ನಿಂಬೆ ಹಣ್ಣನ್ನು ಈ ಆಹಾರಗಳ ಜೊತೆ ಅಪ್ಪಿತಪ್ಪಿಯೂ ಬಳಸಬೇಡಿ..!

Health Benefits of Lemon : ನಿಂಬೆಹಣ್ಣು ಆರೋಗ್ಯಕ್ಕೆ ಒಳ್ಳೆಯದು. ನಿಂಬೆ ಹಣ್ಣಿನಲ್ಲಿ (dont use Lemon with these Foods) ಸಮೃದ್ದವಾಗಿರುವ ವಿಟಮಿನ್ ಸಿ (Vitamin C)

ಅಂಶವು ದೇಹಕ್ಕೆ ಅಗತ್ಯವಾಗಿದೆ. ಆದರೆ ಇದನ್ನು ಕೆಲವು ಆಹಾರಗಳೊಂದಿಗೆ ಸೇವಿಸಬಾರದು. ಹೀಗೆ ಸೇವನೆ ಮಾಡಿದರೆ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಹೀಗಾಗಿ

ಯಾವ ಆಹಾರಗಳನ್ನು ನಿಂಬೆಹಣ್ಣಿನೊಂದಿಗೆ ಸೇವನೆ ಮಾಡಬಾರದು (dont use Lemon with these Foods) ಎಂಬುದರ ವಿವರ ಇಲ್ಲಿದೆ ನೋಡಿ.

ಡೈರಿ ಉತ್ಪನ್ನಗಳು : ನಿಂಬೆ ಹಣ್ಣನ್ನು ಎಂದಿಗೂ ಡೈರಿ (Dairy) ಉತ್ಪನ್ನಗಳೊಂದಿಗೆ ಸೇವನೆ ಮಾಡಬಾರದು. ನಿಂಬೆಯಲ್ಲಿರುವ ಸಿಟ್ರಿಕ್ ಆಮ್ಲವು ಡೈರಿ ಉತ್ಪನ್ನಗಳಲ್ಲಿರುವ ಪ್ರೋಟೀನ್ ಮಟ್ಟದಲ್ಲಿ

ಅಡಚಣೆಯನ್ನು ಉಂಟು ಮಾಡಿ, ತೀವ್ರವಾದ ಎದೆಯುರಿ ಮತ್ತು ಆಮ್ಲೀಯತೆಗೆ ಕಾರಣವಾಗಬಹುದು. ಹೀಗೆ ಪನ್ನಿರ್ (Paneer) ಸೇರಿದಂತೆ ಡೈರಿ ಪದಾರ್ಥಗಳೊಂದಿಗೆ ನಿಂಬೆ ಹಣ್ಣಿನ ರಸವನ್ನು

ಸೇವನೆ ಮಾಡದೇ, ನಿಂಬೆ ಸಿಪ್ಪೆ ಅಥವಾ ನಿಂಬೆ ಸುವಾಸನೆಯ ಸಿರಪ್ (Syrup) ಅನ್ನು ಬಳಸುವುದು ಉತ್ತಮ.

ಪಪ್ಪಾಯಿ : ನಿಂಬೆ ರಸವನ್ನು ಪಪ್ಪಾಯಿ (Papaya) , ಕಿತ್ತಳೆ, ದ್ರಾಕ್ಷಿಹಣ್ಣು ಹೀಗೆ ಯಾವುದೇ ಸಿಟ್ರಸ್ ಹಣ್ಣಿನೊಂದಿಗೆ ಬೆರೆಸಿದಾಗ ಆರೋಗ್ಯಕ್ಕೆ ಹೆಚ್ಚು ಹಾನಿಯನ್ನುಂಟುಮಾಡುತ್ತದೆ. ಏಕೆಂದರೆ ಪಪ್ಪಾಯಿಯು

ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಹೊಂದಿದ್ದು, ನಿಂಬೆಯಂತಹ ವಿಟಮಿನ್ ಸಿ ಸಮೃದ್ಧವಾಗಿರುವ ಹಣ್ಣಿನೊಂದಿಗೆ ಸಂಯೋಜಿಸಿದಾಗ ಆಸಿಡ್ ರಿಫ್ಲಕ್ಸ್, ಆಗಿ ಹೊಟ್ಟೆಯ ಸಮಸ್ಯೆಯನ್ನು ಉಂಟು ಮಾಡುತ್ತದೆ.

ಮಸಾಲೆಯುಕ್ತ ಆಹಾರಗಳು : ನಿಂಬೆ ಹಣ್ಣು ಆಮ್ಲೀಯ ಗುಣವನ್ನು ಹೊಂದಿದ್ದು, ಇದನ್ನು ಮಸಾಲೆಯುಕ್ತ ಆಹಾರದೊಂದಿಗೆ ಬಳಸಿದರೆ, ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಅದೇ ರೀತಿ ಮಸಾಲೆಯುಕ್ತ ಆಹಾರದಲ್ಲಿ ನಿಂಬೆ ಹಣ್ಣಿನ ಬಳಕೆ ಆಹಾರದ ರುಚಿಯನ್ನು ಕೆಡಿಸುತ್ತದೆ.

ಬಿಸಿ ಆಹಾರಗಳಲ್ಲಿ : ನಿಂಬೆ ಹಣ್ಣು ವಿಟಮಿನ್ ಸಿ ಅಂಶವನ್ನು ಹೊಂದಿರುತ್ತದೆ. ಆದರೆ ಬಿಸಿ ಆಹಾರಗಳೊಂದಿಗೆ ನಿಂಬೆ ಹಣ್ಣನ್ನು ಸೇವಿಸಿದರೆ, ವಿಟಮಿನ್ ಸಿ ಶಾಖಕ್ಕೆ ಸುಲಭವಾಗಿ ನಾಶವಾಗುತ್ತದೆ.

ಆದ್ದರಿಂದ, ಇನ್ನೂ ಬಿಸಿಯಾಗಿರುವ ಆಹಾರಕ್ಕೆ ನಿಂಬೆ ರಸವನ್ನು ಸೇರಿಸಿ ಸೇವನೆ ಮಾಡಬಾರದು. ಆಹಾರ ತಣ್ಣಗಾದ ನಂತರ ಅದಕ್ಕೆ ನಿಂಬೆ ಬಳಸಬಹುದು.

ಕೆಂಪು ವೈನ್ : ನಿಂಬೆ ಮತ್ತು ಕೆಂಪು ವೈನ್ (Red Wine) ಅನ್ನು ಎಂದಿಗೂ ಒಟ್ಟಿಗೆ ಕುಡಿಯಬಾರದು. ನಿಂಬೆಯನ್ನು ಕಾಕ್ಟೈಲ್ಗಳು ಮತ್ತು ಬಿಯರ್ಗಳೊಂದಿಗೆ ಬಳಸಲಾಗುತ್ತದೆ. ಆದರೆ

ನಿಂಬೆಹಣ್ಣಿನ ಆಮ್ಲೀಯತೆಯು ಕೆಂಪು ವೈನ್ನಲ್ಲಿರುವ ಟ್ಯಾನಿನ್ಗಳ ಮೇಲೆ ಪರಿಣಾಮ ಬೀರಿ, ವೈನ್ ಕಹಿಯಾಗುವಂತೆ ಮಾಡುತ್ತದೆ.

ಇದನ್ನು ಒದಿ: ತಮಿಳುನಾಡಿಗೆ ನೀರು ಬಿಡಬಾರದು ಎಂಬ ಬೇಡಿಕೆಯು ನಿರಂಕುಶ ಮತ್ತು ಸ್ವಾರ್ಥಿಯಾಗಿದೆ: ನಟ ಚೇತನ್

Exit mobile version