ಚನ್ನಪಟ್ಟಣ ಉಪಚುನಾವಣೆಗೆ ಡಿಕೆಶಿ ಕಣಕ್ಕೆ: ಸುಳಿವು ಕೊಟ್ಟ ಡಿಕೆ ಹೇಳಿಕೆ!

Ramanagar: ಚನ್ನಪಟ್ಟಣ (Channapattana) ಉಪಚುನಾವಣೆ ಕುರಿತು ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆ ಶುರುವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಸೋಲುಂಡಿರುವ ಡಿಕೆ ಸುರೇಶ್ ಅವರೇ ಚನ್ನಪಟ್ಟಣ ಉಪಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಇದೀಗ ಅಚ್ಚರಿಯ ಬೆಳವಣಿಗೆಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (D K Shivakumar) ಅವರೇ ಸ್ವತಃ ಉಪಚುನಾವಣೆಯ ಕಣಕ್ಕೆ ಇಳಿಯುವ ಸುಳಿವು ನೀಡಿದ್ದಾರೆ.

Channapattana

ಚನ್ನಪಟ್ಟಣದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ ನನ್ನ ಹೃದಯಲ್ಲಿದೆ. ಐ ವಾಂಟ್ ಟು ಲವ್ ಚನ್ನಪಟ್ಟಣ (I Want to Love Channapattana) ಐ ವಾಂಟ್ ಟು ಡೆವೆಲಪ್ ಚನ್ನಪಟ್ಟಣ (I Want to Develop Channapattana). ನಾನು ಚನ್ನಪಟ್ಟಣದ ಜನತೆಯ ಋಣ ತೀರಿಸಬೇಕಿದೆ. ಆದರೆ ಸದ್ಯಕ್ಕೆ ನಾನು ಚನ್ನಪಟ್ಟಣ ಉಪಚುನಾವಣೆಗೆ ಸ್ಪರ್ಧೆ ಕುರಿತು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಚನ್ನಪಟ್ಟಣ ಕ್ಷೇತ್ರದ ಜನರ ಮೇಲೆ ನನಗೆ ಅತೀವ ಪ್ರೀತಿಯಿದೆ. ಹೀಗಾಗಿ ನಾನು ಕನಕಪುರ (Kanakapura) ಕ್ಕಿಂತ ಹೆಚ್ಚಿನ ಅಭಿವೃದ್ಧಿಯನ್ನು ಚೆನ್ನಪಟ್ಟಣದಲ್ಲಿ ಮಾಡುತ್ತೇನೆ. ಇವತ್ತು ಜನರನ್ನು ಭೇಟಿ ಮಾಡಿ ಮಾತನಾಡುತ್ತೇನೆ. ಪಕ್ಷದ ನಾಯಕರು, ಮತದಾರರು ಏನು ಹೇಳ್ತಾರೆ ಅದನ್ನ ಕೇಳುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ ಚೆನ್ನಪಟ್ಟಣ ಉಪಚುನಾವಣೆಯ ಕಣಕ್ಕೆ ಇಳಿಯುವ ಸುಳಿವು ನೀಡಿದ್ದಾರೆ.

ಇನ್ನು ಚನ್ನಪಟ್ಟಣದಲ್ಲಿ ಪ್ರಾಬಲ್ಯ ಹೊಂದಿರುವ ಎಚ್.ಡಿ.ಕುಮಾರಸ್ವಾಮಿ (H D Kumaraswamy) ಅವರಿಗೆ ನೇರ ಸವಾಲು ಹಾಕುವ ಚಿಂತನೆಯಲ್ಲಿ ಡಿಕೆ ಶಿವಕುಮಾರ್ ಇದ್ದು, ಮತ್ತೊಮ್ಮೆ ದೇವೇಗೌಡರ ಕುಟುಂಬ ಹಾಗೂ ಡಿಕೆ ಬ್ರದರ್ಸ್ ನಡುವಿನ ಕಾಳಗಕ್ಕೆ ಚೆನ್ನಪಟ್ಟಣ ಸಾಕ್ಷಿಯಾಗಲಿದೆ. ಒಂದೊಮ್ಮೆ ಚೆನ್ನಪಟ್ಟಣದಲ್ಲಿ ಡಿಕೆಶಿ ಗೆಲುವು ಸಾಧಿಸಿದರೆ, ಕನಕಪುರವನ್ನು ಸಹೋದರ ಡಿಕೆ ಸುರೇಶ್ಗೆ (D K Suresh) ಬಿಟ್ಟು ಕೊಡುವ ಯೋಜನೆಯನ್ನು ಡಿಕೆಶಿ ರೂಪಿಸಿದ್ದಾರೆ ಎನ್ನಲಾಗುತ್ತಿದೆ. ಇನ್ನು ಚೆನ್ನಪಟ್ಟಣ ಉಪಚುನಾವಣೆಯಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟ (BJP-JDS Alliance) ಮುಂದುವರೆಯುವ ಸಾಧ್ಯತೆಯಿದ್ದು, ಮೈತ್ರಿಕೂಟದ ಅಭ್ಯರ್ಥಿಯನ್ನಾಗಿ ಯಾರನ್ನು ಮಾಡಬೇಕೆಂಬ ಚರ್ಚೆ ನಡೆಯುತ್ತಿದೆ. ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ ಮುಂಚೂಣಿಯಲ್ಲಿದೆ.

Exit mobile version