ರೋಹಿಣಿ ಸಿಂಧೂರಿ ಕುರಿತ ಸ್ಪೋಟಕ ಮಾಹಿತಿಗಳನ್ನು ಬಿಚ್ಚಿಟ್ಟ ಡಿ.ರೂಪಾ

Karnataka: ರಾಜ್ಯದಲ್ಲಿ ಐಎಎಸ್‌ ಮತ್ತು ಐಪಿಎಸ್‌ ಮಹಿಳಾ ಅಧಿಕಾರಿಗಳ ಜಗಳ ಇದೀಗ ವಿವಾದದ ಸ್ವರೂಪ ಪಡೆದುಕೊಂಡಿದೆ.  ಹಿರಿಯ ಮಹಿಳಾ ಐಪಿಎಸ್‌ ಅಧಿಕಾರಿ ಡಿ.ರೂಪಾ(DRoopa vs Rohini Sindhuri) ಅವರು,

ರೋಹಿಣಿ ಸಿಂಧೂರಿ(IAS Rohini Sindhuri) ವಿರುದ್ದ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಕುರಿತು ಸಾಮಾಜಿಕ ಮಾದ್ಯಮದಲ್ಲಿ(Social Media) ಡಿ.ರೂಪಾ ಅವರು  ಕೆಲ ಸ್ಪೋಟಕ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ.  ಅದರ ವಿವರ ಹೀಗಿದೆ.

ಡಿಸಿ ಆಗಿ ಮಾಡಿದ ಕರ್ತವ್ಯಕ್ಕೆ ಎಂಎಲ್ಎ ಸಾ.ರಾ.ಮಹೇಶ್ (DRoopa vs Rohini Sindhuri)ಅವರ ಬಳಿ ಸಂಧಾನಕ್ಕೆ ಹೋಗುವ ವಿಷಯವೇ ಸೇವಾ ನಿಯಮ ಉಲ್ಲಂಘನೆ. ಇದಕ್ಕೆ ರೋಹಿಣಿ ಸಿಂಧೂರಿ ಗೆ ಶಿಕ್ಷೆ ಆಗುತ್ತದೆಯೇ.

ಸಂಧಾನಕ್ಕೆ ಹೋಗಿದ್ದ ಬಗ್ಗೆ ಮಾನ್ಯ ಎಂಎಲ್ಎ ಅವರು ಅಸೆಂಬ್ಲಿಯ ಲ್ಲಿ ಕೂಡ ಹೇಳಿದ್ದಾರೆ. ಡಿಸಿ ಮೈಸೂರು ಮನೆಯಲ್ಲಿ, ಹೆರಿಟೇಜ್ ಬಿಲ್ಡಿಂಗ್ ನಲ್ಲಿ ಅದೂ ಕೊರೋನಾ ಟೈಂ ನಲ್ಲಿ ಸಾರ್ವಜನಿಕ ಹಣದಲ್ಲಿ ಸ್ವಿಮ್ಮಿಂಗ್ ಪೂಲ್

ಕಟ್ಟಿಸಿದ್ದು ತಪ್ಪು ಎಂದು ಪೂರ್ವಭಾವಿ ವಿಚಾರಣೆಯಲ್ಲಿ ಸಾಬೀತು ಮಾಡಿದ್ದಾರೆ ಅಧಿಕಾರಿ ರವಿಶಂಕರ್ ಐಎಎಸ್(Ravishankar IAS). ಇದರ ಮೇಲೆ ರೋಹಿಣಿ ಗೆ ಶಿಕ್ಷೆ ಆಗುತ್ತದೆಯೆ?. ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಯಾವ ರಾಜಕೀಯ ಪಕ್ಷಕ್ಕೆ ನೀವು ಸೇರ್ಪಡೆಯಾಗುತ್ತೀರಿ ಎಂಬ ಪ್ರಶ್ನೆಗೆ ಕಿಚ್ಚ ಸುದೀಪ್‌ ಕೊಟ್ಟ ಉತ್ತರ ಹೀಗಿದೆ!

ಇನ್ನೊಂದು ಬರಹದಲ್ಲಿ, ಡಿಕೆ ರವಿ(D.K Ravi) ಸತ್ತದ್ದು ಮೆಂಟಲ್‌ ಇಲ್‌ನೆಸ್‌ ಇಂದ ಅಂತ. ರವಿಯನ್ನು ಇಷ್ಟು ನಿಕೃಷ್ಟವಾಗಿ ಹೀಯಾಲಿಸಿದರೆ? ನನ್ನ ಪ್ರಶ್ನೆ ಇಷ್ಟೇ…ರೋಹಿಣಿ ಸಿಂಧೂರಿ ಯಾಕೆ ರವಿಯನ್ನು ಬ್ಲಾಕ್ ಮಾಡಲಿಲ್ಲ.

ಅವರಿಬ್ಬರ ಪ್ರೇಮ ಸಲ್ಲಾಪ ಸಿಬಿಐ(CBI) ಕೊಟ್ಟ ಫೈನಲ್ ರಿಪೋರ್ಟ್ ನಲ್ಲಿ ಎಲ್ಲರ ಕೈ ಸೇರಿದೆ. ಒಬ್ಬ ಪುರುಷ ಎಲ್ಲೆ ಮೀರಿ ನಡೆದಾಗ ಈಕೆ ಜವಾಬ್ದಾರಿಯುತ ಹೆಣ್ಣು ಮಗಳಾಗಿ ಯಾಕೆ ಬ್ಲಾಕ್ ಮಾಡಲಿಲ್ಲ. ಅಂದರೆ ಉತ್ತೇಜನ ಕೊಟ್ಟಂತೆ ಅಲ್ಲವೇ?

ಅದೇ ರೀತಿ  ಐಎಎಸ್ ಅಧಿಕಾರಿಗಳಿಗೆ ಕಳಿಸಿದ ಆ ರೀತಿಯ ಚಿತ್ರಗಳು ಉತ್ತೇಜನ ಕೊಡುವುದು ಎಂದು ಅರ್ಥ ಆಗುವುದಿಲ್ಲವೇ?   ಎಂದು ಪ್ರಶ್ನಿಸಿದ್ದಾರೆ.

ಅದೇ ರೀತಿ ಈ ರೀತಿಯ ಪಿಕ್ಚರ್ಸ್ normal ಅನ್ನಿಸಬಹುದು. ಆದರೆ, ಒಬ್ಬ ಮಹಿಳಾ ಐಎಎಸ್ (IAS) ಅಧಿಕಾರಿ ಒಂದಲ್ಲ, ಎರಡಲ್ಲ ಮೂರು ಐಎಎಸ್ ಪುರುಷ ಅಧಿಕಾರಿಗಳಿಗೆ ಆಗಾಗ ಇವುಗಳನ್ನು ಹಾಗೂ ಈ ರೀತಿಯ ಅನೇಕ

ಪಿಕ್ಸ್ ಗಳ ಒನ್‌ ಟು ಒನ್‌ ಕಳಿಸ್ತಾರೆ ಅಂದ್ರೆ ಅದಕ್ಕೆ ಏನರ್ಥ? ಇದು ಆಕೆಯ ಪ್ರೈವೇಟ್‌ ವಿಷಯ ಆಗುವುದಿಲ್ಲ ಐಎಎಸ್ ಸರ್ವಿಸ್‌ ಕಂಡಕ್ಟ್‌ ರೂಲ್ಸ್‌ ಪ್ರಕಾರ ಅಪರಾಧ. ಈ ಪಿಕ್ಸ್ ಗಳ ನೈಜತೆ ಬಗ್ಗೆ ಯಾವುದೇ ತನಿಖಾ

ಸಂಸ್ಥೆ ಕೂಡಾ ಇನ್‌ವೆಸ್ಟಿಗೆಟ್‌ ಮಾಡಬಹುದು. ಸಲೂನ್ ಚಿತ್ರ, ತಲೆದಿಂಬು ಇಟ್ಟು ಮಲಗಿ ತೆಗೆದಿರುವ ಚಿತ್ರ ನಾರ್ಮಲ್‌ ಅನ್ನಿಸಬಹುದು ಕೆಲವರಿಗೆ. ಕಳಿಸಿರುವ ಸನ್ನಿವೇಶ ಸ್ಪೀಕ್‌ ಅದರ್‌ವೈಸ್‌ ಎಂದು ಆರೋಪ ಮಾಡಿದ್ದಾರೆ.

Exit mobile version