ನಟ ದರ್ಶನ್ ಗೂ ವಿವಾದಗಳಿಗೂ ಬಿಡಲಾರದ ನಂಟು : ಹಳೆ ಪ್ರಕರಣಗಳ ವಿವರಗಳು ಹೀಗಿವೆ.

Bengaluru: ಅಭಿನಯದಿಂದ ಮಾತ್ರವಲ್ಲ ವಿವಾದಗಳಿಂದಲೂ (Controversies) ಪ್ರಚಲಿತದಲ್ಲಿರುವ ನಟ (Actor) ಎಂದರೆ ಅದು ದರ್ಶನ್ ತೂಗುದೀಪ್ ಅವರೇ ಆಗಿರುತ್ತಾರೆ. ಹೌದು. ಸ್ಯಾಂಡಲ್ವುಡ್ ಸುಲ್ತಾನ್ ದರ್ಶನ್ (Darshan) ಮೇಲಿರುವ ವಿವಾದಗಳು ಒಂದರೆಡೆ ಅಲ್ಲ. ಕೊಲೆ ಪ್ರಕರಣದಲ್ಲಿ ಇದೀಗ ಪೊಲೀಸರ ಕಸ್ಟಡಿಯಲ್ಲಿರುವ ನಟ ದರ್ಶನ್​ರ ಈ ಹಿಂದಿನ ಕೆಲವು ವಿವಾದಗಳು, ಪ್ರಕರಣಗಳ ಪಟ್ಟಿ ಹೇಗಿದೆ .

ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ

ಕಳೆದ ಕೆಲ ವರ್ಷಗಳ ಹಿಂದೆ ನಟ ದರ್ಶನ್ ತಮ್ಮ ಪತ್ನಿ ವಿಜಯಲಕ್ಷ್ಮಿ(Vijayalakshmi) ಮೇಲೆ ಹಲ್ಲೆ ಮಾಡಿ ಮೊದಲ ಬಾರಿ ಜೈಲು ಸೇರಿದ್ದರು. ಕೌಟುಂಬಿಕ (Family) ಕಲಹಕ್ಕೆ ಸಂಬಂಧಿಸಿದಂತೆ ವಿಜಯಲಕ್ಷ್ಮಿ ಅವರ ಮೇಲೆ ತೀವ್ರ ಹಲ್ಲೆಯನ್ನು ದರ್ಶನ್ ಮಾಡಿದ್ದರು. ವಿಜಯಲಕ್ಷ್ಮಿ ಅವರ ಮುಖಕ್ಕೆ, ಕೈಗೆ ಗಾಯವಾಗಿ ವಿಜಯಲಕ್ಷ್ಮಿ ಅವರು ಆಸ್ಪತ್ರೆ ಸೇರಿದ್ದರು. ಆಗ ಸ್ವತಃ ವಿಜಯಲಕ್ಷ್ಮಿ ಅವರೇ ದರ್ಶನ್ ವಿರುದ್ಧ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ದರ್ಶನ್ ವಿರುದ್ಧ ಕ್ರಿಮಿನಲ್ ಪ್ರಕರಣ (Criminal case) ದಾಖಲಾಗಿತ್ತು. ಆ ಬಳಿಕ ವಿಜಯಲಕ್ಷ್ಮಿ ಅವರು ದೂರು ವಾಪಸ್ ಪಡೆದರಾದರೂ ಕ್ರಿಮಿನಲ್ ಪ್ರಕರಣವಾಗಿದ್ದರಿಂದ ತನಿಖೆ ಮುಂದುವರೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 28 ದಿನಗಳ ಕಾಲ ದರ್ಶನ್ ಜೈಲು ವಾಸ ಅನುಭವಿಸಿದ್ದರು.

ದಾಖಲಾಗಿತ್ತು. ಆ ಬಳಿಕ ವಿಜಯಲಕ್ಷ್ಮಿ ಅವರು ದೂರು ವಾಪಸ್ ಪಡೆದರಾದರೂ ಕ್ರಿಮಿನಲ್ ಪ್ರಕರಣವಾಗಿದ್ದರಿಂದ ತನಿಖೆ ಮುಂದುವರೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 28 ದಿನಗಳ ಕಾಲ ದರ್ಶನ್ ಜೈಲು ವಾಸ ಅನುಭವಿಸಿದ್ದರು.

ಶೂಟಿಂಗ್ ಸೆಟ್ನಲ್ಲಿ ಹಲ್ಲೆ (Assault on shooting set)
ದರ್ಶನ್ ನಟನೆಯ ಯಜಮಾನ ಸಿನಿಮಾದ (Yajamana Cinema) ಚಿತ್ರೀಕರಣದ ಸಮಯದಲ್ಲಿಯೂ ಸಹ ದರ್ಶನ್ ವಿರುದ್ಧ ಹಲ್ಲೆ ಆರೋಪ (Charged with assault) ಕೇಳಿ ಬಂದಿತ್ತು. ಸಿನಿಮಾದ ಹಾಡೊಂದರ ಶೂಟಿಂಗ್ ನಡೆಯಬೇಕಾದರೆ ಮೊಬೈಲ್ ನಲ್ಲಿ ರೆಕಾರ್ಡಿಂಗ್ ಮಾಡುತ್ತಿದ್ದ ಶಿವಶಂಕರ್ (Shiva Shankar) ಹೆಸರಿನ ವ್ಯಕ್ತಿಯೊಬ್ಬರ ಮೇಲೆ ದರ್ಶನ್ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು.

ಸಿನೆಮಾ ನಿರ್ಮಾಪಕರೊಂದಿಗೆ ದರ್ಶನ್ ವಿವಾದ (Darshan dispute with movie producer)
ಹೌದು ರಾಬರ್ಟ್ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಹಾಗೂ ದರ್ಶನ್ ನಡುವೆ 2021 ರಲ್ಲಿ ಮೊದಲ ಬಾರಿಗೆ ಭಾರಿ ವಿವಾದ ಭುಗಿಲೆದ್ದಿತ್ತು. ಉಮಾಪತಿ ಶ್ರೀನಿವಾಸ್, ತಮ್ಮ ಹೆಸರು ಬಳಸಿಕೊಂಡು 25 ಕೋಟಿ ರೂಪಾಯಿ ಸಾಲ ಪಡೆದು ವಂಚನೆಗೆ ಯತ್ನಿಸಿದ್ದಾರೆ ಎಂದು ದರ್ಶನ್ ಆರೋಪ ಮಾಡಿ ದೂರು ಸಹ ದಾಖಲಿಸಿದ್ದರು. ಆದರೆ ಉಮಾಪತಿ ಶ್ರೀನಿವಾಸ್ ಆ ಆರೋಪವನ್ನು ಅಲ್ಲಗಳೆದು ತಮ್ಮ ಪರವಾಗಿ ಸಾಕ್ಷ್ಯಗಳನ್ನು ಸಹ ಬಿಡುಗಡೆ ಮಾಡಿ ಉಮಾಪತಿ ಅವರು ದರ್ಶನ್​ ಇಂದ ಅಂತರ ಕಾಯ್ದು ಕೊಂಡಿದ್ದರು.

ಬಾರ್ ಸಪ್ಲೈಯರ್ ಮೇಲೆ ಹಲ್ಲೆ ಆರೋಪ (Bar supplier charged with assault)

ಕೆಲ ವರ್ಷಗಳ ಹಿಂದೆ ನಿರ್ದೇಶಕ ಇಂದ್ರಜಿತ್ ಲಂಕೇಶ್, ದರ್ಶನ್ (Indrajit Lankesh, Darshan,) , ಬಾರ್ ಸಪ್ಲೈಯರ್ ಮೇಲೆ ಹಲ್ಲೆ ಮಾಡಿದ್ದಾರೆಂಬ ಆರೋಪ ಮಾಡಿದರು. ಮೈಸೂರಿನ ಸಂದೇಶ್ (Sandesh) ಪ್ರಿನ್ಸ್ ಹೋಟೆಲ್​ನಲ್ಲಿ ದಲಿತ ಸಪ್ಲೈಯರ್ ಒಬ್ಬನ ಮೇಲೆ ದರ್ಶನ್ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಯ್ತು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹೋಟೆಲ್​ಗೆ ಭೇಟಿ ನೀಡಿ ತನಿಖೆಯನ್ನು ಸಹ ನಡೆಸಿದರು. ಆದರೆ ದರ್ಶನ್, ಹಲ್ಲೆ ಆರೋಪವನ್ನು ತಳ್ಳಿ ಹಾಕಿ ದರ್ಶನ್ ನಿರಪರಾಧಿ ಎನಿಸಿಕೊಂಡಿದ್ದರು.

Exit mobile version