ಒಂದೊಂದು ದೇಶದಲ್ಲಿ ಒಂದೊಂದು ರೀತಿಯ ಕಾರ್ಯವಿಧಾನಗಳನ್ನು ಅನುಸರಿಸಲಾಗುತ್ತಿದ್ದು, ನಮ್ಮ ದೇಶದಲ್ಲಿ ಬಳಸುವ ಕೆಲವು ಆಹಾರಗಳನ್ನು ಮತ್ತೊಂದು ದೇಶಗಳಲ್ಲಿ ನಿಷೇಧಿಸಲಾಗಿದೆ. ಹಾಗೆ ಭಾರತದಲ್ಲಿ ನಿಷೇಧಿಸಿರುವ ನಾಯಿ (Banned Dogs) ಗಳನ್ನು ಬೇರೆ ದೇಶಗಳಲ್ಲಿ ಬೆಳೆಸಲಾಗುತ್ತದೆ. ಹಾಗಾದ್ರೆ ಆ ನಿಷೇಧಿತ ನಾಯಿ ತಳಿಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಪಿಟ್ ಬುಲ್:
ಈ ಪಿಟ್ ಬುಲ್ (Pit Bull) ತಳಿಯು ಬಹಳ ಅಪಾಯಕಾರಿಯಾಗಿದ್ದು, ಅಮೆರಿಕದ (America) ಬುಲ್ ಮತ್ತು ಟೆರಿಯರ್ ತಳಿಗಳ ವಂಶಸ್ಥರೆಂದು ನಂಬಲಾದ ನಾಯಿಯ ತಳಿ ಇದಾಗಿದೆ. ಅಮೆರಿಕವನ್ನು ಅನೇಕ ದೇಶಗಳಲ್ಲಿ ಪಿಟ್ ಬುಲ್ ಟೆರಿಯರ್ (Pit Bull Terrier) ಎಂದು ಕರೆಯಲಾಗುತ್ತದೆ. ಈ ಹೊಸ ತಳಿಯನ್ನು ಭಾರತದಲ್ಲಿ ಮಾತ್ರವಲ್ಲದೆ ಇಂಗ್ಲೆಂಡ್ನಲ್ಲಿಯೂ ನಿಷೇಧಿಸಲಾಗಿದೆ.
ಬುಲ್ಡಾಗ್:
ಸಾಮಾನ್ಯವಾಗಿ ಈ ನಾಯಿಯ ಬಗ್ಗೆ ಎಲ್ಲರಿಗು ತಿಳಿದಿದ್ದು, ಇದು ಸರಿಸುಮಾರು 40-55 ಪೌಂಡ್ಗಳು (18-25 ಕೆಜಿ) ತೂಗುತ್ತದೆ. ಭಾರತದಲ್ಲಿ ಮಾತ್ರವಲ್ಲದೆ ಕೆಲವು ದೇಶಗಳಲ್ಲಿ ಇದನ್ನು ನಿಷೇಧಿಸಲಾಗಿದೆ. ನಾರ್ವೆ ಮತ್ತು ನೆದರ್ಲ್ಯಾಂಡ್ಸ್ನಲ್ಲಿ (Netherlands) ಬುಲ್ಡಾಗ್ಗಳನ್ನು ಸಂತಾನೋತ್ಪತ್ತಿ ಮಾಡುವುದು ಕಾನೂನುಬಾಹಿರವಾಗಿದೆ.
ರೊಟ್ವೀಲರ್:
ಈ ನಾಯಿಗಳನ್ನು ದನಗಳನ್ನು ಮೇಯಿಸಲು ಮತ್ತು ದನ ಮಾಂಸವನ್ನು ಮಾರುಕಟ್ಟೆಗೆ ಸಾಗಿಸುವುದು ಮುಂತಾದ ಕೆಲಸಗಳಿಗೆ ಬಳಸಲಾಗುತ್ತಿತ್ತು. ಇದರ ತೂಕ 50 ರಿಂದ 60 ಕೆ.ಜಿ. ಇದ್ದು, ಈ ನಾಯಿಗಳನ್ನು ಜರ್ಮನ್ ಭಾಷೆಯಲ್ಲಿ ರೊಟ್ವೀಲರ್ ಮೆಟ್ಜೆರ್ಹಂಡ್ (Rottweiler Metzerhund) ಎಂದು ಕರೆಯಲಾಗುತ್ತದೆ.
ಟೆರಿಯರ್:
ಈ ರೀತಿಯ ನಾಯಿಗಳನ್ನು ಕೀಟಗಳನ್ನು ಬೇಟೆಯಾಡಲು ಸಾಕಲಾಯಿತು. ನಮ್ಮ ನಡುವೆ ವಿವಿಧ ರೀತಿಯ ಟೆರಿಯರ್ಗಳಿವೆ. ಟೆರಿಯರ್ (Terrier) ತಳಿಗಳು ಕೇವಲ 1ಕೆಜಿಯಿಂದ 60 ಕೆಜಿಗಿಂತ ಹೆಚ್ಚು ಗಾತ್ರದಲ್ಲಿ ಬೆಳೆಯುತ್ತವೆ.
ನಿಯಾಪೊಲಿಟನ್ ಮ್ಯಾಸ್ಟಿಫ್:
ಇದು ಮಧ್ಯ ಇಟಲಿಯ (Italy) ಸಾಂಪ್ರದಾಯಿಕ ಕಾವಲು ನಾಯಿ ತಳಿಗಳಿಂದ ಬಂದ ತಳಿಯಾಗಿದೆ. ಇದರ ತೂಕ 50-70 ಕೆಜಿ. ಭಾರತವನ್ನು ಹೊರತುಪಡಿಸಿ 12 ದೇಶಗಳಲ್ಲಿ ಈ ಜಾತಿಯನ್ನು ನಿಷೇಧಿಸಲಾಗಿದೆ.
ಭವ್ಯಶ್ರೀ ಆರ್.ಜೆ