ಡೆವಿಲ್ ಚಿತ್ರದ ಕುರಿತು ಸೈಲೆಂಟ್ ಆಗಿಯೇ ಬಿಗ್ ಅಪ್‌ಡೇಟ್ ನೀಡಿದ ನಟ ದರ್ಶನ್

ಚಾಲೆಂಜಿಂಗ್ ಸ್ಟಾರ್‌ ದರ್ಶನ್ (Darshan) ಅಭಿನಯದ ಕಾಟೇರ ಸಿನಿಮಾವು ಕಳೆದ ವರ್ಷ ಡಿಸೆಂಬರ್‌ನಲ್ಲಿ ತೆರೆಕಂಡಿತ್ತು. ಅಭಿಮಾನಿಗಳಿಗೆ ಈ ಸಿನಿಮಾವು ಸಖತ್ ಹಿಡಿಸಿತ್ತು. ಬಾಕ್ಸ್ ಆಫೀಸ್‌ನಲ್ಲೂ ಈ ಸಿನಿಮಾ ಸಾಕಷ್ಟು ಕಮಾಯಿ ಮಾಡಿತ್ತು . ಕಾಟೇರ ತೆರೆಕಂಡು ಒಂದೆರಡು ತಿಂಗಳುಗಳ ನಂತರ ಡೆವಿಲ್ ಸಿನಿಮಾ ಆರಂಭಿಸಿದ್ದರು ದರ್ಶನ್. ಇದೀಗ ಡೆವಿಲ್‌ (Devil) ಕುರಿತಂತೆ ಸದ್ದಿಲ್ಲದೇ ಒಂದು ಗುಡ್ ನ್ಯೂಸ್ ನೀಡಿದ್ದಾರೆ.

Devil

ನಟ ದರ್ಶನ್  ಅವರು ಸದ್ಯ ವಿಶ್ರಾಂತಿಯಲ್ಲಿ ಇದ್ದಾರೆ. ಅವರ ಕೈಗೆ ಪೆಟ್ಟಾಗಿದ್ದರಿಂದ ಅವರು ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಡೆವಿಲ್ ಸಿನಿಮಾ ಶೂಟಿಂಗ್ ವೇಳೆ ಈ ಗಾಯ ಆಗಿತ್ತು. ಹಾಗಾಗಿ ಶೂಟಿಂಗ್ ಇಂದ ಕೊಂಚ ಬ್ರೇಕ್ ಪಡೆದಿದ್ದಾರೆ. ದರ್ಶನ್ ಅವರು ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಅವರು ವರ್ಷಕ್ಕೆ ಎರಡು ಸಿನಿಮಾಗಳಲ್ಲಿ ನಟಿಸೋ ಟಾರ್ಗೆಟ್ ಇಟ್ಟುಕೊಂಡಿದ್ದರು. ಈಗ ಕೈಗೆ ಪೆಟ್ಟಾಗಿರುವುದರಿಂದ ಈ ವರ್ಷ ಅದು ಸಾಧ್ಯವಾಗುತ್ತಿಲ್ಲ. ಇತ್ತೀಚೆಗೆ ಪತ್ನಿ ವಿಜಯಲಕ್ಷ್ಮಿ (Vijayalakshmi) ಜೊತೆ ಅವರು ವಿದೇಶಕ್ಕೆ ತೆರಳಿದ್ದರು. ಅಲ್ಲಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ದರ್ಶನ್ ಅವರು ಸಂಪೂರ್ಣ ಗುಣಮುಖರಾದ ಬಳಿಕ ಸಿನಿಮಾದ ಶೂಟ್ ಆರಂಭಿಸಲಿದ್ದಾರೆ.

ನಮ್ಮ ನಲ್ಮೆಯ ಸೆಲೆಬ್ರಿಟಿಸ್ (Celebrities) ಹಾಗೂ ಕನ್ನಡಾಭಿಮಾನಿಗಳಿಗೆ ವಿಶೇಷ ಪ್ರಕಟಣೆ.. “ಡೆವಿಲ್ ಚಿತ್ರವು ಇದೇ 2024ರ ಕ್ರಿಸ್‌ಮಸ್‌ನಲ್ಲಿ ಬೆಳ್ಳಿತೆರೆಯ ಮೇಲೆ ಬರಲಿದೆ. ನಿಮ್ಮ ಪ್ರೀತಿ-ಹಾರೈಕೆ ಸದಾ ಕನ್ನಡ ಚಿತ್ರಗಳ ಮೇಲಿರಲಿ..” ಎಂದು ದರ್ಶನ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೊಸ್ಟ್ ಮಾಡಿದ್ದಾರೆ.ಅಂದುಕೊಂಡಂತೆ ಎಲ್ಲವೂ ಸರಿಯಾಗಿ ನಡೆದಿದ್ದರೆ, ಅಕ್ಟೋಬರ್‌ನಲ್ಲಿ ಈ ಸಿನಿಮಾದ ಬರುತ್ತಿತ್ತು. ಅದರಲ್ಲಿ ಯಾವುದೇ ಬದಲಾವಣೆ ಇರುತ್ತಿರಲಿಲ್ಲ. ಆದರೆ ಇದೀಗ ಡೆವಿಲ್ ಬಿಡುಗಡೆ ದಿನಾಂಕವು ಒಂಚೂರು ಮುಂದಕ್ಕೆ ಹೋಗಿದೆ. 2024ರ ಡಿಸೆಂಬರ್‌ನಲ್ಲಿ (December) ಡೆವಿಲ್ ಸಿನಿಮಾ ರಿಲೀಸ್ ಆಗೋದು ಖಚಿತ ಅಂತ ಮಾಹಿತಿ ನೀಡಿದ್ದಾರೆ ನಟ ದರ್ಶನ್.

Exit mobile version