New Delhi: ನಮ್ಮ ಸರ್ಕಾರ ಪ್ರಭು ಶ್ರೀರಾಮನ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು ಆಡಳಿತ ನಡೆಸಲಿದೆ. ನಾವು ರಾಮರಾಜ್ಯದ ಆಡಳಿತ ನೀಡಬೇಕೆಂದು ಪಣ ತೊಟ್ಟಿದ್ದೇವೆ. ಈ ಮೂಲಕ ದೆಹಲಿ (Dehli) ಜನರ ಬದುಕನ್ನು ಉನ್ನತೀಕರಿಸಲು ನಾವು ಪ್ರಯತ್ನಿಸುತ್ತೇವೆ. ಇದಕ್ಕಾಗಿ ನಮ್ಮ ಸರ್ಕಾರ ಪ್ರಭು ಶ್ರೀರಾಮನ (Shree Rama) ಈ 10 ಆದರ್ಶಗಳನ್ನು ನನಸಾಗಿಸಲು ಪ್ರಯತ್ನಿಸಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Aravind Kejrival) ಘೋಷಿಸಿದ್ದಾರೆ.

ದೆಹಲಿಯ ಛತ್ರಸಾಯಿ ಸ್ಟೇಡಿಯಂನಲ್ಲಿ (Chatrasai) ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ವಿಚಾರ ಜಗತ್ತಿನಾದ್ಯಂತ ಇರುವ ಹಿಂದೂಗಳಲ್ಲಿ ಹೆಮ್ಮೆ ಮೂಡಿಸಿದ. ಹಿಂದೂಗಳ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ಹಿಂದೂಗಳ ಬಹುದಿನದ ಕನಸಾದ ರಾಮ ಮಂದಿರ ನಿರ್ಮಾಣವಾಗಿದೆ. ಹೀಗಾಗಿ ಸತ್ಯ, ಪ್ರಾಮಾಣಿಕತೆಯಿಂದ ಕೆಲಸ ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ನಮ್ಮನ್ನು ತೊಡಗಿಸಿಕೊಳ್ಳುವುದೇ ಶ್ರೀರಾಮನಿಗೆ ನಾವೆಲ್ಲರೂ ನೀಡುವ ಗೌರವವಾಗಿದೆ. ಅಯೋಧ್ಯೆಗೆ (Ayodhya) ಪ್ರಯಾಣ ಕೈಗೊಳ್ಳಲು ಬಯಸುವ ಶ್ರೀರಾಮ ಭಕ್ತರಿಗೆ ದೆಹಲಿ ಸರ್ಕಾರದಿಂದ ಸಂಪೂರ್ಣ ನೆರವು ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಅರವಿಂದ್ ಕೇಜ್ರಿವಾಲ್ ಅವರು ಅಳವಡಿಸಿಕೊಳ್ಳಲು ಬಯಸಿರುವ ಪ್ರಭು ಶ್ರೀರಾಮನ ಹತ್ತು ಆದರ್ಶಗಳು :

- ನಮ್ಮ ರಾಜ್ಯದಲ್ಲಿ ಯಾರು ಹಸಿವಿನಿಂದ ಬಳಲಬಾರದು.
- ಪ್ರತಿ ಪ್ರಜೆಗೂ ಉತ್ತಮ ಆಹಾರ ಸಿಗುವಂತೆ ನೋಡಿಕೊಳ್ಳುವುದು.
- ಪ್ರತಿಯೊಬ್ಬರಿಗೆ ಸಮಾನ ಶಿಕ್ಷಣ ಮತ್ತು ಅವಕಾಶ ಕಲ್ಪಿಸಲಾಗುವುದು.
- ಪ್ರತಿಯೊಬ್ಬರ ಆರೋಗ್ಯ ರಕ್ಷಣೆ ಮತ್ತು ಸರ್ವಜನರಿಗೆ ಸೂಕ್ತ ವೈದ್ಯಕೀಯ ವ್ಯವಸ್ಥೆ ಮಾಡುವುದು.
- ದಿನದ 24 ಗಂಟೆಯೂ ನಿರಂತರ ಹಾಗೂ ಉಚಿತ ವಿದ್ಯುತ್ ನೀಡುವುದು.
- ಅಗತ್ಯ ಇರುವಷ್ಟು ನೀರು ಪೂರೈಕೆಗೆ ಕ್ರಮ ಕೈಗೊಳ್ಳುವುದು.
- ಮಹಿಳಾ ಸುರಕ್ಷತೆಗೆ ಕ್ರಮ ಹಾಗೂ ಮಕ್ಕಳ ರಕ್ಷಣೆಗೆ ಆದ್ಯತೆ ನೀಡುವುದು.
- 12 ಲಕ್ಷ ಉದ್ಯೋಗ ಸೃಷ್ಟಿಗೆ ಪ್ರಯತ್ನ.
- ಹಣದುಬ್ಬರ ನಿವಾರಣೆಗೆ ಕ್ರಮ
- ಪ್ರತಿ ನಾಗರಿಕರಿಗೂ ಸಮಾನ ಅವಕಾಶ, ಸಮಾನ ಪ್ರೀತಿ ಲಭಿಸುವಂತೆ ಮಾಡುವುದು.