ಜೆಡಿಎಸ್‌ನೊಂದಿಗೆ ಮೈತ್ರಿಗೆ ಸಿದ್ದ ; ಇಲ್ಲದಿದ್ದರೆ ಏಕಾಂಗಿಯಾಗಿಯೇ ಸ್ಪರ್ಧೆ – ಓವೈಸಿ ಘೋಷಣೆ

Bangalore : ಕರ್ನಾಟದ ವಿಧಾನಸಭಾ ಚುನಾವಣೆಲ್ಲಿ (Assembly election) ನಾವು ಜನತಾದಳ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಒಲವು ಹೊಂದಿದ್ದೇವೆ. ಆದರೆ ಇದು ಸಾಧ್ಯವಾಗದಿದ್ದರೆ, ನಮ್ಮ ಪಕ್ಷ 25ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಏಕಾಂಗಿಯಾಗಿಯೇ ಸ್ಪರ್ಧೆ (Declaration of Asaduddin Owaisi) ಮಾಡಲಿದೆ ಎಂದು ಎಐಎಂಐಎಂ ಪಕ್ಷದ ನಾಯಕ ಅಸಾದುದ್ದೀನ್‌ ಓವೈಸಿ (AIMIM leader Asaduddin Owaisi) ಹೇಳಿದ್ದಾರೆ.

ಮಾಧ್ಯಮದ ಜೊತೆ ಮಾತನಾಡಿದ ಎಐಎಂಐಎಂ ಪಕ್ಷದ ನಾಯಕ ಅಸಾದುದ್ದೀನ್‌ ಓವೈಸಿ, ಈಗಾಗಲೇ ನಾವು ಮೂವರು ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದ್ದೇವೆ.

ನಾವು ಜೆಡಿಎಸ್‌ ನೊಂದಿಗೆ ಮೈತ್ರಿಗೆ ಸಿದ್ಧವಾಗಿದ್ದೇವೆ. ಮೈತ್ರಿ ಸಂಬಂಧ ಜೆಡಿಎಸ್‌ ಪಕ್ಷದ (JDS) ಜೆಡಿಎಸ್‌ ವರಿಷ್ಠರು ಮತ್ತು ಮಾಜಿ ಪ್ರಧಾನಿಗಳಾದ

ಶ್ರೀ ಎಚ್‌ಡಿ ದೇವೇಗೌಡ (HD Deve Gowda) ಅವರ ಜೊತೆ ಮಾತುಕತೆ ನಡೆಯುತ್ತಿದೆ.

ಜೆಡಿಎಸ್‌ ಪಕ್ಷದ ಕಡೆಯಿಂದ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. 2018ರ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಹಾಕದೇ ಜೆಡಿಎಸ್‌ ಪಕ್ಷಕ್ಕೆ ನಾವು ಬೆಂಬಲ (Declaration of Asaduddin Owaisi) ನೀಡಿದ್ದೇವು.

ಆದರೆ ಈ ಬಾರಿ ಮೈತ್ರಿಯಾಗದೇ ಇದ್ದರೆ ನಮ್ಮ ಅಭ್ಯರ್ಥಿಗಳನ್ನು ಸ್ವತಂತ್ರವಾಗಿ ಕಣಕ್ಕೆ ಇಳಿಸುತ್ತೇವೆ ಎಂದು ಓವೈಸಿ ಹೇಳಿದ್ದಾರೆ.

ಇದನ್ನೂ ಓದಿ : https://vijayatimes.com/hassan-assembly-constituency/

ಇನ್ನು ಕಾಂಗ್ರೆಸ್‌ (Congress) ಪಕ್ಷದೊಂದಿಗೆ ಚುನಾವಣಾ ಪೂರ್ವ ಜೊತೆ ಮೈತ್ರಿ ಮಾಡಿಕೊಳ್ಳುತ್ತೀರಾ? ಎಂಬ ಮಾದ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು,

ಕಾಂಗ್ರೆಸ್‌ ನನ್ನ ವಿರುದ್ಧ ಆಧಾರ ರಹಿತ ಆರೋಪ ಮಾಡಿದೆ. ಹೀಗಾಗಿ ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ.

ಕಾಂಗ್ರೆಸ್‌ ಮತ್ತು ನಮ್ಮ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳಿದ್ದು, ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಸ್ತಾವನೆಯೇ ನಮ್ಮ ಮುಂದಿಲ್ಲ ಎಂದಿದ್ದಾರೆ.

ಇದೇ ವೇಳೆ ರಾಜ್ಯದಲ್ಲಿ ಒಬಿಸಿ (OBC) ವರ್ಗದಲ್ಲಿ ಮುಸ್ಲಿಂಮರಿಗೆ ನೀಡಲಾಗಿದ್ದ ಮೀಸಲಾತಿಯನ್ನು ರದ್ದುಗೊಳಿಸಿರುವ ಬಿಜೆಪಿ (BJP) ಸರ್ಕಾರದ ಕ್ರಮವನ್ನು ಟೀಕಿಸಿದ ಅವರು,

ಮುಸ್ಲಿಮರಿಗೆ ನೀಡಲಾಗಿದ್ದ ಶೇ.4 ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿದ ಬಸವರಾಜ ಬೊಮ್ಮಾಯಿ (Basavaraja Bommai) ಸರ್ಕಾರದ ನಿರ್ಧಾರ ಸಂಪೂರ್ಣ ಕಾನೂನುಬಾಹಿರ.

ಇದರ ಬಗ್ಗೆ ಮುಸ್ಲಿಂ ಸಮುದಾಯ ಕಾನೂನು ಹೋರಾಟ ನಡೆಸಲಿದೆ. ಇನ್ನು ರಾಜ್ಯ ಬಿಜೆಪಿ ಸರ್ಕಾರದ ನಿರ್ಧಾರವನ್ನು ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ ಯಾಕೆ ನಡೆಸಲಿಲ್ಲ?

ಕಾಂಗ್ರೆಸ್‌ ಪಕ್ಷದಿಂದ ಏಕೆ ಬಲವಾದ ಹೇಳಿಕೆಗಳು ಹೊರಹೊಮ್ಮಲಿಲ್ಲ. ಮುಸ್ಲಿಮರಿಗಾದ ಅನ್ಯಾಯದ ಬಗ್ಗೆ ಕಾಂಗ್ರೆಸ್‌ಯಾಕೆ ಧ್ವನಿ ಎತ್ತಲಿಲ್ಲ? ಎಂದು ಪ್ರಶ್ನಿಸಿದರು.

Exit mobile version