ವಿಶ್ವಾದ್ಯಂತ 300 ಕೋಟಿ ಗಳಿಕೆ ; 2022ರಲ್ಲಿ 300 ಕೋಟಿ ಕ್ಲಬ್‌ ಸೇರಿದ 3ನೇ ಹಿಂದಿ ಚಿತ್ರ ದೃಶ್ಯಂ 2!

Mumbai : ಅಜಯ್ ದೇವಗನ್ ನಟನೆಯ ದೃಶ್ಯಂ 2 (Drishyam 2 Reaches Cr Club) ಈ ವರ್ಷದ ಅಂತ್ಯದೊಳಗೆ ಜಾಗತಿಕ ಮಟ್ಟದಲ್ಲಿ 300 ಕೋಟಿ ರೂ. ಕ್ಲಬ್‌ಗೆ ಪ್ರವೇಶಿಸಿದ ಮೂರನೇ ಬಾಲಿವುಡ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮಂಗಳವಾರದಂದು ವಿಶ್ವಾದ್ಯಂತ ಒಟ್ಟು ಗಳಿಕೆಯಲ್ಲಿ 300 ಕೋಟಿ ರೂ.ಗಳನ್ನು ತಲುಪಿದ್ದು, ಈ ಸುದ್ದಿ ಬಾಲಿವುಡ್ ಮಂದಿಗೆ ಕೊಂಚ ಸುಧಾರಣೆ ನೀಡಿದಂತಾಗಿದೆ.

2015ರಲ್ಲಿ ಬಿಡುಗಡೆಗೊಂಡು ಬ್ಲಾಕ್ ಬಸ್ಟರ್ ಹಿಟ್(Drishyam 2 Reaches Cr Club) ಆಗಿದ್ದ ದೃಶ್ಯಂ ಚಿತ್ರದ ಮುಂದುವರಿದ ಭಾಗ ಮತ್ತು ಅದೇ ಹೆಸರಿನ ಮಲಯಾಳಂ ಚಿತ್ರದ ರಿಮೇಕ್ ಆಗಿರುವ ಈ ಚಿತ್ರವು, ಈ ವರ್ಷದ ಅತ್ಯಂತ ಲಾಭದಾಯಕ ಚಿತ್ರಗಳಲ್ಲಿ ಒಂದಾಗಿದೆ.

ಚಿತ್ರ ವ್ಯಾಪಾರ ಮೂಲಗಳು ನೀಡಿರುವ ಮಾಹಿತಿ ಅನುಸಾರ ತಿಳಿಯುವುದಾದರೆ,

ದೃಶ್ಯಂ 2(Drishyam 2) ಹಿಂದಿ ಚಿತ್ರವು ಪ್ರಸ್ತುತ ವಿಶ್ವಾದ್ಯಂತ 303 ಕೋಟಿ ರೂ. ಗಳಿಕೆಯನ್ನು ಕಂಡಿದೆ.

ಇದು ವರ್ಷದ ಅತಿ ಹೆಚ್ಚು ಗಳಿಕೆಯ ಹಿಂದಿ ಚಲನಚಿತ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ.

ಬಾಲಿವುಡ್ ಚಿತ್ರರಂಗದ ಬ್ರಹ್ಮಾಸ್ತ್ರ (431 ಕೋಟಿ), ದಿ ಕಾಶ್ಮೀರ್ ಫೈಲ್ಸ್ (341 ಕೋಟಿ) ಮತ್ತು ದೃಶ್ಯಂ 2(303 ಕೋಟಿ) 300 ಕೋಟಿ ಕ್ಲಬ್ ಸೇರಿದ ಮೂರು ಚಿತ್ರಗಳಾಗಿವೆ.

ಇದನ್ನೂ ಓದಿ : https://vijayatimes.com/tejasvi-surya-requests-fm/

ದೃಶ್ಯಂ 2 ಚಲನಚಿತ್ರವು ಬಿಡುಗಡೆಯಾದ ಮೊದಲ ವಾರದ ನಂತರವೂ ಗಳಿಕೆಯಲ್ಲಿ ಎಡವದೆ ಇಲ್ಲಿಯವರೆಗು ಮುಂದುವರಿದುಕೊಂಡು ಬಂದಿದ್ದೇ, 300 ಕೋಟಿ ಕ್ಲಬ್ ಸೇರಲು ಸಾಧ್ಯವಾಯಿತು ಎಂಬುದು ಸಿನಿ ಲೆಕ್ಕಾಚಾರ.

ಕಳೆದ ವಾರದಲ್ಲಿ, ದೃಶ್ಯಂ 2 ಭೂಲ್ ಭುಲಿಯಾ 2 ಚಿತ್ರದ 266 ಕೋಟಿ ರೂ. ಗಳಿಕೆಯನ್ನು ಮೀರಿಸಿದೆ.

ಬ್ರಹ್ಮಾಸ್ತ್ರ ಚಿತ್ರದ ಗಳಿಕೆಯನ್ನು ಹಿಂದಿಕ್ಕಿದ ದೃಶ್ಯಂ ೨, ಕಾಶ್ಮೀರ ಫೈಲ್ಸ್ ಸಿನಿಮಾವನ್ನು ಹಿಂದಿಕ್ಕುವಲ್ಲಿ ಸದ್ಯಕ್ಕೆ ಸೋತಿದೆ.

೩೦೦ ಕೋಟಿ ಗಳಿಕೆಯನ್ನು ಕಂಡು ಅದನ್ನು ಮುಂದುವರಿಸಿಕೊಂಡು ಹೋಗುವ ನಿರೀಕ್ಷೆಯಲ್ಲಿದ್ದ ಚಿತ್ರತಂಡಕ್ಕೆ ಸದ್ಯ ಹಾಲಿವುಡ್ ಚಿತ್ರ ಅವತಾರ್ : ದಿ ವೇ ಆಫ್ ವಾಟರ್ ಬಿಡುಗಡೆಯು ಬ್ರೇಕ್ ಹಾಕಲಿದೆ ಎಂಬುದು ಸದ್ಯದ ಲೆಕ್ಕಾಚಾರ!

ಇದನ್ನೂ ಓದಿ : https://vijayatimes.com/food-procedure-for-migrain/

ಅಜಯ್ ದೇವಗನ್, ಟಬು, ಅಕ್ಷಯ್ ಖನ್ನಾ, ಶ್ರಿಯಾ ಶರನ್ ಮತ್ತು ಇಶಿತಾ ದತ್ತಾ ಅಭಿನಯದ ದೃಶ್ಯಂ 2 ಚಿತ್ರವನ್ನು ನಿರ್ದೇಶಕ ಅಭಿಷೇಕ್ ಪಾಠಕ್ ನಿರ್ದೇಶಿಸಿದ್ದಾರೆ.

ಈ ಚಿತ್ರದ ಬಿಡುಗಡೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ್ದ ನಿರ್ದೇಶಕ ಅಭಿಷೇಕ್, ಮಲಯಾಳಂನಲ್ಲಿ ಮೋಹನ್ ಲಾಲ್ ಅವರು ನಟಿಸಿದ್ದ ಆವೃತ್ತಿಗಿಂತ ವಿಭಿನ್ನವಾಗಿ ನಾವು ಚಿತ್ರವನ್ನು ತಯಾರು ಮಾಡಿದ್ದೇವೆ.

ಫ್ರೇಮ್ ಟು ಫ್ರೇಮ್ ರಿಮೇಕ್ ಮಾಡುವುದರಲ್ಲಿ ಅರ್ಥವಿಲ್ಲ. ಹಾಗೆ ಮಾಡಿದರೆ ನಿರ್ದೇಶಕರಾಗಿ ಏನು ಪ್ರಯೋಜನ? ನಮ್ಮ ದೃಷ್ಟಿಯನ್ನು ನಾವು ಪರದೆಯ ಮೇಲೆ ವಿಭಿನ್ನವಾಗಿ ತರಬೇಕು.

ಆ ಬಳಿಕ ಜನರಿಂದ ಉತ್ತರ ಹುಡುಕಬೇಕು. ನಾವು ಮಾಡಿದ್ದು ನಕಲು ಅಥವಾ ಒಪ್ಪುವಂತಿಲ್ಲ ಎಂದರೆ ಜನರು ಆ ಅಂಶದ ಬಗ್ಗೆ ಮಾತನಾಡುತ್ತಾರೆ.

https://fb.watch/hps_vRXX6z/ Dangerous Tea! ಡೆಡ್ಲಿ ಟೀ ! ಆರೋಗ್ಯಕ್ಕೆ ಬಹಳ ಕೆಟ್ಟದು ಟೀ, ಕಾಫಿ.

ಆ ಸಂಗತಿ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಆ ಮೂಲಕ ಸಿನಿಮಾ ಸೋಲನ್ನು ಕಾಣುತ್ತದೆ ಜೊತೆಗೆ ನಮಗೂ ಕೂಡ ವಿಭಿನ್ನವಾಗಿ, ವಿಶೇಷವಾಗಿ, ಹೊಸತನದಿಂದ ಮಾಡಬೇಕು ಎಂಬುದು ಅರ್ಥವಾಗುತ್ತದೆ.

ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಿನಿಮಾವನ್ನು ರೂಪಿಸಿ, ಬಿಡುಗಡೆಗೊಳಿಸಿದ್ದೇವೆ ಎಂದು ಅಭಿಷೇಕ್ ಹೇಳಿದ್ದಾರೆ.

Exit mobile version