ಬೆಡ್ ಟೀ ಕುಡಿಯುತ್ತಿದ್ದೀರಾ? ಹಾಗಾದರೆ ಈ ಸ್ಟೋರಿ ನೋಡಿ..

ನಮಗೆಲ್ಲಾ ಚಹಾವು ಕೇವಲ ಪಾನೀಯವಲ್ಲ ಅದು ಒಂಥರ ಭಾವನೆಯಾಗಿದೆ. ದಿನವು ಚಹಾದೊಂದಿಗೆ ಪ್ರಾರಂಭವಾಗಿ, ದಿನ ಮುಗಿಯುವುದು ಸಹ ಚಹಾ ಕುಡಿದ ಮೇಲೆಯೇ. ಕುಟುಂಬದೊಂದಿಗೆ ಆಗಿರಲಿ ಅಥವಾ ಸ್ನೇಹಿತರೊಂದಿಗೆ ಪಾರ್ಟಿ ಆಗಿರಲಿ, ಜನರು ಚಹಾ ಕುಡಿಯುವ ಅವಕಾಶವನ್ನು ಹುಡುಕುತ್ತಿರುತ್ತಾರೆ. ಟೀಯ ಅನುಕೂಲಗಳು ಸಾಕಷ್ಟಿದ್ದರೂ, ಅದನ್ನು ಸರಿಯಾದ ಸಮಯದಲ್ಲಿ ಕುಡಿಯದಿದ್ದರೆ, ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಹೆಚ್ಚಿನ ಜನರು ಬೆಳಗ್ಗೆ ಎದ್ದ ಕೂಡಲೇ ಚಹಾ ಕುಡಿಯುತ್ತಾರೆ. ಆದರೆ ತಜ್ಞರ ಪ್ರಕಾರ, ಬೆಡ್ ಟೀ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಖಾಲಿ ಹೊಟ್ಟೆಯಲ್ಲಿ ಚಹಾ ನಿಮ್ಮ ಆರೋಗ್ಯವನ್ನು ಹೇಗೆ ಹಾಳುಮಾಡುತ್ತದೆ ಎಂಬುದನ್ನು ತಿಳಿಯಿರಿ.

ಖಾಲಿ ಹೊಟ್ಟೆಯಲ್ಲಿ ಚಹಾ ಸೇವಿಸಿದರೆ ಈ ಸಮಸ್ಯೆಗಳು ಉಂಟಾಗಬಹುದು!:
ಖಾಲಿ ಹೊಟ್ಟೆಯ ಚಹಾವನ್ನು ಕುಡಿಯುವುದರಿಂದ ನಿಮ್ಮ ದೇಹದ ಆಸಿಡ್ ಮತ್ತು ಕ್ಷಾರೀಯ ಸಮತೋಲನವನ್ನು ಹಾನಿಗೊಳ್ಳುತ್ತದೆ, ಇದರಿಂದಾಗಿ ಜೀರ್ಣ ವ್ಯವಸ್ಥೆಗೆ ತೊಂದರೆಯಾಗುತ್ತದೆ. ಜೀರ್ಣ ವ್ಯವಸ್ಥೆಗೆ ತೊಂದರೆಯಾದರೆ ಮುಂದೆ ಸಾಕಷ್ಟು ಸಮಸ್ಯೆಗಳಾಗುತ್ತದೆ.

ಚಹಾ ಮೂತ್ರವರ್ಧಕವಾಗಿದ್ದು, ದೇಹದಿಂದ ನೀರನ್ನು ತೆಗೆದುಹಾಕುತ್ತದೆ. ನಿದ್ರೆಯಿಂದ ಎದ್ದಾಗ, ರಾತ್ರಿಯಿಡೀ ನೀರು ಕುಡಿಯದ ಕಾರಣ, ದೇಹವು ನಿರ್ಜಲೀಕರಣಗೊಳ್ಳುತ್ತದೆ. ಈ ಸಮಯದಲ್ಲಿ ಚಹಾ ಕುಡಿಯುವುದರಿಂದ ಸಮಸ್ಯೆ ಉಂಟಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದರಿಂದ ವಾಯು ಸಮಸ್ಯೆ ಉಂಟಾಗುತ್ತದೆ.

ಹಾಲಿನಲ್ಲಿ ಲ್ಯಾಕ್ಟೋಸ್ ಇರುವುದರಿಂದ ರಾತ್ರಿಯಿಡೀ ಖಾಲಿಯಿದ್ದ ಹೊಟ್ಟೆಗೆ ಲ್ಯಾಕ್ಟೋಸ್ ಸಿಕ್ಕರೆ ಮಲಬದ್ಧತೆ ಮತ್ತು ವಾಯು ಸಮಸ್ಯೆಗಳು ಉಂಟಾಗಬಹುದು.

ಚಹಾದ ಅಡ್ಡಪರಿಣಾಮಗಳನ್ನು ಕಡಿಮೆ ಮಾಡುವ ವಿಧಾನ ಇಲ್ಲಿದೆ:

ಚಹಾ ಇಲ್ಲದೆ ಹಾಸಿಗೆಯಿಂದ ಎದ್ದೇಳಲು ಸಾಧ್ಯವಾಗದಿದ್ದರೆ, ಅದರ ನಷ್ಟವನ್ನು ಕಡಿಮೆ ಮಾಡಲು ನೀವು ಕೆಲವು ವಿಧಾನಗಳನ್ನು ಅಳವಡಿಸಿಕೊಳ್ಳಬಹುದು. ಮೊದಲು ಎದ್ದು ನೀರು ಕುಡಿಯಬೇಕು, ಹಣ್ಣು ತಿನ್ನಬೇಕು. ಇದರ ನಂತರ, ಚಹಾವನ್ನು ಕುಡಿಯಬಹುದು. ಆರಂಭದಲ್ಲಿ ಇದು ಸಮಸ್ಯೆಯಾಗಬಹುದು, ಆದರೆ ಈ ಅಭ್ಯಾಸವನ್ನು ಬದಲಾಯಿಸುವುದು ಅಷ್ಟು ಕಷ್ಟವಲ್ಲ. ಆದ್ದರಿಂದ ಇನ್ನು ಮುಂದಾದರೂ ಖಾಲಿ ಹೊಟ್ಟೆಯಲ್ಲಿ ಅಂದ್ರೆ, ಬೆಳಗ್ಗೆ ಎದ್ದ ತಕ್ಷಣ ಟೀ ಕುಡಿಯುವುದನ್ನು ತಪ್ಪಿಸಿ. ಇದು ನಿಮ್ಮ ಆರೋಗ್ಯಕ್ಕೆ ಎಂದಿಂದಿಗೂ ಹಾನಿಕಾರಕವೇ ಆಗಿರುತ್ತದೆ.

Exit mobile version