ದೇಹದ ಆರೋಗ್ಯ ಕಾಪಾಡುವಲ್ಲಿ ಬಾರ್ಲಿಯ ಪಾತ್ರ

ಬಾರ್ಲೀ ನೀರು ನಮ್ಮ ದೇಹಕ್ಕೆ ಬಹಳ ಒಳ್ಳೆಯ ಔಷಧಿ ಎಂದೇ ಹೇಳಬಹುದು. ಬಾರ್ಲಿಯನ್ನು ಚೆನ್ನಾಗಿ ಬೇಯಿಸಿ ಅದರ ನೀರನ್ನು ಸೋಸಿ ಕುಡಿಯುವುದರಿಂದ ದೇಹದಲ್ಲಿರುವ ವಿಷಕಾರೀ ಅಂಶಗಳು ನಿವಾರಣೆಯಾಗುತ್ತವೆ. ದೇಹದಲ್ಲಿ ವಿಪರೀತ ಉಷ್ಣವಾದಾಗ ಇದರ ನೀರಂತೂ ತುಂಬಾ ಪರಿಣಾಮಕಾರಿಯಾಗುತ್ತದೆ. ದೇಹವನ್ನು ತಂಪುಗೊಳಿಸುತ್ತದೆ.

 ಸಾಮಾನ್ಯ  ಮೂತ್ರ ಸಮಸ್ಯೆಗೆ ಬಾರ್ಲಿ ನೀರನ್ನು ವೈದ್ಯರ ಬಳಿ ಹೋಗುವ ಮೊದಲೊಮ್ಮೆ ಕುಡಿದು ನೋಡಿ.  ಉರಿಮಾತ್ರವೇನಾದರೂ ಬಂದರೆ ತಕ್ಷಣ ಬಾರ್ಲಿ ನೀರನ್ನು ಹೊಟ್ಟೆ ತುಂಬಾ ಕುಡಿಯಿರಿ ತಕ್ಷಣ ಪರಿಹಾರ ಕಾಣುವುದಂತೂ ನಿಜ. ಮೂತ್ರದ ಶೂದ್ಧೀಕರಣಕ್ಕೆ ಇದು ನಂಬರ್ ಒನ್ ಮದ್ದು ಎಂದೇ ಹೇಳಬಹುದು.

ಹೊಟ್ಟೆಯಲ್ಲಿ ಏನೇ ಸಮಸ್ಯೆ ಆದರೂ  ಬಾರ್ಲಿ ನೀರು ಕುಡಿದರೆ ಸಮಸ್ಯೆ ನಿವಾರಣೆಯಾಗುವುದು. ಬಾರ್ಲಿಯನ್ನು ಒಣಗಿಸಿ ಪುಡಿಮಾಡಿ ಇಟ್ಟುಕೊಂಡೂ ದಿನ ನಿತ್ಯ ನೀರಿಗೆ ಅಥವಾ ಹಾಲಿಗೂ ಬೆರಸಿ  ಸೇವನೆ ಮಾಡಬಹುದು, ಕೆಟ್ಟ ಕೊಲೆಸ್ಟರಾಲನ್ನು ಇದು ಕರಗಿಸುತ್ತದೆ. ಹಾಲಿನೊಂದಿಗೆ ಬೆರೆಸಿ ಕುಡಿಯುವುದರಿಂದ  ದೇಹದಲ್ಲಿ ಶಕ್ತಿ ಮೂಡುವುದು.

Exit mobile version