`ಮಹಾ’ ಸರ್ಕಾರ ಬಿಕ್ಕಟ್ಟು ; ನೇರವಾಗಿ ಅಖಾಡಕ್ಕಿಳಿದ ಬಿಜೆಪಿ, ಫಡ್ನವೀಸ್ ಮನೆಯಲ್ಲಿ ಮೈತ್ರಿ ಚರ್ಚೆ

Devendra

ಮಹಾರಾಷ್ಟ್ರದ ರಾಜಕೀಯ(Maharashtra Politics) ದಿಕ್ಕನ್ನೆ ಬದಲಿಸುವ ನಿರ್ಣಯಕ್ಕೆ ಬಿಜೆಪಿ(BJP) ಮುಂದಾಗಿದೆ. ಉದ್ದವ್ ಠಾಕ್ರೆ(Uddhav Thackrey) ನೇತೃತ್ವದ ಶಿವಸೇನೆ(Shivsena) ನೀಡುತ್ತಿರುವ ಅನೇಕ ಆಫರ್‍ಗಳನ್ನು ತಿರಸ್ಕರಿಸುತ್ತಿರುವ ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಾಸಕರ ಬಣದೊಂದಿಗೆ ಮೈತ್ರಿ ಮಾಡಿಕೊಂಡು ಹೊಸ ಸರ್ಕಾರ ರಚಿಸುವ ಮೂಲಕ ಉದ್ದವ್ ಠಾಕ್ರೆಗೆ ಶಾಕ್ ನೀಡಲು ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್(Devendra Fadnavis) ಮುಂದಾಗಿದ್ದಾರೆ.

ಈ ಕುರಿತು ಸರಣಿ ಸಭೆಗಳನ್ನು ನಡೆಸುತ್ತಿರುವ ದೇವೇಂದ್ರ ಫಡ್ನವೀಸ್, ಮೈತ್ರಿ ಲೆಕ್ಕಚಾರದ ಕುರಿತು ಏಕನಾಥ್ ಶಿಂಧೆ(Eknath Shinde) ನೇತೃತ್ವದ ಬಂಡಾಯ ಶಾಸಕರೊಂದಿಗೆ ಮಾತುಕತೆ ನಡೆಸಲು ಮುಂದಾಗಿದ್ದಾರೆ. ಸುಪ್ರೀಂಕೋರ್ಟ್(Supremecourt) ಶಾಸಕರ ಅನರ್ಹತೆ ಕುರಿತು ನೀಡಿದ ತೀರ್ಪಿನ ನಂತರ ಬಿಜೆಪಿ ನೇರವಾಗಿ ಅಖಾಡಕ್ಕೆ ಧುಮುಕಿದೆ. ಇಷ್ಟು ದಿನಗಳ ಕಾಲ ತೆರೆಯಲ್ಲಿ ನಿಂತು ರಾಜಕೀಯ ತಂತ್ರಗಳನ್ನು ಹೆಣೆಯುತ್ತಿದ್ದ ಬಿಜೆಪಿ ಇದೀಗ ನೇರವಾಗಿ ಬಂಡಾಯ ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚನೆಗೆ ಮುಂದಾಗಿದೆ ಎನ್ನಲಾಗಿದೆ.

ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಜೀನಾಮೆ ನೀಡಿರುವುದರಿಂದ ಹಂಗಾಮಿ ಸ್ಪೀಕರ್‍ರನ್ನು ನೇಮಿಸಿ ಅವಿಶ್ವಾಸ ಗೊತ್ತುವಳಿ ಮಂಡಿಸಲು ಬಿಜೆಪಿ ತಂತ್ರ ಹೆಣೆದಿದೆ. ಸದ್ಯ ಉದ್ದವ್ ಠಾಕ್ರೆ ಸರ್ಕಾರಕ್ಕೆ ಬಹುಮತವಿಲ್ಲ. ಹೀಗಾಗಿ ಅವಿಶ್ವಾಸ ಗೊತ್ತುವಳಿ ಮಂಡಿಸಿ, ಸರ್ಕಾರವನ್ನು ಪತನಗೊಳಿಸಿ, ಶಿವಸೇನೆಯ ಬಂಡಾಯ ಶಾಸಕರ ಬೆಂಬಲದೊಂದಿಗೆ ಹೊಸ ಸರ್ಕಾರ ರಚನೆ ಮಾಡುವ ಕುರಿತು ಚರ್ಚೆ ನಡೆಸಲಾಗುತ್ತಿದೆ. ಬಿಜೆಪಿ ಹೈಕಮಾಂಡ್ ಕೂಡಾ ಮಹಾರಾಷ್ಟ್ರಕ್ಕೆ ತನ್ನ ಪ್ರತಿನಿಧಿಗಳನ್ನು ಕಳುಹಿಸಿದ್ದು, ಸರ್ಕಾರ ರಚನೆಯಾದರೆ ಮುಖ್ಯಮಂತ್ರಿ,

ಉಪಮುಖ್ಯಮಂತ್ರಿ, ಸಚಿವ ಸ್ಥಾನ ಹಂಚಿಕೆ, ಖಾತೆ ಹಂಚಿಕೆ ಹೀಗೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ನಿರ್ಧರಿಸಿದೆ. ಮೈತ್ರಿ ಲೆಕ್ಕಾಚಾರದೊಂದಿಗೆ ಸರ್ಕಾರ ರಚನೆ ಬಗ್ಗೆಯೂ ಗಂಭೀರ ಚರ್ಚೆ ನಡೆದಿದೆ. ಅಘಾಡಿ ಸರ್ಕಾರ(Aghadi Government) ಪತನವಾಗುವ ಎಲ್ಲ ಲಕ್ಷಣಗಳಿದ್ದು, ನಾಳೆ ಅಥವಾ ನಾಡಿದ್ದೂ ಬಂಡಾಯ ಶಾಸಕರು ಅವಿಶ್ವಾಸ ನಿರ್ಣಯವನ್ನು ಮಂಡಿಸಲಿದ್ದಾರೆ. ಇದೇ ವಾರದಲ್ಲಿ ಹೊಸ ಸರ್ಕಾರ ರಚನೆಯಾಗುವ ಸಾಧ್ಯತೆಯಿದೆ.

Exit mobile version