ್ರಿಕ್ ಸಮಸ್ಯೆ ನಿಮ್ಮನ್ನು ಪರಿಪರಿಯಾಗಿ ಕಾಡುತ್ತಿದೆಯಾ? ಹಾಗಾದ್ರೆ ಇಲ್ಲಿವೆ ಸರಳ ಮನೆಮದ್ದುಗಳು..!

ಇತ್ತೀಚಿನ ದಿನಗಳಲ್ಲಿ ಗ್ಯಾಸ್ಟ್ರಿಕ್ (Gastric) ಸಮಸ್ಯೆ ಅನೇಕರನ್ನು ಕಾಡುತ್ತಿದೆ. ಯಾವುದೇ ಆಹಾರ (Cure for Gastric problem) ಸೇವಿಸಿದರು ಅದು ಅಜೀರ್ಣವಾಗಿ ಗ್ಯಾಸ್ಟ್ರಿಕ್ ಉಂಟಾಗುತ್ತಿದೆ.

ಡಯಾಬಿಟಿಸ್ (Diabetes), ರಕ್ತದೊತ್ತಡದಂತೆ ಗ್ಯಾಸ್ಟ್ರಿಕ್ ಕೂಡ ಬೆಂಬಿಡದೆ ಕಾಡುತ್ತಿದೆ. ಈ ಸಮಸ್ಯೆ ನಿರ್ಲಕ್ಷ್ಯ ಮಾಡಿದಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ಗ್ಯಾಸ್ಟ್ರಿಕ್ಗೆ ಮುಖ್ಯ ಕಾರಣ ಏನು

ಅಂತಾ ನೋಡಿದರೆ, ಕೆಲವು ಸೋಂಕುಗಳು, ಅತಿಯಾಗಿ ತಿನ್ನುವುದು, ತೀರಾ ಕಡಿಮೆ ತಿನ್ನುವುದು ಕೂಡ ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗುತ್ತವೆ. ಈ ಗ್ಯಾಸ್ಟ್ರಿಕ್ಸಮಸ್ಯೆಯನ್ನು ಕೆಲವು ಸರಳ

ಮನೆಮದ್ದುಗಳ ಮೂಲಕ ಪರಿಹರಿಸಿಕೊಳ್ಳಬಹುದು. ಅದರ ಸಂಪೂರ್ಣ (Cure for Gastric problem) ಮಾಹಿತಿ ಇಲ್ಲಿದೆ ನೋಡಿ.

ಮಜ್ಜಿಗೆ : ಮಜ್ಜಿಗೆ ಹೊಟ್ಟೆಯಲ್ಲಿರುವ ಹೆಚ್ಚುವರಿ ಆಮ್ಲವನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ. ಇದು ಗ್ಯಾಸ್ ರಚನೆಯನ್ನು ತಡೆಯುತ್ತದೆ. ಮಜ್ಜಿಗೆ ಪ್ರೋಬಯಾಟಿಕ್ಸ್ (Probiotics) ಆಗಿ

ಕಾರ್ಯನಿರ್ವಹಿಸಿ, ಆಹಾರದ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಪ್ರತಿನಿತ್ಯ ಒಂದು ಗ್ಲಾಸ್ ಮಜ್ಜಿಗೆ ಸೇವಿಸುವುದರಿಂದ ಗ್ಯಾಸ್ಟ್ರಿಕ್ (Gastric) ಸಮಸ್ಯೆಯಿಂದ ದೂರ ಉಳಿಯಬಹುದು.

ಎಳನೀರು : ಎಳನೀರು ಜೀರ್ಣಾಂಗ ವ್ಯವಸ್ಥೆಯನ್ನು ಸರಾಗಗೊಳಿಸುತ್ತದೆ. ಇದು ದೇಹವನ್ನು ತಂಪಾಗಿಸಿ ಹೊಟ್ಟೆಯ ಸಮಸ್ಯೆಗಳನ್ನು ತಡೆಯುತ್ತದೆ. ಹಾಗೆಯೇ, ಗ್ಯಾಸ್ಟ್ರಿಕ್ ಸಮಸ್ಯೆಗಳಿಂದ ನಿಮಗೆ

ಪರಿಹಾರವನ್ನು ಒದಗಿಸುತ್ತದೆ.

ನಿಂಬೆ ಹಣ್ಣಿನ ಜ್ಯೂಸ್ : ನಿಂಬೆ ಹಣ್ಣು ಸಿಟ್ರಿಕ್ (Citric) ಅಂಶ ತ್ವರಿತಗತಿಯಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆಗೆ ಚಿಕಿತ್ಸೆ ನೀಡುತ್ತದೆ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಆರೋಗ್ಯಕರವಾದ ನಿಂಬೆ ಜ್ಯೂಸ್ಅನ್ನು

ಕುಡಿಯುವುದು ಉತ್ತಮ. ಇನ್ನು ನಿಂಬೆ ರಸವನ್ನು ಅಡಿಗೆ ಸೋಡಾದೊಂದಿಗೆ ಸೇವಿಸುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು.

ಉದ್ಯೋಗಾವಕಾಶ: ಪ್ರವಾಸೋದ್ಯಮದಲ್ಲಿ 14 ಕೋಟಿ ಉದ್ಯೋಗಾವಕಾಶ ಸೃಷ್ಟಿ, ಮೋದಿ ಭರವಸೆ

ಏಲಕ್ಕಿ : ಏಲಕ್ಕಿ ಗ್ಯಾಸ್ಟ್ರಿಕ್ ಸಮಸ್ಯೆಗೆ ಚಿಕಿತ್ಸೆ ನೀಡುತ್ತದೆ. ಏಲಕ್ಕಿ ಜೀರ್ಣಕ್ರಿಯೆಯನ್ನು ವೇಗಗೊಳಿಸುವುದರ ಮೂಲಕ ಆಮ್ಲೀಯತೆ ಮತ್ತು ಇತರ ಗ್ಯಾಸ್ಟ್ರಿಕ್ ಸಮಸ್ಯೆಗಳಿಂದ ಪರಿಹಾರವನ್ನು ಒದಗಿಸುತ್ತದೆ.

ಹೀಗಾಗಿ ಪ್ರತಿದಿನ ಊಟವಾದ ಮೇಲೆ ಒಂದೆರೆಡು ಏಲಕ್ಕಿ ತಿನ್ನುವುದು ಬೆಸ್ಟ್.

ಬೆಳ್ಳುಳ್ಳಿ : ಬೆಳ್ಳುಳ್ಳಿ ಕೇವಲ ಖಾದ್ಯದ ರುಚಿಯನ್ನು ಮಾತ್ರ ಹೆಚ್ಚಿಸುವುದಿಲ್ಲ ಬದಲಾಗಿ ಅನೇಕ ಆರೋಗ್ಯ ಲಾಭಗಳನ್ನು ಒದಗಿಸುತ್ತದೆ. ಹೊಟ್ಟೆ ಉಬ್ಬರ, ಅಜೀರ್ಣ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ನಿವಾರಿಸಲು

ಬೆಳ್ಳುಳ್ಳಿ ಪರಿಣಾಮಕಾರಿ ಎಂದು ಸಾಬೀತಾಗಿದೆ. ಬೆಳ್ಳುಳ್ಳಿಯನ್ನು ಸೂಪ್ (Soup) ರೂಪದಲ್ಲಿ ಸೇವಿಸಬಹುದು. ಅದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆಯಾಗುತ್ತದೆ.

ಮಹೇಶ್

Exit mobile version