ಬರದ ಛಾಯೆ : ರಾಜ್ಯಾದ್ಯಂತ ಕೈಕೊಟ್ಟ ಮುಂಗಾರು ,ಆಗಸ್ಟ್‌ನಲ್ಲಿಯೇ ಸುಡು ಬಿಸಿಲ ಅನುಭವ

Karnataka: ನಾಡಲ್ಲಿ ಮಳೆ ಬೀಳುವ ಸಮಯದಲ್ಲಿ ಮಳೆ ಇಲ್ಲದೆ ಬೆಳೆಗಳು ಒಣಗುತ್ತಿದ್ದು, ಜಾನುವಾರುಗಳಿಗೆ ಮೇವಿನ (drought in Karnataka) ಕೊರತೆ ಉಂಟಾಗಿದೆ.

ಇದೆ ರೀತಿಯ ಪರಿಸ್ಥಿತಿ ಹೀಗೇ ಮುಂದುವರಿದರೆ ಕೃಷಿ ಉತ್ಪನ್ನಗಳ ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಉಂಟುಮಾಡುವ ಅಪಾಯ ಎದುರಾಗಲಿದೆ. ಆಗಸ್ಟ್ ತಿಂಗಳಲ್ಲಿ

ರಾಜ್ಯಾದ್ಯಂತ ಉತ್ತಮ ಮಳೆಯಾಗಬೇಕಿದ್ದು, ಬಿರು ಬೇಸಿಗೆಯ ಅನುಭವ ಆಗುತ್ತಿದೆ. ಇನ್ನು ಅತಿಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿಯೇ ಈ ಬಾರಿ ಮಳೆ ಕೊರತೆ ಉಂಟಾಗಿದೆ.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಬರದ ಛಾಯೆ ಆವರಿಸಿದ್ದು, ಬಿತ್ತನೆ ಮಾಡಿರುವಂತಹ ಬೀಜ ಮೊಳಕೆಯೊಡೆದಿಲ್ಲ. ಸ್ವಲ್ಪ ಬೇಗ ಬಿತ್ತನೆ ಮಾಡಿದ ಹೊಲ,

ಗದ್ದೆಗಳಲ್ಲಿಅಲ್ಪಸ್ವಲ್ಪ ಬೆಳೆ ಬಂದಿದ್ದರು ಈಗ ಸೊರಗಿದಂತಿದೆ. ಇದರಿಂದ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಕೃಷಿ ಉತ್ಪನ್ನಗಳ ಉತ್ಪಾದನೆ ಮೇಲೆ ಭಾರಿ

ಪರಿಣಾಮ ಉಂಟು ಮಾಡುವ ಅಪಾಯ (drought in Karnataka) ಎದುರಾಗಿದೆ.

ಮುಂಗಾರು ಮಳೆ ಜೂನ್‌ನಲ್ಲಿ (June) ತಡವಾಗಿ ಆರಂಭಗಿದ್ದು, ನಂತರ ಮಳೆ ಬಂದರೂ ಕೃಷಿ ಚಟುವಟಿಕೆಗಳಿಗೆ ಬೇಕಾಗುವಷ್ಟು ಮಳೆಯಾಗಲಿಲ್ಲ. ಈಗ ಸುಮಾರು ಒಂದೂವರೆ ತಿಂಗಳಿಂದ ಹಲವೆಡೆ

ಒಂದು ಹನಿಯೂ ಮಳೆ ಬಾರದೆ ಬೆಳೆ ಎಲ್ಲವೂ ಒಣಗುತ್ತಿದೆ. ಇನ್ನು ಕೆಲವರು ಮಳೆಯಿಲ್ಲದೆ ಬಿತ್ತನೆಯನ್ನೂ ಮಾಡಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ನೂರಕ್ಕಿಂತ ಹೆಚ್ಚು ತಾಲೂಕುಗಳಲ್ಲಿ ತೀವ್ರ ಮಳೆಯ

ಕೊರತೆ ಉಂಟಾಗಿದ್ದು, ಈಗ ಅತಿಯಾದ ಸುಡು ಬಿಸಿಲಿನಿಂದಾಗಿ ಬೇಸಿಗೆಯಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಲ್ಪ ಸ್ವಲ್ಪ ಬಂದಿರುವ ಬೆಳೆಯೂ ಒಣಗಿದೆ.

ಬರದ ಛಾಯೆ : ರಾಜ್ಯಾದ್ಯಂತ ಕೈಕೊಟ್ಟ ಮುಂಗಾರು ,ಆಗಸ್ಟ್‌ನಲ್ಲಿಯೇ ಸುಡು ಬಿಸಿಲ ಅನುಭವ

ಕಂದಾಯ ಇಲಾಖೆಯ ನೇತೃತ್ವದಲ್ಲಿ ರಾಜ್ಯದ ಬರ ಪೀಡಿತ ಜಿಲ್ಲೆಗಳ ಕುರಿತು ಅಲ್ಲಿನ ಬೆಳೆ, ವಾತಾವರಣದ ಆಧಾರದ ಮೇಲೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಸಮೀಕ್ಷೆ ನಡೆಸುತ್ತಿದ್ದು,

ಮುಂದಿನ ವಾರದಲ್ಲಿಇದರ ಅಂತಿಮ ವರದಿ ಸಿದ್ಧವಾಗಲಿದೆ. ಈ ಸಲ ಶೇ.80ರಷ್ಟು ಬಿತ್ತನೆಯಾಗಿದ್ದು, ಅದರಲ್ಲಿ ಶೇ.40ರಷ್ಟು ಬೆಳೆ ಮೊಳಕೆಯೊಡೆಯುವ ಮೊದಲೇ ಹಾಳಾಗಿದೆ.

ಇನ್ನುಳಿದ ಶೇ.40 ರಲ್ಲಿ ಅಲ್ಪಸ್ವಲ್ಪ ಬೆಳೆ ಬಂದಿದೆ. ಅದು ಕೂಡ ಈಗ ಅತಿಯಾದ ಸುಡು ಬಿಸಿಲಿನಿಂದ ಒಣಗಿದೆ. ಹಾಗಾಗಿ ಈ ಬಾರಿ ಕೃಷಿ ಉತ್ಪನ್ನಗಳ ಉತ್ಪಾದನೆ ಗಣನೀಯವಾಗಿ ಕುಂಠಿತವಾಗಲಿದ್ದು,

ಅತಿ ಹೆಚ್ಚು ಮಳೆ ಬೀಳುವ ಜಿಲ್ಲೆಗಳಾದ ಉತ್ತರ ಕನ್ನಡ (Uttara Kannada), ಕೊಡಗು, ಶಿವಮೊಗ್ಗ (Shivamogga), ಚಿಕ್ಕಮಗಳೂರು ಜಿಲ್ಲೆಗಳಲ್ಲೇ ಈ ಬಾರಿ ಮಳೆಯ ಕೊರತೆಯಾಗಿರುವದು

ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ಜಿಲ್ಲೆಗಳಲ್ಲಿ ಮಳೆ ಕೊರತೆ
ಚಿಕ್ಕಬಳ್ಳಾಪುರ – ಶೇ. 42
ರಾಮನಗರ- ಶೇ 45
ಕೊಡಗು- ಶೇ 46
ಚಿಕ್ಕಮಗಳೂರು -43
ಮಲೆನಾಡು- ಶೇ 41
ಬಳ್ಳಾರಿ- ಶೇ 42

ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ (N. Cheluvarayaswamy) ಅವರು ಬರ ಸಮೀಕ್ಷಾ ವರದಿಯನ್ನು ಸೆಪ್ಟೆಂಬರ್‌ (September) ಮೊದಲ ವಾರದಲ್ಲಿ ಬಿಡುಗಡೆ ಮಾಡಲಿದ್ದು,

ನಿಗದಿತ ಮಾನದಂಡಗಳ ಆಧಾರದ ಮೇಲೆ ತಯಾರಿಸಿದ ಬರ ಸಮೀಕ್ಷೆಯನ್ನು ಪ್ರಮಾಣೀಕರಿಸಿ ಅಂತಿಮಗೊಳಿಸಲಾಗುವುದು. ಸಮೀಕ್ಷಾ ವರದಿಯ ನಂತರವೇ ನಷ್ಟ, ಉತ್ಪಾದನೆಯ ಬಗ್ಗೆ

ನಿಖರವಾಗಿ ಹೇಳಬಹುದು ಎಂದು ತಿಳಿಸಿದ್ದಾರೆ.

Exit mobile version