“ನರೇಂದ್ರ ಮೋದಿ ಒಬ್ಬ ಮಹಾನ್ ವ್ಯಕ್ತಿ, ಅದ್ಭುತ ಕೆಲಸ ಮಾಡುತ್ತಿದ್ದಾರೆ” : ಡೊನಾಲ್ಡ್ ಟ್ರಂಪ್

Narendra Modi

New Jersey : ಅಮೆರಿಕದ(America) ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರು ಮಾದ್ಯಮವೊಂದಕ್ಕೆ ನೀಡಿದ ವಿಶೇಷ ಸಂದರ್ಶನವೊಂದರಲ್ಲಿ, ಭಾರತದ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಒಬ್ಬ ಮಹಾನ್ವ್ಯಕ್ತಿ, ಅವರು ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ.

ಭಾರತವು ನನಗಿಂತ ಉತ್ತಮ ಸ್ನೇಹಿತನನ್ನು ಹೊಂದಿಲ್ಲ” ಎಂದು ತಿಳಿಸಿದ್ದಾರೆ. ಅಧ್ಯಕ್ಷ ಜೋ ಬಿಡೆನ್(Joe Bidan) ಮತ್ತು ಬರಾಕ್ ಒಬಾಮಾ(Barak Obbama) ಅವರಿಗಿಂತ ಭಾರತದೊಂದಿಗೆ ಉತ್ತಮ ಸಂಬಂಧವನ್ನು ನೀವು ಹೊಂದಿದ್ದೀರಾ? ಎಂಬ ಪ್ರಶ್ನೆಗೆ, ಉತ್ತರಿಸಿದ ಡೊನಾಲ್ಡ್ ಟ್ರಂಪ್, “ನನ್ನ ಮತ್ತು ಭಾರತದ ನಡುವಿನ ಸಂಬಂಧದ ಕುರಿತು ನೀವು ಪ್ರಧಾನಿ ಮೋದಿಯನ್ನು ಕೇಳಬೇಕಾಗುತ್ತದೆ” ಎಂದರು.

ಇದನ್ನೂ ಓದಿ : https://vijayatimes.com/easy-tips-to-get-a-good-sleep/


ಟ್ರಂಪ್ ಅವರು ಭಾರತೀಯ ಸಮುದಾಯದಿಂದ ಹೊಂದಿದ್ದ ಭಾರಿ ಬೆಂಬಲ ಮತ್ತು ಮೋದಿ ಅವರೊಂದಿಗಿನ ಸಂಬಂಧದ ಬಗ್ಗೆ ಮಾತನಾಡಿ, “ನನಗೆ ಭಾರತ ಮತ್ತು ಪ್ರಧಾನಿ ಮೋದಿಯವರೊಂದಿಗೆ ಉತ್ತಮ ಸಂಬಂಧವಿದೆ. ನಾವು ಸ್ನೇಹಿತರಾಗಿದ್ದೇವೆ. ಮೋದಿ ಅವರು ಉತ್ತಮ ವ್ಯಕ್ತಿ ಮತ್ತು ಅದ್ಭುತ ಕೆಲಸ ಮಾಡುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ.

ಇದು ಅವರಿಗೆ ಸಿಕ್ಕಿರುವುದು ಸುಲಭದ ಕೆಲಸವಲ್ಲ. ಹಾಗಾಗಿ ನಾವು ಬಹಳ ಸಮಯದಿಂದ ಒಬ್ಬರಿಗೊಬ್ಬರು ಪರಿಚಿತರು. ಆತ ಒರ್ವ ಒಳ್ಳೆಯ ಮನುಷ್ಯ” ಎಂದು ಅವರು ಹೇಳಿದರು. ಇನ್ನು ಸಾವಿರಾರು ಭಾರತೀಯ ಅಮೇರಿಕನ್ನರು ಭಾಗವಹಿಸಿದ್ದ ಅಮೇರಿಕಾದ ಹೂಸ್ಟನ್ನಲ್ಲಿ ನಡೆದ ಬೃಹತ್ “ಹೌಡಿ, ಮೋದಿ” ರ್ಯಾಲಿಯಲ್ಲಿ ಅಧ್ಯಕ್ಷ ಟ್ರಂಪ್ ಮತ್ತು ಪಿಎಂ ಮೋದಿ ವೇದಿಕೆಯನ್ನು ಹಂಚಿಕೊಂಡಿದ್ದರು.

ಇದನ್ನೂ ಓದಿ : https://vijayatimes.com/bengaluru-it-bt-companies-struggles-due-to-rain/

ಆ ಸಮಾರಂಭದಲ್ಲಿ ಪ್ರಧಾನಿ ಮೋದಿಯವರು “ಅಬ್ಕಿ ಬಾರ್, ಟ್ರಂಪ್ ಸರ್ಕಾರ್” ಎಂದು ಘೋಷಣೆ ಮಾಡಿದ್ದರು. ನಂತರ, ಟ್ರಂಪ್ ಪ್ರಧಾನಿ ಮೋದಿಯವರ ತವರು ರಾಜ್ಯ ಗುಜರಾತ್ಗೆ(Gujarat) ಭೇಟಿ ನೀಡಿ, ಕ್ರಿಕೆಟ್ ಸ್ಟೇಡಿಯಂ ಅನ್ನು ಉದ್ಘಾಟಿಸಿದರು ಮತ್ತು ಜಂಟಿಯಾಗಿ ಮೆಗಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು.

Exit mobile version