ಮಂಡ್ಯಕ್ಕೆ ಮೋದಿ ಭೇಟಿ ಎಫೆಕ್ಟ್‌: ಜೆಡಿಎಸ್‌ ನಾಯಕರಿಗೆ ಖಡಕ್‌ ಸೂಚನೆ ನೀಡಿದ ದೇವೇಗೌಡರು..!

Bangalore : ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಂಡ್ಯಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಮಂಡ್ಯದ ಜೆಡಿಎಸ್ (JDS) ಶಾಸಕರು ಮತ್ತು ಮುಖಂಡರೊಂದಿಗೆ ಸಭೆ ನಡೆಸಿದ ಹೆಚ್. ಡಿ. ದೇವೇಗೌಡರು (DeveGowda warns JDS leaders) ಕೆಲ ಸೂಚನೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.

ನಿನ್ನೆ ಬೆಂಗಳೂರಿನ ದೇವೇಗೌಡರ (Devegowda) ನಿವಾಸದಲ್ಲಿ ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು, ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ,

ಮಳವಳ್ಳಿ ಶಾಸಕ ಅನ್ನದಾನಿ, ನಾಗಮಂಗಲ ಶಾಸಕ ಸುರೇಶ್ ಗೌಡ , ಮದ್ದೂರು ಶಾಸಕ ಡಿ.ಸಿ. ತಮ್ಮಣ್ಣ,

ಮಂಡ್ಯ ಶಾಸಕ ಎಂ. ಶ್ರೀನಿವಾಸ ಸೇರಿದಂತೆ ಅನೇಕ ಮುಖಂಡರು ಈ ಸಭೆಯಲ್ಲಿ ಭಾಗಿಯಾಗಿದ್ದು,

ಪ್ರಧಾನಿ ಮೋದಿಯವರ ಆಗಮನದ ನಂತರ ಜಿಲ್ಲೆಯಲ್ಲಿ ಕೆಲ ರಾಜಕೀಯ ಬದಲಾವಣೆಗಳಾಗಿವೆ.

ಸುಮಲತಾ ಅಂಬರೀಶ್ ಅವರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಹೀಗಾಗಿ ನಮ್ಮ ಪಕ್ಷದ ಯಾವ (DeveGowda warns JDS leaders) ನಾಯಕರು ಕೂಡಾ ಸುಮಲತಾ (Sumalatha) ಅವರ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡಬಾರದು.

ಇದನ್ನೂ ಓದಿ : https://vijayatimes.com/v-somanna-statement/

ಅವರ ವಿಷಯದಲ್ಲಿ ನಮ್ಮ ಪಕ್ಷದ ನಿಲುವು ತಟಸ್ಥವಾಗಿರಬೇಕು. ನಿವೇಲ್ಲಾ ಜಾಗೃತೆಯಿಂದ ಮಾತನಾಡಬೇಕು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಉಂಟಾದ ತಪ್ಪನ್ನು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಾಗಬಾರದು ಎಂದು ದೇವೇಗೌಡರು ಹೇಳಿದ್ದಾರೆ ಎನ್ನಲಾಗಿದೆ.

ಇನ್ನು ಕಳೆದ ಬಾರಿಯಂತೆ ಈ ಬಾರಿಯೂ ಮಂಡ್ಯದ (Mandya) ಏಳು ಕ್ಷೇತ್ರಗಳನ್ನು ನಾವು ಗೆಲ್ಲಬೇಕು.

ಅದಕ್ಕಾಗಿ ಸೂಕ್ತ ತಂತ್ರಗಾರಿಕೆಯನ್ನು ನೀವು ಮಾಡಿಕೊಳ್ಳಿ. ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡು, ಚುನಾವಣೆ ಎದುರಿಸಿ.

ನಿಮ್ಮ ಕ್ಷೇತ್ರಗಳಲ್ಲಿ ನೀವು ಮಾಡಿರುವ ಕೆಲಸ-ಕಾರ್ಯಗಳು, ಪಕ್ಷದ ಸಾಧನೆಗಳನ್ನು ಇಟ್ಟುಕೊಂಡು ಪ್ರಚಾರ ನಡೆಸಿ, ಯಾವುದೇ ಕಾರಣಕ್ಕೂ ಸುಮಲತಾ ವಿಚಾರದಲ್ಲಿಅನಗತ್ಯ ಹೇಳಿಕೆ ನೀಡಬೇಡಿ.

ಇದನ್ನೂ ಓದಿ : https://vijayatimes.com/rajinikanth-and-sanjusamson-meet/

ಸುಮಲತಾ ಅಂಬರೀಶ್ ವಾಗ್ದಾಳಿ ನಡೆಸಿದರೂ, ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಬೇಡಿ. ಸದ್ಯದ ರಾಜಕೀಯ ಸನ್ನಿವೇಶದಲ್ಲಿ ನಾವು ಮೌನವಾಗಿದ್ದಷ್ಟು ನಮಗೆ ಲಾಭ.

ಹೀಗಾಗಿ ಎಲ್ಲ ಮುಖಂಡರು ಒಟ್ಟಾಗಿ ಕೆಲಸ ಮಾಡಿ, ನಾನು ಕೂಡಾ ಮಂಡ್ಯದ ಎಲ್ಲ ಕ್ಷೇತ್ರಗಳಿಗೂ ಪ್ರಚಾರಕ್ಕೆ ಬರುತ್ತೇನೆ.

ಕುಮಾರಸ್ವಾಮಿ (Kumaraswamy) ಅವರು ಕೂಡಾ ಪ್ರಚಾರದಲ್ಲಿ ಭಾಗಿಯಾಗುತ್ತಾರೆ. ಪಕ್ಷವನ್ನು ಗೆಲ್ಲಿಸುವತ್ತ ಮಾತ್ರ ಗಮನ ಹರಿಸಿ ಎಂದು ದೇವೇಗೌಡರು ಸೂಚನೆ ನೀಡಿದ್ಧಾರೆ ಎನ್ನಲಾಗಿದೆ.

ಜೆಡಿಎಸ್ ಭದ್ರ ಕೋಟೆಯಾಗಿರುವ ಮಂಡ್ಯದಲ್ಲಿ ನೆಲೆಯೂರಲು ಬಿಜೆಪಿ ಶತಾಯಗತಾಯ ಪ್ರಯತ್ನ ನಡೆಸುತ್ತಿದೆ.

ಸುಮಲತಾ ಅಂಬರೀಶ್ಅವರು ಬಿಜೆಪಿಗೆ ಬೆಂಬಲ ನೀಡಿರುವುದರಿಂದ ಮಂಡ್ಯದಲ್ಲಿ ಬಿಜೆಪಿಗೆ ಹೊಸ ಬಲ ಬಂದಿದೆ. ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಬಿಜೆಪಿ ಮುಂದಾಗಿದೆ.

Exit mobile version