ಜನರಿಗೆ ವ್ಯಾಕ್ಸಿನ್ ಮೂರನೇ ಡೋಸ್ ನೀಡುವುದು ಅಗತ್ಯವೇ?: ಬಾಂಬೆ ಹೈಕೋರ್ಟ್ ಪ್ರಶ್ನೆ

ಎರಡೂ ಡೋಸ್ ವ್ಯಾಕ್ಸಿನ್ ಪಡೆದಿರುವ ನಾಗರೀಕರಿಗೆ ಮೂರನೇ ಡೋಸ್ ವ್ಯಾಕ್ಸಿನ್ (ಬೂಸ್ಟರ್ ಡೋಸ್) ಅನಿವಾರ್ಯವೇ? ಎಂದು ಮಹಾರಾಷ್ಟ್ರ ಸರ್ಕಾರವನ್ನು ಬಾಂಬೆ ಹೈಕೋರ್ಟ್ ಪ್ರಶ್ನಿಸಿದೆ. ಒಂದಷ್ಟು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ  ವಿಚಾರಣೆ ನಡೆಸುತ್ತಿದ್ದ ಕೋರ್ಟ್ ಈ ರೀತಿ ಪ್ರಶ್ನಿಸಿದೆ. ಚೀಫ್ ಜಸ್ಟೀಸ್ ದಿಪಾಂಕರ್ ದತ್ತ ಮತ್ತು ಜಸ್ಟೀಸ್ ಜಿ ಎಸ್ ಕುಲಕರ್ಣಿಯವರನ್ನೊಳಗಂಡ ಪೀಠ ಈ ಪ್ರಶ್ನೆ ಕೇಳಿದೆ.

 ಇತ್ತೀಚೆಗೆ ರಾಜ್ಯಸರ್ಕಾರದೊಂದಿಗೆ ನಡೆದ ಚರ್ಚೆಯಲ್ಲಿ ಮಹಾರಾಷ್ಟ್ರದ ಟಾಸ್ಕ್ ಫೋರ್ಸ್ ಎರಡು ಡೋಸ್ ವ್ಯಾಕ್ಸಿನ್ ಪಡೆದ ಬಳಿಕವೂ ಮೂರನೇ  ಬೂಸ್ಟರ್ ಡೋಸ್ ನ ಅಗತ್ಯ ಬೀಳಬಹುದು ಎಂದು ಹೇಳಿತ್ತು. ಇದು ಮುಂದೆ ಬರುವುದೆಂದು ಅಂದಾಜಿಸಲಾಗಿರುವ ಇತರೆ ಹೊಸ ರಂಪಾಂತರಿ ವೈರಸ್ಗಳ ವಿರುದ್ಧ ಸಹಕಾರಿಯಾಗಬಹುದೆಂದು ಹೇಳಲಾಗಿತ್ತು.

ಇದೀಗ ಹೈಕೋರ್ಟ್, ಕೇಂದ್ರ ಮತ್ತು ಮಹಾರಾಷ್ಟ್ರ ರಾಜ್ಯ ಸರಕಾರಕ್ಕೆ ಸಂಪೂರ್ಣವಾಗಿ ವ್ಯಾಕ್ಸಿನ್ ಹಾಕಿಸಿಕೊಂಡವರಿಗೆ ರೈಲ್ವೇ ನಿಲ್ದಾಣಗಳಲ್ಲಿ ಪ್ರತ್ಯೇಕ ಟಿಕೇಟ್ ಕೌಂಟರ್ ವ್ಯವಸ್ಥೆ ಮಾಡಿಕೊಡಬಹುದೆಂದು ನಿರ್ದೇಸಶಿಸಿದೆ. ಮುಂದಿನ ವಿಚಾರಣೆ ಆಗಸ್ಟ್ ೨೩ ರಂದು ನಡೆಯಲಿದೆ.

Exit mobile version