ಜೆಡಿಎಸ್‌-ಬಿಜೆಪಿ ಮೈತ್ರಿ: ಜಾತ್ಯತೀತ ತತ್ವವನ್ನು ಗಾಳಿಗೆ ತೂರಿದ ಎಚ್‌ಡಿಡಿ, ಎಚ್‌ಡಿಕೆ ಬದುಕಿದ್ದೂ ಸತ್ತಂತೆ ಎಂದ ಡಿಕೆಶಿ

Mandya:ಲೋಕಸಭಾ ಚುನಾವಣೆಯಲ್ಲಿ (Lok Sabha elections) ಜೆಡಿಎಸ್‌ ಬಿಜೆಪಿ (JDS, BJP) ಜೊತೆಗೆ ಮೈತ್ರಿ ಮಾಡಿಕೊಂಡಿರುವುದು ಜಾತ್ಯತೀತ ತತ್ವಕ್ಕೆ ವಿರುದ್ಧವಾಗಿದೆ ಹಾಗಿದ್ದ ಮೇಲೆ ಎಚ್.ಡಿ.ದೇವೇಗೌಡ,(HD Deve Gowda) ಎಚ್.ಡಿ.ಕುಮಾರಸ್ವಾಮಿ (HD Kumaraswamy) ಜನರ ಕಣ್ಣಲ್ಲಿ ಬದುಕಿದ್ದೂ ಸತ್ತಂತೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(D K Shivakumar) ಮಾರ್ಮಿಕವಾಗಿ ಹೇಳಿದ್ದಾರೆ.ಸೋಮವಾರ ಮಂಡ್ಯ ಲೋಕಸಭಾ ಕ್ಷೇತ್ರದ (Mandya Lok Sabha Constituency) ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಎದುರು ನೆರೆದಿದ್ದ ಜನ ಸಮೂಹವನ್ನುದ್ದೇಶಿಸಿ ಮಾತನಾಡಿ ಜೆಡಿಎಸ್ ಪಕ್ಷದ (JDS) ಕುರಿತಾಗಿ ಕಿಡಿ ಕಾರಿದ್ದಾರೆ.

ಈ ಹಿಂದೆ ಕಾಂಗ್ರೆಸ್ (Congress) ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ನಾಟಕ ಮಾಡಿ ದೇವೇಗೌಡರು ಮತ್ತು ಕುಮಾರಸ್ವಾಮಿ (Deve Gowda and Kumaraswamy) ಇದೀಗ ಕೇಸರಿ ಬಾವುಟ ಹಿಡಿದಿದ್ದಾರೆ. ಜಾತ್ಯತೀತ ತತ್ವವನ್ನು ನೀರಿಗೆ ಹಾಕಿ ತೊಳೆದುಬಿಟ್ಟಿದ್ದಾರೆ. ಇಂತಹ ರಾಜಕೀಯ ನೋಡಿದರೆ ನಾಚಿಕೆಯಾಗುತ್ತದೆ. ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ. ಗಂಟೆಗೊಂದು ಮಾತು, ಸ್ವಂತಕ್ಕೋಸ್ಕರ ಏನು ಬೇಕಾದರೂ ಮಾಡುತ್ತಾರೆ.ಮಂಡ್ಯದ (Mandya) ಗೌಡಿಕೆ, ಮಂಡ್ಯದ ಸ್ವಾಭಿಮಾನವನ್ನು ಬೇರೆಯವರ ಕೈಗೆ ಕೊಟ್ಟ ಇತಿಹಾಸವಿರಲಿಲ್ಲ.ಇದು ಮಂಡ್ಯ ಜನರ ಸ್ವಾಭಿಮಾನದ ನಾಮಪತ್ರ. ಮಂಡ್ಯ ಇತಿಹಾಸವನ್ನೊಮ್ಮೆ ನೋಡಿದರೆ ಶಿವನಂಜಪ್ಪ, ಶಂಕರಗೌಡ, ಜಿ.ಮಾದೇಗೌಡ, ಎಸ್.ಎಂ. ಕೃಷ್ಣ, ಅಂಬರೀಶ್ (Shivananjappa, Shankaragowda, G. Madegowda, S.M. Krishna, Ambarish) ಸೇರಿದಂತೆ ಲೋಕಸಭೆಗೆ ಆಯ್ಕೆಯಾದ ಎಲ್ಲರೂ ಸ್ಥಳೀಯರೇ ಆಗಿದ್ದಾರೆ. ಮಂಡ್ಯ ಜನರೂ ಕೂಡ ಸ್ಥಳೀಯರಿಗೇ ಮಣೆ ಹಾಕುತ್ತಾ ಬಂದಿದ್ದಾರೆ. ಹೊರಗಿನವರಿಗೆ ಮಣೆ ಹಾಕಿರುವುದನ್ನು ಇತಿಹಾಸದಲ್ಲಿ ಕಾಣಲಾಗುವುದಿಲ್ಲ ಎಂದಿದ್ದಾರೆ.

ಇನ್ನು ಕುಮಾರಸ್ವಾಮಿ ಹಾಸನದಲ್ಲಿ (Hassana) ಹುಟ್ಟಿದವರು. ರಾಮನಗರಕ್ಕೆ(Ramnagar) ಬಂದರು. ಅವರ ತಂದೆ ದೇವೇಗೌಡರನ್ನು ಕಾಂಗ್ರೆಸ್ ಪ್ರಧಾನಿ ಪಟ್ಟಕ್ಕೇರಿಸಿತು. ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತು. ನಾನು ಮೋಸ ಮಾಡಿದ್ದೇನೆ ಎಂದು ಹೇಳುವ ಕುಮಾರಸ್ವಾಮಿ ಅವರು ಜಿ.ಟಿ.ದೇವೇಗೌಡ (GT Deve Gowda), ಬಾಲಕೃಷ್ಣ, ಶಿವಲಿಂಗೇಗೌಡ (Balakrishna, Shivalingegowda) ಅವರನ್ನೊಮ್ಮೆ ಕೇಳಲಿ. ಸರ್ಕಾರ ಉಳಿಸುವುದಕ್ಕೆ ಯಾವ ರೀತಿ ಹೋರಾಟ ಮಾಡಿದ್ದೆವು. ಯಾವ ರೀತಿ ಕೈ ಬಲಪಡಿಸಿದ್ದೆ. ಶಕ್ತಿ ತುಂಬಿದ್ದೆ ಎಂದು ಹೇಳುತ್ತಾರೆ. ತೊಂದರೆಯಾಗದಂತೆ ೫ ವರ್ಷ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸು. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡೋಣ ಎಂದು ಹೇಳಿದ್ದೆ. ಆದರೆ, ಅದನ್ನು ಉಳಿಸಿಕೊಳ್ಳಲಿಲ್ಲ. ನಾನು ಕಿರುಕುಳ ಕೊಟ್ಟೇ ಎಂದು ಹೇಳುತ್ತಾರೆ. ನಾನು ಕಿರುಕುಳ ಕೊಟ್ಟಿದ್ದರೆ ಅವತ್ತೇ ರಾಜೀನಾಮೆ ಕೊಡಬಹುದಿತ್ತು. ಯೋಗಕ್ಕಿಂತ ಯೋಗಕ್ಷೇಮ ಮುಖ್ಯ. ಕಾಂಗ್ರೆಸ್ ಕೊಟ್ಟ ಅಧಿಕಾರವನ್ನು ಉಳಿಸಿಕೊಳ್ಳಲಾಗದೆ ಈಗ ಬಾಯಿಗೆ ಬಂದಂತೆ ಬಡಬಡಾಯಿಸುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.

Exit mobile version