‘ಕೋಮಾ’ದಲ್ಲಿದ್ದಾನೆ ಎಂದು ಭಾವಿಸಿ, ವ್ಯಕ್ತಿಯ ಮೃತ ದೇಹವನ್ನು 18 ತಿಂಗಳ ಕಾಲ ಮನೆಯಲ್ಲಿ ಇರಿಸಿದ ಕುಟುಂಬ!

Dead Body

Kanpur : 2021ರ ಏಪ್ರಿಲ್ 22 ರಂದು ಹಠಾತ್ ಹೃದಯಾಘಾತದಿಂದ ಮೃತಪಟ್ಟಿರುವ ವ್ಯಕ್ತಿಯು ಕೋಮಾದಲ್ಲಿದ್ದಾನೆ ಎಂದು ಭಾವಿಸಿದ ಅವನ ಕುಟುಂಬವು ಕಳೆದ 18 ತಿಂಗಳಿಂದ ಮೃತ ದೇಹವನ್ನು(Dead Body) ಮನೆಯಲ್ಲೇ ಇರಿಸಿಕೊಂಡಿರುವ ವಿಲಕ್ಷಣ ಘಟನೆಯೊಂದು ಕಾನ್ಪೂರಿನಲ್ಲಿ ನಡೆದಿದೆ.

ಆದಾಯ ತೆರಿಗೆ ಇಲಾಖೆಯಲ್ಲಿ(Income Tax Department) ಕೆಲಸ ಮಾಡುತ್ತಿದ್ದ ವಿಮಲೇಶ್ ದೀಕ್ಷಿತ್ ಅವರು, 2021ರ ಏಪ್ರಿಲ್ 22 ರಂದು ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದರು. ಆದರೆ ಅವರ ಕುಟುಂಬವು ಅವರ ಅಂತ್ಯಕ್ರಿಯೆಗಳನ್ನು ಮಾಡಲಿಲ್ಲ.

ಇದನ್ನೂ ಓದಿ : https://vijayatimes.com/why-msd-is-the-coolest-captain/

ಏಕೆಂದರೆ ವಿಮಲೇಶ್ ದೀಕ್ಷಿತ್ ಕೋಮಾದಲ್ಲಿದ್ದಾರೆ ಎಂದು ಭಾವಿಸಿದ ಕುಟುಂಬವು ಕಳೆದ 18 ತಿಂಗಳಿಂದ ಮೃತ ದೇಹವನ್ನು ಮನೆಯಲ್ಲೇ ಇರಿಸಿದ್ದಾರೆ. ಇನ್ನು ಮಾನಸಿಕವಾಗಿ ಅಸ್ಥಿರಳಾಗಿರುವ ವಿಮಲೇಶ್ ದೀಕ್ಷಿತ್ ಅವರ ಪತ್ನಿ, ಪ್ರತಿದಿನ ಬೆಳಿಗ್ಗೆ ಕೊಳೆತ ದೇಹದ ಮೇಲೆ ‘ಗಂಗಾಜಲ’ ಎರಚಿ, ಅದು ಅವನನ್ನು ಕೋಮಾದಿಂದ ಹೊರಬರಲು ಸಹಾಯ ಮಾಡುತ್ತದೆ ಎಂದು ನಂಬಿದ್ದಳು ಎನ್ನಲಾಗಿದೆ.

ಇನ್ನು ವಿಮಲೇಶ್ ದೀಕ್ಷಿತ್ ಅವರು 2021ರ ಏಪ್ರಿಲ್ 22 ರಂದು ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಖಾಸಗಿ ಆಸ್ಪತ್ರೆಯೊಂದು ಮರಣ ಪ್ರಮಾಣಪತ್ರ ನೀಡಿತ್ತು. ಆದರೆ ಕಾನ್ಪುರದ ಆದಾಯ ತೆರಿಗೆ ಅಧಿಕಾರಿಗಳು, ವಿಮಲೇಶ್ ದೀಕ್ಷಿತ್ ಅವರು ಕುಟುಂಬ ಪಿಂಚಣಿ ಫೈಲ್ಗಳು ಸೇರಿದಂತೆ ಅವರ ಸಾವಿನ ಕುರಿತು ಯಾವುದೇ ಮಾಹಿತಿ ನೀಡಿಲ್ಲ.

ಹೀಗಾಗಿ ಈ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ಮನವಿ ಮಾಡಿದ್ದರು. ತನಿಖೆಗಾಗಿ ಪೊಲೀಸರು ದೀಕ್ಷಿತ್ ಅವರ ಮನೆಗೆ ಹೋದಾಗ ಅವರ ಕುಟುಂಬ ಸದಸ್ಯರು ಅವರು ಜೀವಂತವಾಗಿದ್ದಾರೆ ಮತ್ತು ಕೋಮಾದಲ್ಲಿದ್ದಾರೆ ಎಂದು ತಿಳಿಸಿದರು. ಸಾಕಷ್ಟು ಮನವೊಲಿಕೆಯ ನಂತರ, ಕುಟುಂಬ ಸದಸ್ಯರು ದೇಹವನ್ನು ಲಾಲಾ ಲಜಪತ್ ರಾಯ್ ಆಸ್ಪತ್ರೆಗೆ ಕೊಂಡೊಯ್ಯಲು ಅವಕಾಶ ಮಾಡಿಕೊಟ್ಟರು.

ಇದನ್ನೂ ಓದಿ : https://vijayatimes.com/russia-replies-to-narendra-modi/

ಅಲ್ಲಿ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದಾಗ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿತು. ಇನ್ನು ಈ ವಿಷಯವನ್ನು ಕೂಲಂಕಷವಾಗಿ ಪರಿಶೀಲಿಸಲು ಮೂವರ ಸದಸ್ಯರ ತಂಡವನ್ನು ರಚಿಸಲಾಗಿದೆ.

Exit mobile version