ಮೈಸೂರು ದಸರಾ ಆರಂಭಕ್ಕೂ ಮುನ್ನ ಸಂಭವಿಸಿದ ಅವಘಡ: ಕುಸಿದು ಬಿತ್ತು ದಸರಾ ದೀಪಾಲಂಕಾರ ಕಂಬ

Mysore: ಮೈಸೂರು (Mysore) ಬಳಿ ಎರಡು ಬಸ್‌ ಹಾಗೂ ಕಾರ್‌ ನಡುವೆ ಅಪಘಾತ ಸಂಭವಿಸಿದ್ದು, ದಸರಾ ದೀಪಾಲಂಕಾರಕ್ಕೆ ಹಾಕಿದ್ದ ಕಂಬಕ್ಕೆ ಗುದ್ದಿದ ಪರಿಣಾಮ ಅದು ಬಸ್‌ನ ಮೇಲೆ ಕುಸಿದು ಬಿದ್ದಿದೆ. ಈ ಅವಘಡದಲ್ಲಿ 15ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ದಸರಾ ಆರಂಭಕ್ಕೂ ಮುನ್ನ ಅವಘಡವೊಂದು ಸಂಭವಿಸಿದೆ.

ಕೆಎಸ್​ಆರ್​ಟಿಸಿ (KSRTC) ಹಾಗೂ ಖಾಸಗಿ ಬಸ್ ಮಧ್ಯೆ ಅಪಘಾತ ಸಂಭವಿಸಿದ್ದು, ಇದರಿಂದ ವಿದ್ಯುತ್ ದೀಪಾಲಂಕಾರದ ಕಂಬ ಉರುಳಿಬಿದ್ದಿರುವ ಘಟನೆ ನಡೆದಿದ್ದು, ದಸರಾಗೆ ಮೈಸೂರು (Mysore) ನಗರದಾದ್ಯಂತ ದೀಪಾಲಂಕಾರ ಮಾಡಲಾಗುತ್ತದೆ. ಅಂತೆಯೇ ಶುಕ್ರವಾರ ಎಲ್ಲೆಡೆ ತಾತ್ಕಾಲಿಕ ಕಬ್ಬಿಣದ ಕಮಾನು ಹಾಕಲಾಗುತ್ತಿತ್ತು.

ಮೈಸೂರಿನ ಮಣಿಪಾಲ್ (Manipal) ಆಸ್ಪತ್ರೆ ಜಂಕ್ಷನ್‌ನಲ್ಲಿ ಖಾಸಗಿ ಬಸ್‌, ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಇನೋವಾ ಕಾರ್‌ ನಡುವೆ ಅಪಘಾತವಾಗಿದ್ದು, ಇದೇ ಸಂದರ್ಭದಲ್ಲಿ ಖಾಸಗಿ ಬಸ್‌ ದಸರಾ (Dasara) ದೀಪಾಲಂಕಾರದ ಕಮಾನಿಗೆ ಗುದ್ದಿದ ಪರಿಣಾಮ ಕುಸಿದು ರಸ್ತೆಯಲ್ಲಿದ್ದ ಕೆಎಸ್ಆರ್‌ಟಿಸಿ ಬಸ್‌ ಮೇಲೆ ಬಿದ್ದಿದೆ.

ಘಟನೆಯಿಂದ ಕೆಲ ಕಾಲ ವಾಹನ ಸಂಚಾರಕ್ಕೆ ತೊಡಕು ಉಂಟಾಗಿದ್ದು, ಬೆಂಗಳೂರು (Bengaluru) – ಮೈಸೂರು ಹೆದ್ದಾರಿಯಲ್ಲಿ ಹಾಕಲಾಗಿದ್ದ ವಿದ್ಯುತ್ ಕಮಾನು ಇದಾಗಿದೆ. ಬಸ್‌ನ ವೇಗ ನಿಯಂತ್ರಿಸುವ ಧಾವಂತದಲ್ಲಿ ಖಾಸಗಿ ಬಸ್‌ ಚಾಲಕನು ಇನ್ನೋವಾ ಕಾರಿಗೆ ಗುದ್ದಿದ್ದಾನೆ ಎಂದು ಹೇಳಲಾಗುತ್ತಿದ್ದು, ಒಟ್ಟು 2 ಬಸ್ ಸೇರಿ 4 ವಾಹನಗಳಿಗೆ ಹಾನಿಯಾಗಿದೆ.

ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದು, ಘಟನೆಯಿಂದ ಕೆಲ ಕಾಲ ವಾಹನ ಸಂಚಾರ ಸಮಸ್ಯೆಯಾಗಿದೆ. ಅದೃಷ್ಟವಶಾತ್ ಈ ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಮತ್ತು ಹತ್ತಿರದ ಮಣಿಪಾಲ್‌ ಹಾಗೂ ನಾರಾಯಣ (Narayana) ಆಸ್ಪತ್ರೆಗೆ ಗಾಯಾಳುಗಳ ರವಾನೆ ಮಾಡಲಾಗಿದೆ ಎಂದು ಮೈಸೂರು ಪೊಲೀಸರು ಮಾಹಿತಿ ನೀಡಿದ್ದಾರೆ.

ಭವ್ಯಶ್ರೀ ಆರ್.ಜೆ

Exit mobile version