ಈ ಆಹಾರಗಳನ್ನು ಒಟ್ಟಿಗೆ ಸೇವಿಸಬೇಡಿ, ಇದರಿಂದ ನಿಮ್ಮ ಚರ್ಮಕ್ಕೆ ಹಾನಿಯಾಗಬಹುದು..

ನಮ್ಮ ಚರ್ಮದ ಆರೈಕೆಯಲ್ಲಿ ಆರೋಗ್ಯಕರ ದಿನಚರಿ ಮಾತ್ರವಲ್ಲದೇ ನಮ್ಮ ಆಹಾರವೂ ಪ್ರಮುಖ ಪಾತ್ರ ವಹಿಸುತ್ತವೆ. ಕೆಲವೊಮ್ಮೆ ನಾವು ಸೇವಿಸುವ ಆಹಾರವು ಚರ್ಮದ ತೊಂದರೆಗಳು ಮತ್ತು ಅಲರ್ಜಿಗೆ ಕಾರಣವಾಗುತ್ತದೆ. ಆಯುರ್ವೇದದ ಪ್ರಕಾರ, ಕೆಲವು ಆಹಾರಗಳನ್ನು ಒಟ್ಟಿಗೆ ಸೇವಿಸಬಾರದು. ಉದಾಹರಣೆಗೆ, ಹಾಲಿನ ಉತ್ಪನ್ನಗಳನ್ನು ಮಾಂಸಾಹಾರಗಳೊಂದಿಗೆ ತಿನ್ನಬಾರದು. ಹೀಗೆ ಮಾಡಿದರೆ ನಮ್ಮ ಚರ್ಮಕ್ಕೆ ತೊಂದರೆಯಾಗಬಹುದು. ಹಾಗಾದರೆ ಬನ್ನಿ, ಯಾವ ಆಹಾರಗಳನ್ನ ಒಟ್ಟಿಗೆ ತಿನ್ನುವುದನ್ನು ತಪ್ಪಿಸಬೇಕು ಎಂದು ನಿಮಗೆ ತಿಳಿಸಿಕೊಡುತ್ತೇವೆ.

ಚರ್ಮ ಸಮಸ್ಯೆಗೆ ಕಾರಣವಾಗುವ ಒಟ್ಟಿಗೆ ಸೇವಿಸಬಾರದಂತಹ ಆಹಾರಗಳನ್ನು ಈ ಕೆಳಗೆ ನೀಡಲಾಗಿದೆ:

ಹಾಲು:
ಉದ್ದಿನ ಬೇಳೆ, ಚೀಸ್, ಮೊಟ್ಟೆ, ಮಾಂಸ ತಿಂದ ನಂತರ ಹಾಲು ಕುಡಿಯಬಾರದು. ಇದು ಹಾನಿಕಾರಕವಾಗಿದೆ. ಹಸಿರು ತರಕಾರಿಗಳು ಮತ್ತು ಮೂಲಂಗಿಯನ್ನು ಸೇವಿಸಿದ ನಂತರವೂ ಹಾಲು ಕುಡಿಯಬಾರದು. ಮೊಟ್ಟೆ, ಮಾಂಸ ಮತ್ತು ಚೀಸ್ ತಿಂದ ನಂತರ ಹಾಲು ಕುಡಿಯುವುದನ್ನು ತಪ್ಪಿಸಬೇಕು. ಅವುಗಳನ್ನು ಒಟ್ಟಿಗೆ ತಿನ್ನುವುದು ಜೀರ್ಣಕ್ರಿಯೆಗೆ ತೊಂದರೆ ಉಂಟುಮಾಡುತ್ತದೆ. ಇದರಿಂದ ಅಲರ್ಜಿಗಳು ಉಂಟಾಗುತ್ತವೆ.

ಮೊಸರು:
ಹುಳಿ ಹಣ್ಣುಗಳನ್ನು ಮೊಸರಿನೊಂದಿಗೆ, ವಿಶೇಷವಾಗಿ ಸಿಟ್ರಸ್ ಹಣ್ಣುಗಳೊಂದಿಗೆ ತಿನ್ನಬಾರದು. ವಾಸ್ತವವಾಗಿ, ಮೊಸರು ಮತ್ತು ಹಣ್ಣುಗಳು ವಿಭಿನ್ನ ಕಿಣ್ವಗಳನ್ನು ಹೊಂದಿರುತ್ತವೆ. ಈ ಕಾರಣಕ್ಕಾಗಿ, ಅವುಗಳನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ, ಆದ್ದರಿಂದ ಇವೆರಡನ್ನೂ ಒಟ್ಟಿಗೆ ತೆಗೆದುಕೊಳ್ಳುವುದು ಸೂಕ್ತವಲ್ಲ. ಜೊತೆಗೆ ಮೀನನ್ನು ಮೊಸರಿನೊಂದಿಗೆ ಸೇವಿಸಬಾರದು. ಏಕೆಂದರೆ ಮೊಸರು ತಣ್ಣಗಿನ ಪರಿಣಾಮ ಹೊಂದಿದೆ. ಇದರ ಜೊತೆ ಯಾವುದೇ ಬಿಸಿ ಸೇವಿಸಬಾರದು. ಆದರೆ ಮೀನು ಬಿಸಿಯಾಗಿರುತ್ತದೆ. ಆದ್ದರಿಂದ ಇದನ್ನು ಮೊಸರಿನೊಂದಿಗೆ ತಿನ್ನಬಾರದು. ಇವುಗಳಿಂದ ಜೀರ್ಣಸಮಸ್ಯೆ ಉಂಟಾಗುವುದಲ್ಲದೇ, ನಿಮ್ಮ ಚರ್ಮಕ್ಕೂ ಹಾನಿಕಾರಕವಾಗಿದೆ.

ಜೇನುತುಪ್ಪ:
ಜೇನುತುಪ್ಪವನ್ನು ಎಂದಿಗೂ ಬಿಸಿ ಮಾಡಿ ತಿನ್ನಬಾರದು. ಜ್ವರ ಹೆಚ್ಚಿದ್ದಾಗಲೂ ಜೇನುತುಪ್ಪವನ್ನು ಸೇವಿಸಬಾರದು. ಇದು ದೇಹದಲ್ಲಿ ಪಿತ್ತರಸವನ್ನು ಹೆಚ್ಚಿಸುತ್ತದೆ. ಜೇನುತುಪ್ಪ ಅಥವಾ ಬೆಣ್ಣೆಯನ್ನು ಒಟ್ಟಿಗೆ ತಿನ್ನಬಾರದು. ತುಪ್ಪ ಮತ್ತು ಜೇನುತುಪ್ಪವನ್ನು ಎಂದಿಗೂ ಒಟ್ಟಿಗೆ ತಿನ್ನಬಾರದು. ನೀರಿನಲ್ಲಿ ಬೆರೆಸಿದ ಜೇನುತುಪ್ಪ ಮತ್ತು ತುಪ್ಪ ಕೂಡ ಹಾನಿಕಾರಕವಾಗಿದೆ. ಆದ್ದರಿಂದ ಜೇನುತುಪ್ಪವನ್ನು ಈ ವಿಚಾರಗಳೊಂದಿಗೆ ತಿನ್ನುವದನ್ನು ಇಂದೇ ಬಿಟ್ಟುಬಿಡಿ. ಇಲ್ಲವಾದಲ್ಲಿ ಆರೋಗ್ಯ ಸಮಸ್ಯೆ ಕಟ್ಟಿಟ್ಟ ಬುತ್ತಿಯಾಗುತ್ತದೆ.

ಇವುಗಳನ್ನು ಒಟ್ಟಿಗೆ ತಿನ್ನುವುದನ್ನು ತಪ್ಪಿಸಿ:

Exit mobile version