ನವದೆಹಲಿ, ಆ. 23: ರಾಷ್ಟ್ರ ರಾಜಧಾನಿಯ ಗಾಳಿಯ ಗುಣಮಟ್ಟವನ್ನು ಸುಧಾರಿಸುವ ಉದ್ದೇಶದೊಂದಿಗೆ ಕನಾಟ್ ಪ್ರದೇಶದಲ್ಲಿ ನಿರ್ಮಿಸಲಾಗಿರುವ ದೇಶದ ಮೊದಲ ಸ್ಮಾಗ್ ಟವರ್ ಅನ್ನು (ಗಾಳಿ ಶುದ್ಧೀಕರಣ ಯಂತ್ರ) ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಉದ್ಘಾಟಿಸಿದರು.
ಈ ಟವರ್ ಸುಮಾರು 1 ಕಿ.ಮೀ ವ್ಯಾಪ್ತಿಯಲ್ಲಿ ಪ್ರತಿ ಸೆಕೆಂಡಿಗೆ 1,000 ಘನ ಮೀಟರ್ನಷ್ಟು ಗಾಳಿಯನ್ನು ಶುದ್ಧೀಕರಿಸಲಿದೆ. ಈ ಟವರ್ನ ಕಾರ್ಯಕ್ಷಮತೆ ಮೇಲೆ ನಿಗಾವಹಿಸಲು ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ.
ಈ ಗಾಳಿ ಶುದ್ಧೀಕರಣ ಯಂತ್ರವನ್ನು ಪ್ರಾಯೋಗಿಕ ಯೋಜನೆ ರೂಪದಲ್ಲಿ ಸ್ಥಾಪಿಸಲಾಗಿದೆ. ಒಂದು ತಿಂಗಳೊಳಗೆ ಆರಂಭಿಕ ಗುಣಲಕ್ಷಣಗಳು ಲಭ್ಯವಾಗಲಿದೆ. ಈ ಯೋಜನೆ ಯಶಸ್ವಿಯಾದರೆ, ದೆಹಲಿಯ ಇತರೆ ಭಾಗಗಳಲ್ಲೂ ಸ್ಮಾಗ್ ಟವರ್ ಅನ್ನು ಸ್ಥಾಪಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.