ನವದೆಹಲಿ, ಜೂ. 05: ಕೊರೊನಾ ಸೋಂಕಿನಿಂದ ಒಬ್ಬರು ಅಥವಾ ಇಬ್ಬರೂ ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ದೆಹಲಿ ವಿಶ್ವವಿದ್ಯಾಲಯವು ಸಂಪೂರ್ಣ ಶುಲ್ಕ ವಿನಾಯಿತಿ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಈ ಬಗ್ಗೆ ಸಮೀಕ್ಷೆ ನಡೆಸಿ, ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲು ವಿಶ್ವವಿದ್ಯಾಲಯವು ತನ್ನ ಅಡಿಯಲ್ಲಿ ಬರುವ ಕಾಲೇಜುಗಳಿಗೆ ಪತ್ರ ಬರೆದಿದೆ.
ಸಾಂಕ್ರಾಮಿಕ ರೋಗದ ಎರಡೂ ಅಲೆಗಳಲ್ಲಿ ಪೋಷಕರನ್ನು ಕಳೆದುಕೊಂಡಿರುವ ವಿದ್ಯಾರ್ಥಿಗಳಿಗೆ ಶೇಕಡಾ 100 ರಷ್ಟು ಶುಲ್ಕ ವಿನಾಯಿತು ಅನ್ವಯವಾಗುತ್ತದೆ. ಅವರಿಗೆ ಪರೀಕ್ಷಾ ಶುಲ್ಕವನ್ನು ಸಹ ವಿಧಿಸಲಾಗುವುದಿಲ್ಲ ಎಂದು ವಿವಿ ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ದೆಹಲಿ ವಿಶ್ವವಿದ್ಯಾಲಯದ ಅಡಿಯಲ್ಲಿ ಮೂರು ರೀತಿಯ ಕಾಲೇಜುಗಳಿವೆ. ಟ್ರಸ್ಟ್‌ಗಳು ನಿರ್ವಹಿಸುವ ಕಾಲೇಜುಗಳು; ವಿಶ್ವವಿದ್ಯಾನಿಲಯವು ನಿರ್ವಹಿಸುವ ಕಾಲೇಜುಗಳು ಮತ್ತು ದೆಹಲಿ ಸರ್ಕಾರದಿಂದ ಸಂಪೂರ್ಣವಾಗಿ ಅಥವಾ ಭಾಗಶಃ ಅನುದಾನ ಪಡೆಯುವ ಕಾಲೇಜುಗಳಿವೆ.